ನವದೆಹಲಿ: 2024ರ ‘ಮಿಸ್ ಯೂನಿವರ್ಸ್ ಇಂಡಿಯಾ’ ಕಿರೀಟ ಗುಜರಾತ್‌ನ ರಿಯಾ ಸಿಂಘಾ ಅವರ ಮುಡಿಗೇರಿದ್ದು, ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಸ್ಪರ್ಧೆಯಲ್ಲಿ ವಿಜೇತರಾಗಿರುವ ಬಗ್ಗೆ ಸುದ್ದಿಸಂಸ್ಥೆ ಎಎನ್‌ಐನೊಂದಿಗೆ ಮಾತನಾಡಿದ ರಿಯಾ, ‘ಇಂದು ನಾನು ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟವನ್ನು ಗೆದ್ದಿದ್ದೇನೆ. ಈ ಮಟ್ಟಕ್ಕೆ ಬರಲು ತುಂಬಾ ಕಷ್ಟಪಟ್ಟಿದ್ದು, ಹಿಂದಿನ ಸ್ಪರ್ಧಿಗಳಿಂದ ಸ್ಫೂರ್ತಿ ಪಡೆದಿದ್ದೇನೆ’ ಎಂದು ಹೇಳಿದರು.
ನಟಿ ಮತ್ತು ಮಾಡೆಲ್ ಆಗಿರುವ ರಿಯಾ, ತಮ್ಮ 16ನೇ ವಯಸ್ಸಿನಲ್ಲಿಯೇ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಮಿಸ್ ಟೀನ್ ಗುಜರಾತ್, ಮಿಸ್ ಟೀನ್ ಏಷ್ಯಾ, ಮಿಸ್ ಟೀನ್ ಅರ್ಥ್ ಹಲವು ಸೌಂದರ್ಯ ಸ್ಪರ್ಧೆಗಳಲ್ಲಿಯೂ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.