ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದ ಹೆಚ್ಚಿಸುವ ಆ್ಯಂಟಿಕ್ ಆಭರಣ

Last Updated 12 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಕೊರಳನ್ನಪ್ಪುವ ದೊಡ್ಡದಾದ ಲಕ್ಷ್ಮಿ ಪದಕವಿರುವ ನೆಕ್ಲೇಸ್‌, ದಪ್ಪ ಮಣಿಗಳಿರುವ ಗಣೇಶನ ವಿಗ್ರಹದ ಪದಕವಿರುವ ಹಾರ, ಅಗಲವಾದ ಬಳೆಗಳ ಮೇಲೆ ಮುತ್ತಿನ ಮಣಿಗಳ ಜೋಡಣೆ.. ಹೀಗೆ ನೋಡಿದ ತಕ್ಷಣ ಕಣ್ಮನ ಸೆಳೆಯುವ ಚಿನ್ನದ ಆ್ಯಂಟಿಕ್ ಆಭರಣಗಳು ಇಂದಿನ ಟ್ರೆಂಡ್‌.

ನೋಡಲು ಹಳೆಯ ಒಡವೆಯಂತೆ ಕಂಡರೂ ವಿನ್ಯಾಸದ ಮೂಲಕವೇ ಗಮನ ಸೆಳೆಯುವ ಆ್ಯಂಟಿಕ್ ಆಭರಣಗಳು ಈಗಿನ ಯುವತಿಯರಿಗೆ ಅಚ್ಚುಮೆಚ್ಚು. ಮೋಹಕ ವಿನ್ಯಾಸದ ಆ್ಯಂಟಿಕ್ ಆಭರಣಗಳು ಸಾಂಪ್ರದಾಯಿಕ ನೋಟ ನೀಡುತ್ತವೆ. ಅದರಲ್ಲೂ ಮದುವೆ– ಮುಂಜಿಯಂತಹ ಕಾರ್ಯಕ್ರಮಗಳಿಗೆ ಆ್ಯಂಟಿಕ್ ಆಭರಣಗಳನ್ನು ಹೆಚ್ಚಾಗಿ ಖರೀದಿಸಲಾಗುತ್ತಿದೆ.

ಆ್ಯಂಟಿಕ್‌ ಆಭರಣಗಳಿಗೆ ಕೆಂಪುಮಿಶ್ರಿತ ಪಾಲಿಶ್‌ ನೀಡುವುದು, ಆಭರಣಗಳ ಮೇಲೆ ಅಲ್ಲಲ್ಲಿ ಮಾಣಿಕ್ಯ, ಪಚ್ಚೆಯಂತಹ ಅಮೂಲ್ಯ ಹರಳುಗಳನ್ನು ಜೋಡಿಸುವುದು ಈಗ ಟ್ರೆಂಡ್‌ನಲ್ಲಿದೆ. ಮದುವೆಯಂತಹ ಶುಭ ಸಮಾರಂಭಗಳಿಗೆ ಆಧುನಿಕ ವಿನ್ಯಾಸದ ಒಡವೆಗಿಂತ ಆ್ಯಂಟಿಕ್ ಆಭರಣಕ್ಕೆ ಬೇಡಿಕೆಯೂ ಹೆಚ್ಚಿದೆ ಎನ್ನುವುದು ಅಭರಣ ಮಾರಾಟಗಾರರ ಅಭಿಪ್ರಾಯ.

ಹಿಂದೆಲ್ಲಾ ಸರ, ಬಳೆಗಷ್ಟೇ ಸೀಮಿತವಾಗಿದ್ದ ಈ ವಿನ್ಯಾಸ ಈಗ ಕಿವಿಯೋಲೆ, ಸೊಂಟದ ಪಟ್ಟಿ, ಬೈತಲೆ ಬೊಟ್ಟು ಹೀಗೆ ಬಹುತೇಕ ಎಲ್ಲಾ ಬಗೆಯ ಒಡವೆಗಳಲ್ಲೂ ಕಂಡು ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT