ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈ ಬಳೆ ಅಂದಕೆ ಹೊಸ ವಿನ್ಯಾಸ...

Last Updated 18 ಸೆಪ್ಟೆಂಬರ್ 2021, 4:37 IST
ಅಕ್ಷರ ಗಾತ್ರ

ಬಟ್ಟೆ, ಒಡವೆಗಳೆಂದರೆ ಹೆಣ್ಣುಮಕ್ಕಳಿಗೆ ಅದೇನೋ ಒಲವು. ಕುತ್ತಿಗೆ ತುಂಬಾ ಹಾರ, ನೆಕ್ಲೇಸ್‌, ಕಿವಿಯೋಲೆ, ಉಂಗುರ, ಬಳೆ ಹೀಗೆ ಮೈಮೇಲೆ ಆಭರಣಗಳನ್ನು ಧರಿಸಿ ಖುಷಿ ಪಡುತ್ತಾರೆ. ಅದರಲ್ಲೂ ಬಳೆಗಳಿಗೂ ಹೆಣ್ಣುಮಕ್ಕಳಿಗೂ ಅವಿನಾಭಾವ ಸಂಬಂಧ. ಹಿಂದಿನಿಂದಲೂ ವಿವಿಧ ವಿನ್ಯಾಸದ ಬಂಗಾರದ ಬಳೆಗಳು ಹೆಣ್ಣುಮಕ್ಕಳ ಕೈಯನ್ನು ಅಲಂಕರಿಸುತ್ತಿದ್ದವು. ಇತ್ತೀಚೆಗೆ ಹೊಸ ಹೊಸ ವಿನ್ಯಾಸ ಹಾಗೂ ಆಕಾರದ ಬಳೆಗಳು ಬಂಗಾರದ ಮಳಿಗೆಗಳಲ್ಲಿ ಮಹಿಳೆಯರನ್ನು ಸೆಳೆಯುತ್ತಿವೆ. ಅವುಗಳಲ್ಲಿ ಲಕ್ಷ್ಮೀ, ಗಣೇಶ, ಗಂಡಭೇರುಂಡ ಹೀಗೆ ದೇವರ ಚಿತ್ತಾರವಿರುವ ವಿನ್ಯಾಸದ ಬಳೆಗಳು ಆಭರಣ ಪ್ರಿಯರನ್ನು ಹೆಚ್ಚು ಸೆಳೆಯುತ್ತಿವೆ.

‘ಸರ, ನೆಕ್ಲೇಸ್‌, ಕಿವಿಯೋಲೆ ಯಾವುದೇ ಇರಲಿ ಬಳೆಗಳ ವಿಷಯಕ್ಕೆ ಬಂದರೆ ಅದಕ್ಕೆ ಅದರದ್ದೇ ಆದ ಬೇಡಿಕೆ ಈಗಲೂ ಇದೆ. ಬಳೆ ಕಾಣಿಸುವ ಥರ ಬೇರೆ ಯಾವುದೂ ಕಾಣಿಸುವುದಿಲ್ಲ. ಜೊತೆಗೆ ಬಳೆಗಳನ್ನು ಧರಿಸಿದಾಗ ಅವುಗಳನ್ನು ಹತ್ತಿರದಿಂದ ನೋಡಬಹುದು. ಹಾಗಾಗಿ ಬಳೆಯ ವಿನ್ಯಾಸ ಚೆನ್ನಾಗಿದ್ದು ಪರಿಪೂರ್ಣವಾಗಿರಬೇಕು’ ಎನ್ನುತ್ತಾರೆ ಶ್ರೀ ಕೃಷ್ಣಯ್ಯ ಚೆಟ್ಟಿ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಸಿ ವಿನೋದ್‌ ಹಯಗ್ರಿವ

ಆ್ಯಂಟಿಕ್‌ನಲ್ಲಿ...

ದೇವರ ಚಿತ್ತಾರದ ಕಿವಿಯೋಲೆ, ನೆಕ್ಲೇಸ್‌ ಹಾಗೂ ಪದಕ ಮೊದಲಿನಿಂದಲೂ ಬಳಕೆಯಲ್ಲಿತ್ತು. 1990 ಹಾಗೂ 2000ರ ಸಮಯದಲ್ಲಿ ಈ ರೀತಿಯ ನೆಕ್ಲೇಸ್‌, ಕಿವಿಯೋಲೆಗಳಿಗೆ ಬೇಡಿಕೆಯೂ ಹೆಚ್ಚಿತ್ತು. ಈಗ ಅದೇ ಟ್ರೆಂಡ್ ಬಳೆಗಳಲ್ಲಿ ಶುರುವಾಗಿದೆ. ಆ್ಯಂಟಿಕ್ ಆಭರಣಗಳು ಬೇಡಿಕೆ ಹೆಚ್ಚಿಸಿಕೊಂಡ ಮೇಲೆ ದೇವರ ಚಿತ್ತಾರದ ಬಳೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಆ್ಯಂಟಿಕ್‌ನಲ್ಲಿ ದೇವರು ಹಾಗೂ ದೇವಿಯ ವಿನ್ಯಾಸದ ಬಳೆಗಳು ಹೆಚ್ಚು ಬೇಡಿಕೆ ಪಡೆದುಕೊಂಡಿವೆ.

ಸರ, ಕಿವಿಯೋಲೆಯೊಂದಿಗೆ..

ಸರ ಅಥವಾ ಕಿವಿಯೋಲೆಗೆ ಹೊಂದುವಂತಹ ಅದೇ ವಿನ್ಯಾಸವಿರುವ ಬಳೆಗಳನ್ನು ಧರಿಸಬಹುದು. ಇದು ಐಷಾರಾಮಿ ನೋಟ ಸಿಗುವಂತೆ ಮಾಡುವುದಲ್ಲದೇ ಅಂದವನ್ನು ಹೆಚ್ಚಿಸುತ್ತದೆ. ವಿವಿಧ ವಿನ್ಯಾಸವಲ್ಲದೇ ಬಣ್ಣ (ಎನಾಮಲ್‌) ದಲ್ಲೂ ಈ ವಿನ್ಯಾಸವನ್ನು ಮಾಡುವುದು ಈಗ ವಿಶೇಷ. ಜೆಮ್‌ ಸ್ಟೋನ್‌ ಒಳಗೆ ಕೆತ್ತನೆ ವಿನ್ಯಾಸವು ಬಳೆಗಳಲ್ಲಿ ಲಭ್ಯವಿದೆ.

ತಂತ್ರಜ್ಞಾನದ ವರ

‘ಬಂಗಾರದಲ್ಲಿ ನಾರ್ಮಲ್ ಅಥವಾ ಹಳದಿ ಚಿನ್ನ, ಆಕ್ಸಿಡೈಜೇಷನ್ ಹೀಗೆ ವಿಧಗಳಿವೆ. ಆಕ್ಸಿಡೈಸ್ಡ್‌ ಮಾಡಿರುವುದು ಹಳೆ ಕಾಲದ ಚಿನ್ನದಂತೆ ಕಾಣಿಸುತ್ತದೆ. ಇದಕ್ಕೆ ‘ಪಟೀನಾ’ ಎಂದೂ ಕರೆಯುಲಾಗುತ್ತದೆ. ಇದು ನೋಡಲು ಡಲ್ ಆಗಿರುತ್ತದೆ. ಆದರೆ ಧರಿಸಿದಾಗ ಐಷಾರಾಮಿ ನೋಟ ಸಿಗುವುದಲ್ಲದೇ ಇದು ಸದ್ಯದ ಟ್ರೆಂಡ್‌ ಕೂಡ ಹೌದು. ಹಿಂದೆಲ್ಲಾ ಕೈಯಲ್ಲೇ ವಿನ್ಯಾಸ ಮಾಡುವ ರೂಢಿ ಇತ್ತು. ಆದರೆ ಈಗ ಕ್ಯಾಡ್‌ (ಕಂಪ್ಯೂಟರ್ ಡಿಸೈನ್‌) ಮೂಲಕ ಚಿತ್ತಾರ ಮಾಡಲಾಗುತ್ತದೆ. ಇದರಲ್ಲಿ 3 ಡಿ ಪ್ರಿಟಿಂಗ್‌ ಕೂಡ ಇದ್ದು ಮಷೀನ್ ಮೂಲಕ ಫಿನಿಶಿಂಗ್ ಮಾಡಲಾಗುತ್ತದೆ. ತಂತ್ರಜ್ಞಾನ ಬಳಸಿಕೊಂಡು ಕೈಯಲ್ಲಿ ಫಿನಿಶಿಂಗ್ ಟಚ್ ಕೊಟ್ಟರೆ ಬಳೆಯ ಅಂದ ಹೆಚ್ಚುತ್ತದೆ’ ಎನ್ನುತ್ತಾರೆ ವಿನೋದ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT