ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಷನ್: ಎಲ್ಲ ಮೊಗಕ್ಕೂ ಹೊಂದುವ ಕ್ಲಾಸಿಕ್‌ ಐಬ್ರೋ

Last Updated 7 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಹೂವಿನ ಎಸಳಿನಂತಹ ಹುಬ್ಬು ಎಂದು ಹಿಂದೆಲ್ಲಾ ಹೆಣ್ಣಿನ ಅಂದ ಹೊಗಳಲು ಬಳಸುತ್ತಿದ್ದ ರೂಪಕವದು. ತಿದ್ದಿ, ತೀಡಿದ ಹುಬ್ಬುಗಳು ಮುಖದ ಅಂದ ಹೆಚ್ಚಿಸುವುದರೊಂದಿಗೆ ಕಣ್ಣಿನ ರಕ್ಷಾ ಕವಚ ಕೂಡ ಹೌದು. ಹುಬ್ಬು ದಟ್ಟವಾಗಿದ್ದಷ್ಟು ಮೊಗದೇ ಅಂದವೇ ಬೇರೆ. ಇದೀಗ ಮೊಗದ ಆಕಾರಕ್ಕೆ ಅನುಗುಣವಾಗಿ, ಹುಬ್ಬಿನ ಕೂದಲುಗಳ ದಟ್ಟತೆ ಅಂಶಗಳನ್ನು ಪರಿಗಣಿಸಿ ಅವರ ಫ್ಯಾಷನ್ ಸೂತ್ರದನುಸಾರ ಶೇಪ್ ನೀಡಲಾಗುತ್ತಿದೆ. ಒಂದು ದಾರದ ಎಳೆಯಿಂದ ನಾನಾ ಆಕಾರ ಪಡೆದುಕೊಳ್ಳುವ ಹುಬ್ಬುಗಳಲ್ಲಿ ಕ್ಲಾಸಿಕ್ ಐಬ್ರೋಗಳು ಮಾತ್ರ ಎಲ್ಲಾ ವಯಸ್ಸಿನ ಮತ್ತು ಎಲ್ಲಾ ಮೊಗಕ್ಕೂ ಹೊಂದುತ್ತದೆ.

ಕ್ಲಾಸಿಕ್ ಐಬ್ರೋಗಳು ಇದೀಗ ಹೆಚ್ಚು ಟ್ರೆಂಡಿಂಗ್ ನಲ್ಲಿದ್ದು, ಇದರಲ್ಲಿ ಟೈಲ್ ಆರ್ಚ್, ಸೆಂಟರ್ ಆರ್ಚ್, ಹೈ ಆರ್ಚ್, ಮಿನಿಮಲ್ ಆರ್ಚ್, ನೇರ ಬ್ರೋಸ್, ಟೇಪರ್ಡ್ ಬ್ರೋಸ್, ರೌಂಡೆಡ್ ಬ್ರೋಸ್, ಶಾರ್ಟ್ ಆಂಡ್ ಥಿಕ್, ಎಸ್ ಆಕಾರದ ಬ್ರೋಸ್ ಇವು ಹೆಚ್ಚು ಜನಪ್ರಿಯಗೊಂಡಿದೆ. ಇದಲ್ಲದೇ ಫೆದರ್ಡ್ ಬ್ರೋಸ್ ಕೂಡ ಒಂದು ಮಟ್ಟಿಗೆ ಫೇಮಸ್ ಶೇಪ್. ಇದು 2020ರಲ್ಲಿ ಹೆಚ್ಚು ಜನರ ಬೇಡಿಕೆಯ ಐಬ್ರೋಸ್.

ಸಿನಿ ನಟಿಯರು ಕೂಡ ಕ್ಲಾಸಿಕ್ ಬ್ರೋಸ್ ನಲ್ಲಿಯೇ ತಮಗೆ ಬೇಕಾದ ಸ್ಟ್ರೈಲ್ ಅನ್ನು ಆರಿಸಿಕೊಳ್ಳುತ್ತಾರೆ. ಟಾಲಿವುಡ್ ನಟಿ ಸಮಂತಾ ನೇರ ಬ್ರೋಸ್ ಗೆ ಮೊರೆ ಹೋದರೆ, ಇನ್ನು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರದ್ದು, ಟೇಪರ್ಡ್ ಬ್ರೋಸ್. ಇನ್ನು ತಮನ್ನಾ ಅವರಿಗೆ ಮಿನಿಮಲ್ ಆರ್ಚ್ ಅವರ ಮೊಗಕ್ಕೆ ಒಗ್ಗುವ ಆಕಾರ. ಇನ್ನು ಎಲೆ, ಶೂ, ನವಿಲು ಗೆರೆ, ಹಾಕಿ ಬ್ಯಾಟ್ ರೂಪದಲ್ಲಿಯೂ ಐಬ್ರೋಸ್ ಮಾಡಿಸಿಕೊಳ್ಳುವವರೂ ಇದ್ದಾರೆ ಅನ್ನಿ.

ಕೆಲವರಿಗೆ ಐಬ್ರೋ ಇರುವುದಿಲ್ಲ ಮತ್ತು ತೀರಾ ಕಡಿಮೆ ಇರುತ್ತದೆ. ಇನ್ನು ಕೆಲವರಿಗೆ ಯಾವಾಗಲೂ ಐಬ್ರೋಸ್ ಆಕಾರ ಕೊಡಿಸಿಕೊಳ್ಳುವುದು ಕಿರಿಕಿರಿ. ಇಂತಹವರಿಗಾಗಿಯೇ ಐಬ್ರೋಸ್ ಲ್ಯಾಮಿನೇಶನ್ ಕೂಡ ಟ್ರೆಂಡಿಂಗ್ ನಲ್ಲಿದೆ. ಇದನ್ನು ಮಾಡಿಸಿಕೊಂಡರೆ ಆರರಿಂದ ಎಂಟು ವಾರಗಳವರೆಗೆ ಐಬ್ರೋಸ್ ಹಾಳಾಗದು ಎನ್ನಲಾಗುತ್ತದೆ. ಜೊತೆಗೆ ಐಬ್ರೋ ಟ್ರಾನ್ಸ್ ಪ್ಲಾಂಟ್ ಶಸ್ತ್ರಚಿಕಿತ್ಸೆಯೂ ಜಾರಿಯಲ್ಲಿದ್ದು, ಇದರ ಮುಖೇನವು ಕೂಡ ನಿಖರ, ಇಷ್ಟವಾದ ಐಬ್ರೋ ಶೇಪ್ ಪಡೆದುಕೊಳ್ಳಬಹುದು. 2022ರಲ್ಲಿ ಬ್ರೋ ಲ್ಯಾಇನೇಶನ್, ಐಬ್ರೋ ಟ್ರಾನ್ಸ್ ಪ್ಲಾಂಟ್ ಜೊತೆಗೆ, ನ್ಯಾಚುರಲ್ ಬ್ರೋ, ಫ್ಲಫಿ ಬ್ರೋ, ಫೆದರ್ ಬ್ರೋಸ್, ಬ್ಲೀಚ್ಡ್ ಬ್ರೋ, ನೇರ ಬ್ರೋ ಹೆಚ್ಚು ಚಾಲ್ತಿಯಲಿದ್ದು, ಹೇರ್ ಕಲರಿಂಗ್ ಜೊತೆಗೆ ಕೂದಲಿನ ಬಣ್ಣಕ್ಕೆ ಅನುಗುಣವಾಗಿ ಐಬ್ರೋಗಳಿಗೂ ಇಷ್ಟವಾದ ಬಣ್ಣ ಹಾಕಿಕೊಂಡು ಮಿಂಚಬಹುದು. ವ್ಯಾಕ್ಸ್‌ನ ಮೂಲಕ ಈಗೀಗ ಐಬ್ರೋ ಶೇಪ್‌ ನೀಡಲಾಗುತ್ತಿದೆ.

ಐಬ್ರೋ ಟಿಂಟ್ ಅಥವಾ ಟಿಂಟಿಂಗ್ (ಐಬ್ರೋ ಕಲರಿಂಗ್) ಕೂಡ ಇದೀಗ ಚಾಲ್ತಿಯಲಿದ್ದು, ಮಾರುಕಟ್ಟೆಯಲ್ಲಿ ಕಲರಿಂಗ್ ಲಭ್ಯವಿದೆ. ಕಂದು, ಗಾಢಕಂದು ಬಣ್ಣ, ಕಪ್ಪು, ನೀಲಿ ಹೀಗೆ ನಾನಾ ಬಣ್ಣಗಳಿಂದ ನಿಮ್ಮ ಐಬ್ರೋಗಳನ್ನು ಕಲರ್ ಫುಲ್ ಮಾಡಿಕೊಳ್ಳಬಹುದು. ಇದನ್ನು ಮನೆಯಲ್ಲೇ ಮಾಡಿಕೊಳ್ಳಬಹುದು. ಇದು ತಾತ್ಕಾಲಿಕವಾಗಿದ್ದು, ಒಮ್ಮೆ ಹಚ್ಚಿದರೆ ಆರರಿಂದ ಸುಮಾರು 2 ವರ್ಷಗಳವರೆಗೆ ಆ ಬಣ್ಣವನ್ನು ಕಾಯ್ದುಕೊಳ್ಳಬಹುದು.

ಯಾವ ಮುಖಕ್ಕೆ ಯಾವ ಐಬ್ರೋ
ವೃತ್ತಕಾರಾದ ಮೊಗದವರಿಗೆ ಸ್ಟ್ರಕ್ಚರ್ಡ್ ಬ್ರೋ ವಿತ್ ಆಂಗಲ್ಡ್ ಆರ್ಚಸ್ ಮತ್ತು ಲಾಂಗರ್ ಎಂಡ್ಸ್, ವೆಲ್ ಬ್ಯಾಲನ್ಸ್ಡ್ ಮತ್ತು ಕಾಂಟೋರ್ಡ್ ಬ್ರೋಸ್, ಮೊಟ್ಟೆಯಾಕಾರದ ಮುಖಗಳಿಗೆ, ಸಾಫ್ಟ್ ರೌಂಡೆಡ್ ಆರ್ಚ್ ಹೃದಯಾಕಾರದ ಮೊಗಗಳಿಗೆ, ಬ್ರೋಸ್ ವಿತ್ ಆಂಗಲ್ಡ್ ಪೀಕ್ ಚೌಕಾಕಾರದ ಮೊಗಗಳಿಗೆ ಶಾರ್ಟರ್ ಬ್ರೋಸ್ ಉದ್ದನೆಯ ಮೊಗದವರಿಗೆ ಲೈನರ್ ಬ್ರೋ ಶೇಪ್ ಡೈಮಂಡ್ ಶೇಪ್ ಮೊಗದವರಿಗೆ ಒಗ್ಗುವ ಐಬ್ರೋ ಆಕಾರಗಳು ಎನ್ನುತ್ತಾರೆ ಸೌಂದರ್ಯ ತಜ್ಞರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT