ತುಳಸಿ , ಅಲೊವೆರಾ , ಭೃಂಗ , ದಾಸವಾಳ ಮುಂತಾದ ಸಸ್ಯಗಳು ಉತ್ತಮ ಸೌಂದರ್ಯವರ್ಧಕಗಳು . ಮನೆಯಲ್ಲಿ ನಿತ್ಯವೂ ಪೂಜೆಗೆ ಬಳಸುವ ತುಳಸಿ ಆರೋಗ್ಯಕ್ಕೂ ಅತ್ಯಂತ ಪೂರಕವಾದ ಅದ್ಭುತ ಸಸ್ಯ . ಇದು ಅತ್ಯಂತ ಪವಿತ್ರವಾದ ಸಸ್ಯ .

ಆರೋಗ್ಯದಂತೆ ತುಳಸಿ ಸೌಂದರ್ಯಕ್ಕೂ ಬಹಳ ಪ್ರಯೋಜನಕಾರಿಯಾಗಿರುವ ಗಿಡ . ತುಳಸಿ ಎಂದರೆ ಸ್ಥೂಲಾರ್ಥದಲ್ಲಿ ಯಾವುದೇ ಸಸಿಗಳಿಗೆ ಹೋಲಿಸಲಾಗದ ಅಪ್ರತಿಮ ಸಸ್ಯ ಎಂದರ್ಥ . ತುಳಸಿ ಕಟ್ಟೆ ಇಲ್ಲದ ಮನೆ ಕಡಿಮೆ . ಎಲ್ಲ ಕಡೆ ಎಲ್ಲರ ಮನೆ ಮುಂದೆ ತುಳಸಿ ಕಟ್ಟೆ ನಿರ್ಮಿಸಿರುತ್ತಾರೆ . ತುಳಸಿಯಲ್ಲಿ ಕೃಷ್ಣ ತುಳಸಿ ರಾಮ ತುಳಸಿ ಎಂದು ಎರಡು ವಿಧಗಳಿವೆ . ಕೃಷ್ಣ ತುಳಸಿ ಕಪ್ಪಾಗಿಯೂ , ರಾಮ ತುಳಸಿ ತಿಳಿ ಬಣ್ಣದಾಗಿವೆ .

ದೈವಿಕ ಸ್ಥಾನ ಪಡೆದಿರುವ ತುಳಸಿ ಗಿಡ ಪೂಜನೀಯ ಮಾತ್ರವಲ್ಲ . ಆರೋಗ್ಯ ಮತ್ತು ಸೌಂದರ್ಯ ವರ್ಧಕವೂ ಆಗಿದೆ ಎಂಬುದು ನಿರ್ವಿವಾದ . ತುಳಸಿಯಲ್ಲಿರುವ ಔಷಧೀಯ ಗುಣಗಳಿಂದಾಗಿ ಅದು ಆರೋಗ್ಯದ ಸಮಸ್ಯೆಗೆ ಪರಿಹಾರ ನೀಡುವ ಜತೆಗೆ ತ್ವಚೆಯ ಸೌಂದರ್ಯವನ್ನು ಕಾಪಾಡುವ ಶಕ್ತಿಯನ್ನು ಹೊಂದಿದೆ . ಮನೆಯಂಗಳದಲ್ಲಿ ಸುಲಭವಾಗಿ ದೊರೆಯುವ ತುಳಸಿ ಗಿಡದಿಂದ ಆಗುವ ಪ್ರಯೋಜನಗಳ ಕುರಿತು ಮಾಹಿತಿ ತಿಳಿದುಕೊಳ್ಳುವುದು ಒಳ್ಳೆಯದು .

* ತುಳಸಿ ಎಲೆಯ ಮೇಲಿಂದ ಬೀಸಿ ಬರುವ ಗಾಳಿಯು ದೇಹಕ್ಕೆ ಹಿತಕರ .

* ಬಾಯಿಹುಣ್ಣು , ಬಾಯಿ ದುರ್ವಾಸನೆಗೆ , ಹಲ್ಲುನೋವಿಗೆ ಉಪಯುಕ್ತ .

* ಒಂದೆರಡು ಹನಿ ತುಳಸಿ ರಸವನ್ನು ಕಿವಿಯೊಳಗೆ ಬಿಟ್ಟರೆ ಕಿವಿನೋವು ಕಡಿಮೆಯಾಗುತ್ತದೆ .

* ಹೃದಯ ಸಂಬಂಧಿ ಕಾಯಿಲೆಗೆ ತುಳಸಿ ಎಲೆ ಸೇವನೆ ಒಳ್ಳೆಯದು . ಇದು ರಕ್ತದಲ್ಲಿದಲ್ಲಿನ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಬಹುದು .

* ಗಂಟಲು ನೋವು ಅಲರ್ಜಿ ಸಮಸ್ಯೆಗೆ ತುಳಸಿ ತಿಂದರೆ ಉತ್ತಮ .

* ಎರಡು ಚಮಚ ಕೃಷ್ಣ ತುಳಸಿ ರಸವನ್ನು ಜೇನಿನೊಂದಿಗೆ ಕಲಸಿ ಸೇವಿಸಿದರೆ ಕೆಮ್ಮು ಗುಣವಾಗುತ್ತದೆ .

ಸೌಂದರ್ಯ ವರ್ಧಕವಾಗಿ

ತುಳಸಿ ಮೊಡವೆಗಳನ್ನು ನಿವಾರಣೆ ಮಾಡುತ್ತದೆ . ತುಳಸಿ ರಸಕ್ಕೆ ಚಿಟಿಕೆಯಷ್ಟು ಅರಶಿನ ಹಾಕಿಕೊಂಡು ಮಿಶ್ರಣ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಂಡು ಸ್ವಲ್ಪ ಸಮಯ ಬಿಟ್ಟು ನೀರಿನಲ್ಲಿ ತೊಳೆಯಬೇಕು .

ತುಳಸಿ ಎಲೆಗಳನ್ನು ಸರಿಯಾಗಿ ರುಬ್ಬಿಕೊಂಡು ಪೇಸ್ಟ್ ಮಾಡಿಕೊಂಡು ಅರ್ಧ ಕಪ್ ಮೊಸರು ಹಾಕಿ ಸರಿಯಾಗಿ ಮಿಶ್ರಣವನ್ನು ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ . ಇದು ತ್ವಚೆ ಸ್ವಚ್ಚಗೊಳ್ಳುವುದರ ಜೊತೆಗೆ ಕಾಂತಿಯನ್ನೂ ಹೆಚ್ಚಿಸುತ್ತದೆ .

ಸ್ವಲ್ಪ ಮಟ್ಟಿಗೆ ತುಳಸಿ ಎಲೆಗಳನ್ನು ತೆಗೆದುಕೊಂಡು ಅದನ್ನು ದಪ್ಪಗಿನ ಪೇಸ್ಟ್ ಮಾಡಿಕೊಂಡು ಅದಕ್ಕೆ ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಮಚ ಲಿಂಬೆರಸ ಮಿಶ್ರಣ ಮಾಡಿ . ಮುಖಕ್ಕೆ ಹಚ್ಚಿ ಮುಖ ತೊಳೆಯಿರಿ .

ಕಡಲೆಹಿಟ್ಟು ಗುಲಾಬಿ ದಳ ರಸ ಮತ್ತು ತುಳಸಿಯ ಎಲೆಯನ್ನು ನುಣ್ಣಗೆ ಪೇಸ್ಟ್ ಮಾಡಿಕೊಂಡು ಮುಖ ಕುತ್ತಿಗೆ ಕೈಗಳಿಗೆ ಹಚ್ಚ ಬೇಕು . ಅರ್ಧ ಗಂಟೆಯ ನಂತರ ತಣ್ಣೀರಿನಲ್ಲಿ ತೊಳೆಯಬಹುದು . ಇದರಿಂದಾಗಿ ಚರ್ಮದ ಸಮಸ್ಯೆಯನ್ನು ನಿವಾರಿಸಿ ಚರ್ಮ ನಯವಾಗುವುದು .

ತುಳಸಿ ಫೇಸ್‌ಪ್ಯಾಕ್
ತುಳಸಿ ಎಲೆಗಳನ್ನು ತಂದು ಶುದ್ಧ ನೀರಿನಲ್ಲಿ ತೊಳೆದು ಚೆನ್ನಾಗಿ ಅರೆದು ಪೇಸ್ಟ್ ಮಾಡಿಕೊಳ್ಳಬೇಕು . ಇದಕ್ಕೆ ಗುಲಾಬಿ ಜಲ , ಸ್ವಲ್ಪ ಅರಿಶಿನ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಫೇಸ್‌ಪ್ಯಾಕ್ ಹಾಕಿಕೊಂಡರೆ ತ್ವಚೆ ನಯವಾಗುತ್ತದೆ . ಮೊಡವೆ ದೂರವಾಗುತ್ತದೆ . ಕಳಾಹೀನವಾದ ತ್ವಚೆ ಕಂಗೊಳಿಸುತ್ತದೆ .

ಭಗವಂತನಿಗೆ ತುಳಸಿ ಅರ್ಪಿಸಿ ಪೂಜಿಸುವ ವಿಧಾನ . ಸಾವಿರ ಪುಷ್ಪಗಳಿಗೆ ಒಂದು ತುಳಸಿ ದಳ ಸಮವೆಂದು ನಂಬಿಕೆ . ಪ್ರತಿದಿನ ತುಳಸಿ ಪೂಜೆ ಮಾಡಿ ಅದರ ದಳದೊಂದಿಗೆ ತೀರ್ಥ ಸೇವಿಸುವುದರಿಂದ ಶರೀರವು ಪರಿಶುದ್ಧ ವಾಗುವುದು ಮತ್ತು ರೋಗಬಾಧೆ ಇರುವುದಿಲ್ಲ .

ಪ್ರತಿದಿನ ನೋಡುವುದು , ಮುಟ್ಟುವುದು , ಧ್ಯಾನ ಮಾಡುವುದು , ಹಾಡುವುದು , ಪೂಜಿಸುವುದು , ನೀರು ಹಾಕುವುದು ಭಕ್ತಿಯಿಂದ ತೋರಿದರೆ ಸರ್ವಮಂಗಳವಾಗುವುದು ಎಂಬ ನಂಬಿಕೆ ಈಗಲೂ ಇದೆ . ಸಣ್ಣ ಗಿಡದಿಂದ ಹಿಡಿದು ಒಣಗಿದ ಸಸಿಯವರೆಗೆ ಉಪಯೋಗಿಸುವ ವಿಧಾನ ಹಲವಾರು .

ಕಣ್ಣಿಗೆ ಅತಿಯಾದ ಮೇಕಪ್ ಬೇಡ
ಸುಂದರವಾಗಿ ಕಾಣಲು ಮಹಿಳೆಯರು ಮೇಕಪ್ ಮೊರೆ ಹೋಗುತ್ತಾರೆ . ಮೇಕಪ್ ಮಾಡಿಸಿಕೊಳ್ಳಲು ಯುವತಿಯರು ಒಬ್ಬರಿಗಿಂತ ಒಬ್ಬರು ವಿಭಿನ್ನ ಶೈಲಿಯಲ್ಲಿ ಮೇಕಪ್ ಮಾಡಿಸಿಕೊಳ್ಳುತ್ತಾರೆ .

ಹಲವು ಮಹಿಳೆಯರು ಮೇಕಪ್ ಮಾಡಿಕೊಳ್ಳದೆ ಮನೆ ಹೊರಗಡೆ ಕಾಲಿರಿಸುವುದಿಲ್ಲ , ಇನ್ಯಾವುದೇ ಕಾರ್ಯಕ್ರಮ , ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದಿಲ್ಲ . ಅಡಿಯಿಂದ ಮುಡಿಯವರೆಗೂ ಮೇಕಪ್ ಮಾಡದೇ ಇದ್ದರೆ ಸಮಾಧಾನಗೊಳ್ಳದ ಮಹಿಳೆಯರೂ ನಮ್ಮ ನಡುವೆ ಇರುತ್ತಾರೆ . ಅಂಥವರು ಬ್ಯೂಟಿ ಪಾರ್ಲರ್ ಮೊರೆ ಹೋಗುತ್ತಾರೆ .

ಆದರೆ ಮೇಕಪ್ ನಿಂದ ಆ ದಿನ ಮಾತ್ರವೇ ಸುಂದರವಾಗಿ ಕಾಣಬಹುದು . ಮೇಕಪ್ ಗೆ ಉಪಯೋಗಿಸುವ ವಸ್ತುಗಳು ನಿಧಾನವಾಗಿ ನಮ್ಮ ಚರ್ಮದ ಅಂದವನ್ನು ಹಾಳು ಮಾಡುತ್ತವೆ . ಕೆಲವೊಮ್ಮೆ ಅಲರ್ಜಿ ಉಂಟಾಗಬಹುದು . ಅದರಲ್ಲೂ ಮುಖ್ಯವಾಗಿ ಕಣ್ಣಿಗೆ ಮೇಕಪ್ ಮಾಡುವಾಗ ತುಂಬಾ ಜಾಗರೂಕರಾಗಿರಬೇಕು . ಕಣ್ಣಿಗೆ ಹಚ್ಚುವ ಐ ಶ್ಯಾಡೋ , ಐ ಲೈನರ್ ನಿಂದ ನಿಧಾನವಾಗಿ ಕಣ್ಣು ಅಪಾಯಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ . ಹಾಗಾಗಿ ಇವುಗಳನ್ನು ಬಳಸುವ ಮೊದಲೇ ಎಚ್ಚರಿಕೆಯಿಂದ ಬಳಸುವುದು ಉತ್ತಮ .

ಕಣ್ಣಿಗೆ ಮೇಕಪ್ ಮಾಡುವ ಮುನ್ನ ಮುನ್ನೆಚ್ಚರಿಕೆ ಅಗತ್ಯ . ಮೇಕಪ್ ಮಾಡಿಕೊಳ್ಳುವ ಮೊದಲು ನಮ್ಮ ಕೈಯನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು . ನಾವೆಲ್ಲ ಹಾಸ್ಟೆಲ್ ನಲ್ಲೋ , ಪಿಜಿಯಲ್ಲೋ ಅಥವಾ ನೆಂಟರಿಷ್ಟರ ಮನೆಯಲ್ಲಿ ಇದ್ದರೆ ಸಾಮಾನ್ಯವಾಗಿ ಸ್ನೇಹಿತರೊಂದಿಗೆ , ನೆಂಟರಿಷ್ಟರೊಂದಿಗೆ ವಸ್ತುಗಳನ್ನು ಹಂಚಿಕೊಳ್ಳುತ್ತೇವೆ . ಆದರೆ ಕಣ್ಣಿನ ಮೇಕಪ್ ಗೆ ಬಳಸುವ ವಸ್ತುಗಳನ್ನು ಇತರರೊಂದಿಗೆ ಹಂಚಿಕೊಳ್ಳಬಾರದು . ಕಣ್ಣಿನ ಮೇಕಪ್ ವಸ್ತುಗಳನ್ನು ಹಂಚಿಕೊಳ್ಳುವುದು ಬ್ಯಾಕ್ಟೀರಿಯಾಳನ್ನು ಹಂಚಿಕೊಂಡಂತೆ . ನಮ್ಮ ಕಣ್ಣಿಗೆ ಸೋಂಕು ತಾಕಿದ್ದರೆ ಮೊದಲು ಕಣ್ಣಿಗೆ ಮೇಕಪ್ ಹಚ್ಚಿಕೊಳ್ಳುವುದು ನಿಲ್ಲಿಸಿ . ನಮ್ಮ ಬಳಿ ಇರುವ ಕಣ್ಣಿನ ಎಲ್ಲಾ ಮೇಕಪ್ ಸಾಮಾಗ್ರಿಗಳನ್ನು ಎಸೆಯಬೇಕು . ಇಲ್ಲದಿದ್ದರೆ ಕಣ್ಣಿಗೆ ಅಪಾಯವಾಗುವ ಸಾಧ್ಯತೆ ಇದೆ .

ನಾವು ಬಳಸುವ ಮೇಕಪ್ ಡಬ್ಬಿಯ ಬಾಯಿ ತೆರೆದೊಡನೆ ಗಾಳಿಯಲ್ಲಿ ಇರುವ ಸಾವಿರಾರು ಕ್ರಿಮಿಗಳು ಡಬ್ಬಿಯೊಳಗೆ ಸೇರುತ್ತವೆ . ಡಬ್ಬಿಯ ಬಾಯಿ ಮುಚ್ಚಿದ ನಂತರ ಅವು ಮತ್ತೆ ಮೇಕಪ್ ಸಾಮಾಗ್ರಿಯೊಂದಿಗೆ ಸೇರುತ್ತವೆ . ಇದನ್ನು ಮತ್ತೆ ಮತ್ತೆ ಉಪಯೋಗಿಸುವುದರಿಂದ ಅಲರ್ಜಿ ಉಂಟಾಗುತ್ತದೆ . ಯಾವುದೇ ವಸ್ತುವನ್ನು ಒಂದು ವರ್ಷಕ್ಕಿಂತ ಹೆಚ್ಚು ಉಪಯೋಗಿಸುವುದು ಹಾನಿಕಾರಕ ; ಚರ್ಮದ ಹಿತರಕ್ಷಣೆಯಿಂದ ಒಳ್ಳೆಯದಲ್ಲ . ಯಾವುದೇ ಮೇಕಪ್ ವಸ್ತುವನ್ನು ಕೊಳ್ಳುವ ಮೊದಲು ಅದರ ಸಾಧಕ ಬಾಧಕಗಳ ಬಗ್ಗೆ ತಿಳಿದುಕೊಳ್ಳಬೇಕು . ಎಲ್ಲಾ ಉತ್ಪನ್ನಗಳು ಎಲ್ಲರಿಗೂ ಸರಿಯಾಗಿ ಉಪಯೋಗಕ್ಕೆ ಬರುವುದಿಲ್ಲ . ನೈಸರ್ಗಿಕ ಉತ್ಪನ್ನಗಳಿಂದಲೂ ಅಲರ್ಜಿ ಉಂಟಾಗಿದ್ದರೆ ಅಲರ್ಜಿ ಅಂಶ ಅಧಿಕವಾಗಿದೆ ಎಂದರ್ಥ . ಹಾಗಿದ್ದಾಗ ಆದಷ್ಟು ಮೇಕಪ್ ಉತ್ಪನ್ನಗಳ ಬಳಕೆ ಕಡಿಮೆ ಮಾಡುವುದು ಉತ್ತಮ .

ಸುಧಾ, ಸಂಪುಟ 54 ಸಂಚಿಕೆ 32

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.