ಮುಂಬೈ: ಕಳೆದ ಒಂದು ವಾರದಿಂದ ಹೊಸದೊಂದು ಟ್ರೆಂಡ್ ಫ್ಯಾಷನ್ ಜಗತ್ತಿನಲ್ಲಿ ಸದ್ದು ಮಾಡುತ್ತಿದೆ. ಬಾಲಿವುಡ್ ನಟಿಯರು, ಪ್ರಮುಖ ಪಾಪ್ ಗಾಯಕಿಯರೂ ವಿಚಿತ್ರವೆನಿಸುವ ಈ ಟ್ರೆಂಡ್ನ ಭಾಗವಾಗಿದ್ದಾರೆ.

‘ಎಕ್ಸ್ಪೋಸ್ಟ್ ಬ್ರಾ ಬ್ರಿಗೇಡ್’ ಎಂಬ ಅಭಿಯಾನ ಜಾಗತಿಕ ಮಟ್ಟದಲ್ಲಿ ಆರಂಭಗೊಂಡಿದೆ. ಇದರಲ್ಲಿ ಬ್ರಾವನ್ನು ಬಹಿರಂಗವಾಗಿ ತೊಟ್ಟು, ಹೆಣ್ತವನ್ನು ಸಂಭ್ರಮಿಸುತ್ತಿದ್ದಾರೆ. ಇದರಲ್ಲಿ ಬಾಲಿವುಡ್ನ ಕೆಲವರೂ ಭಾಗಿಯಾಗಿ ಸದ್ದು ಮಾಡುತ್ತಿದ್ದಾರೆ.

2025ರ ವಸಂತ ಋತುವಿನ ಫ್ಯಾಷನ್ನಲ್ಲಿ ಮ್ಯು ಮ್ಯು ಬ್ರಾಂಡ್ನ ಆರಂಭೋತ್ಸವದಲ್ಲಿ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಅವರು ಒಳ ಉಡುಪನ್ನೇ ಹೊರ ಉಡುಪಾಗಿ ತೊಟ್ಟು ನೋಡುಗರ ಹುಬ್ಬೇರಿಸಿದ್ದರು. ಲಾಂಜರಿಯನ್ನು ಬಹಿರಂಗವಾಗಿ ತೊಡುವ ಟ್ರೆಂಡ್ಗೆ ಸಾಥ್ ನೀಡಿದ್ದು ಸುದ್ದಿಯಾಗಿತ್ತು.

ಕಪ್ಪು ವರ್ಣದ ಬಕೆಟ್ ಹ್ಯಾಟ್ ತೊಟ್ಟಿದ್ದ ಜಾಹ್ನವಿ, ಕಾಲು ತುಂಬಾ ಸಾಕ್ಸ್ ತೊಟ್ಟಿದ್ದರು. ಮೇರಿ ಜೇನ್ ಶೂಗಳನ್ನು ತೊಟ್ಟಿದ್ದನ್ನು ಅವರ ಸ್ಟೈಲಿಸ್ಟ್ ರೇಹಾ ಕಪೂರ್ ವಿವರಿಸಿದ್ದಾರೆ.

ಮತ್ತೊಂದೆಡೆ ಪಾಪ್ ಗಾಯಕಿ ನೇಹಾ ಕಕ್ಕರ್ ಕೂಡಾ ಹೊರ ಉಡುಪಾಗಿ ಬ್ರಾ ತೊಟ್ಟು ನೆಟ್ಟಿಗರ ಬಿಸಿ ಏರಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಕೆಲ ಚಿತ್ರಗಳನ್ನು ಹಂಚಿಕೊಂಡಿರುವ ನೇಹಾ, ಬಿಳಿ ಶರ್ಟ್ ಮೇಲೆ ತಿಳಿ ನೀಲಿ ಬಣ್ಣದ ಬ್ರಾ ತೊಟ್ಟು ಸಂಭ್ರಮಿಸಿದ್ದಾರೆ.

ಇಷ್ಟು ಮಾತ್ರವಲ್ಲ, ಟ್ರ್ಯಾಕ್ ಪ್ಯಾಂಟ್ ತೊಟ್ಟು ಅದರ ಮೇಲ್ಭಾಗವನ್ನು ಕಾಣಿಸುವಂತೆ ತಮ್ಮ ಹೊರ ಉಡುಪನ್ನು ಕೆಳಕ್ಕೆ ಜಾರಿಸಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.

ನೇಹಾ ಅವರ ಈ ಬೋಲ್ಡ್ ಉಡುಪಿಗೆ ನೆಟ್ಟಿಗರು ಪರ ಹಾಗೂ ವಿರೋಧ ಕಮೆಂಟ್ಗಳು ಮತ್ತು ಚರ್ಚೆಗಳನ್ನು ನಡೆಸಿದ್ದಾರೆ. ಇನ್ನೂ ಕೆಲವರು ಹೊರ ಉಡುಪಿನ ಮೇಲೆ ಒಳ ಉಡುಪು ತೊಟ್ಟಿರುವ ನೇಹಾ ‘ಸೂಪರ್ ಮ್ಯಾನ್’ ಆಗಲು ಹೊರಟಿದ್ದಾರೆಯೇ ಎಂದು ಕಾಲೆಳೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.