ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನನಿಲ್ದಾಣ–ಮೆಜೆಸ್ಟಿಕ್ ಮಾರ್ಗದ ಬಿಎಂಟಿಸಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರ ತಲೆ ಮೇಲೆ ಎಸಿ ಉಪಕರಣದ ಬಿಡಿ ಭಾಗಗಳು ಕಳಚಿ ಬಿದ್ದು ಪೆಟ್ಟಾಗಿತ್ತು. ಪ್ರಯಾಣಿಕನ ಸಹೋದರ ಸುಮಿತ್ ಎಂಬುವರು ಟ್ವಿಟರ್ನಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದು ಬಿಎಂಟಿಸಿ ಬಸ್ ಅವ್ಯವಸ್ಥೆಗೆ ಹಿಡಿದ ಕನ್ನಡಿ.

ಇಂಥ ಅನೇಕ ಸಂಗತಿಗಳು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಪ್ರಸಾರಗೊಳ್ಳುತ್ತವೆ. ಕೆಲವು ವೈರಲ್ ಕೂಡ ಆಗುತ್ತವೆ. ಜನಸ್ಪಂದನೆ ಕೂಡ ಇರುತ್ತದೆ. ಆದರೆ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಬದಲಾವಣೆಗೆ ಮುಂದಾಗುವುದಿಲ್ಲ. ಜನರ ಆಕ್ರೋಶದ ಇಂಥ ಜಾಡು ಹಿಡಿದು ಸಾಗಿದರೆ ಬಿಎಂಟಿಸಿ ಬಸ್ಗಳ ಅವ್ಯವಸ್ಥೆಯ ಸಾಕ್ಷಾತ್ ದರ್ಶನವಾಯಿತು.

ಕೂರಲು ಯೋಗ್ಯವಲ್ಲದ ಕುರ್ಚಿಗಳು, ಅದರ ಸುತ್ತ ಗಲೀಜು, ಚಿಲ್ಲರೆ ಕೊಡದ ಕಂಡಕ್ಟರ್, ಯದ್ವಾತದ್ದಾ ವಾಹನ ಓಡಿಸುವ ಚಾಲಕ, ಹೆಸರಿಗೆ ಮಾತ್ರ ಇರುವ ಪ್ರಥಮ ಚಿಕಿತ್ಸೆ ಪೆಟ್ಟಿಗೆ.. ಇಂಥ ಅದ್ವಾನದ ನಡುವೆಯೇ ಪ್ರಯಾಣಿಕರು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸುತ್ತಾರೆ. ದೇಶದಲ್ಲೇ ನಂಬರ್ ಒನ್ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಹೊಂದಿರುವ ಬಿಎಂಟಿಸಿ ಸಮರ್ಪಕ ನಿರ್ವಹಣೆ ಇಲ್ಲದೇ ಸೊರಗುತ್ತಿದೆ.

ಒಂದು ಪುಟ್ಟ ರಿಯಾಲಿಟಿ ಚೆಕ್ ಮಾಡಿದಾಗ ಕಂಡಿದ್ದು ಇಷ್ಟು
ಪ್ರಯಾಣಿಕಸ್ನೇಹಿ ಸೌಕರ್ಯವಿಲ್ಲ:ಕೆಲ ವೋಲ್ವೊ ಬಸ್ಗಳ ಪ್ರವೇಶದ್ವಾರಗಳ ಮೇಲ್ಭಾಗ ಮತ್ತು ಡ್ರೈವರ್ ಪಕ್ಕದ ಚಿಕ್ಕ ಬಾಗಿಲಿನ ಮೇಲ್ಭಾಗ ತುಕ್ಕು ಹಿಡಿದಿವೆ. ಕೆಲ ವೋಲ್ವೊ ಬಸ್ಗಳ ಎ.ಸಿ. ಉಪಕರಣವಿರುವ ಜಾಗಗಳಲ್ಲಿ ಸ್ಕ್ರ್ಯೂಗಳು ಸಡಿಲವಾಗಿವೆ. ಕೆಲ ಸ್ಕ್ರ್ಯೂಗಳು ಕಳಚಿಬಿದ್ದಿವೆ.

ವೊಲ್ವೊ ಬಸ್ಗಳ ಜೊತೆಗೆ ಜೆನರ್ಮ್ ಸಂಪರ್ಕ, ಸುವರ್ಣ, ವೋಲ್ವೊ ಸೇರಿದಂತೆ ಬಹುತೇಕ ಬಿಎಂಟಿಸಿ ಬಸ್ಗಳಲ್ಲಿ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಖಾಲಿ ಇವೆ. ಕೆಲವು ಕಡೆ ಮಾತ್ರ ನೆಪ ಮಾತ್ರಕ್ಕೆ ಒಂದು ರೋಲ್ ಬ್ಯಾಂಡೇಜ್ ಮಾತ್ರ ಇವೆ.

ಅಂಗವಿಕಲ ಸ್ನೇಹಿಯಾಗಿಲ್ಲ:ವೋಲ್ವೊ ಬಸ್ಗಳಲ್ಲಿರುವ ಅಂಗವಿಕಲರ ಆಸನಗಳಿಗೆ ಯಾವುದೇ ಹಿಡಿಕೆ ಇಲ್ಲ. ಜೋರಾಗಿ ಬ್ರೇಕ್ ಹಾಕಿದರೆ ಕೆಳಗೆ ಬಿದ್ದು ಪೆಟ್ಟಾಗುವ ಸಂಭವವೇ ಹೆಚ್ಚು. ಪುಟ್ಟ ಮಕ್ಕಳನ್ನು ಎತ್ತಿಕೊಂಡು ಕೂತಿದ್ದರೆ ಮಕ್ಕಳು ಬೀಳುವ ಅಪಾಯವೂ ಹೆಚ್ಚಿದೆ.

ಪ್ರಯಾಣಿಕರು ಏನು ಹೇಳುತ್ತಾರೆ?
ಡ್ರೈವರ್, ಕಂಡಕ್ಟರ್ಗೆ ಸೌಜನ್ಯ ಕಲಿಸಿ:‘ಬಿಎಂಟಿಸಿ ಡ್ರೈವರ್ ಮತ್ತು ಕಂಡಕ್ಟರ್ಗಳಿಗೆ ಮೊದಲು ಸೌಜನ್ಯ ಕಲಿಸಬೇಕಿದೆ. ಪ್ರಯಾಣಿಕರಿಗೆ ಕನಿಷ್ಠ ಗೌರವವನ್ನೂ ಕೊಡುವುದಿಲ್ಲ. ಕಂಡಕ್ಟರ್ಗಳಂತೂ ಚಿಲ್ಲರೆ ಇಲ್ಲವೆಂದು ಟಿಕೆಟ್ ಹಿಂದೆ ಬರೆದುಕೊಡುತ್ತಾರೆ. ಕೆಲ ಪ್ರಯಾಣಿಕರು ನೆನಪಿನಲ್ಲಿಟ್ಟುಕೊಂಡು ಚಿಲ್ಲರೆ ಪಡೆದರೆ, ಮತ್ತೆ ಕೆಲವರು ಮರೆತು ಇಳಿದುಹೋಗುತ್ತಾರೆ. ಅಂಥ ದುಡ್ಡು ಎಲ್ಲಿ ಹೋಗುತ್ತೆ? ಅದು ಸಂಸ್ಥೆಗೆ ಕೆಟ್ಟ ಹೆಸರು ತರವುದಿಲ್ಲವೇ?’ ಎಂದು ಪ್ರಶ್ನಿಸುತ್ತಾರೆ ಕಲ್ಯಾಣನಗರದ ಬಿಎಂಟಿಸಿ ಪ್ರಯಾಣಿಕ ವೆಂಕಟೇಶಲು.

ಬಿಎಂಟಿಸಿಯಲ್ಲಿ ಶೇ 5ರಿಂದ 10ರಷ್ಟು ಹಳೆಯ ಬಸ್ಗಳಿವೆ. ಅವು ಮೇಲ್ನೋಟಕ್ಕೆ ಸುಸ್ಥಿತಿಯಲ್ಲಿರುವಂತೆ ಕಂಡರೂ ಓಡಿಸಲು ಯೋಗ್ಯವಾಗಿಲ್ಲ. ಕೆಲವು ಕಡೆ ಫ್ಲೋರ್ಗಳು ಎದ್ದಿವೆ. ಮಕ್ಕಳು, ಮಹಿಳೆಯರು, ವಯಸ್ಸಾದವರು ಸುಲಭವಾಗಿ ಗಾಯಕ್ಕೆ ತುತ್ತಾಗುವ ಸಾಧ್ಯತೆ ಇದೆ. ಇಂಥವುಗಳನ್ನು ರಿಪೇರಿ ಮಾಡಿಸಬೇಕು. ಇಲ್ಲವೇ ಇಂಥ ಬಸ್ಗಳ ಬಳಕೆಯನ್ನು ನಿಲ್ಲಿಸಬೇಕು ಎನ್ನುತ್ತಾರೆ.

ಸರಿಯದ ಕಿಟಕಿ:‘ಬಿಎಂಟಿಸಿ ಬಸ್ಗಳಲ್ಲಿರುವಬಹುತೇಕ ಕಿಟಕಿಗಳು ಮುಚ್ಚಲು ಮತ್ತು ತೆರೆಯಲು ಬಾರದ ಸ್ಥಿತಿಯಲ್ಲಿವೆ. ಮಳೆ ಬಂದರೆ ಪ್ರಯಾಣಿಕರಿಗೆ ತೀವ್ರ ತೊಂದರೆ. ಮೊನ್ನೆಯ ಮಳೆಯಲ್ಲಿ ಕಿಟಕಿ ಪಕ್ಕ ಕೂರಲಾಗದೇ ನಿಂತೇ ಪ್ರಯಾಣಿಸಬೇಕಾಯಿತು’ ಎಂದು ಬೇಸರಿಸಿದರು ಖಾಸಗಿ ಕಂಪನಿ ಉದ್ಯೋಗಿ ಕವಿತಾ.

ಸೀಟು ಬಿಟ್ಟುಕೊಡದ ಪುರುಷರು!
‘ಬಿಎಂಟಿಸಿ ಬಸ್ಗಳಲ್ಲಿನ ಮಹಿಳೆಯರಿಗೆಂದೇ ಕಾಯ್ದಿರಿಸಿದ ಸೀಟುಗಳನ್ನು ಪುರುಷರು ಆಕ್ರಮಿಸುತ್ತಾರೆ. ಮಹಿಳೆಯರು ಬಂದಾಗಲಾದರು ಸೀಟು ಬಿಟ್ಟುಕೊಡುವುದಿಲ್ಲ. ಇದುವರೆಗೆ ಮಹಿಳೆಯರ ಸೀಟಿನಲ್ಲಿ ಕುಳಿತ ಪುರುಷರು ತಾವಾಗಿಯೇ ಸೀಟು ಬಿಟ್ಟುಕೊಟ್ಟಿದ್ದನ್ನು ನಾನು ಕಂಡಿಲ್ಲ. ಕೆಲವು ಕಂಡಕ್ಟರ್ಗಳು ತಮಗೂ ಇದಕ್ಕೂ ಸಂಬಂಧವೇ ಇಲ್ಲ ಅನ್ನುವಂತಿರುತ್ತಾರೆ’ಎನ್ನುವುದು ಮಲ್ಲೇಶ್ವರದ ಹೇಮಾವತಿ ಅವರ ತಕರಾರು.

ಚಿಲ್ಲರೆಗೆ ಸತಾಯಿಸುವ ಕಂಡಕ್ಟರ್
ಶಿವಾಜಿನಗರದಿಂದ ಮೆಜೆಸ್ಟಿಕ್ಗೆ ಹೊರಟಿದ್ದ ವೃದ್ದ ದಂಪತಿ, ಮೆಜೆಸ್ಟಿಕ್ನಲ್ಲಿ ಬಸ್ ಇಳಿದ ಬಳಿಕ ಚಿಲ್ಲರೆ ಪಡೆಯಲು ಕಂಡಕ್ಟರ್ ಹುಡುಕುತ್ತಿದ್ದ ದೃಶ್ಯ ಮನಕಲಕುವಂತಿತ್ತು.

‘ಅಯ್ಯೋ ಬನ್ನಿ ಚಿಲ್ಲರೆ ಹಾಳಾಗಿ ಹೋಗಲಿ, ಆ ಕಂಡಕ್ಟರ್ ನಿಮಗೆ ಮರ್ಯಾದೆ ಕೊಡೋದಿಲ್ಲ. ಬಾಯಿಗೆ ಬಂದಂಗೆ ಬೈತಾನೆ. ನನ್ನ ಕೈಲಿ ನೋಡಲಾಗದು ಎಂದು ಹಿರಿಯ ನಾಗರಿಕ ಕೃಷ್ಣಪ್ಪ ಅವರ ಪತ್ನಿ ಹೇಳುತ್ತಿದ್ದರು. ಪತ್ನಿಯ ಮಾತನ್ನು ಲೆಕ್ಕಿಸದೇ ಕೃಷ್ಣಪ್ಪ ಅವರು ‘ಕಂಡಕ್ಟರ್ ಬಳಿ ಹೋಗಿ ಸರ್ ನೀವು ಚಿಲ್ಲರೆ ಕೊಡಬೇಕು. ನೋಡಿ ಚೀಟಿ ಹಿಂದೆ ಬರೆದುಕೊಟ್ಟಿದ್ದೀರಿ ಎಂದು ಸೌಜನ್ಯದಿಂದಲೇ ಕೇಳಿದರು. ‘ಏನ್ರೀ ನಿಮ್ ಸಮಸ್ಯೆ. ಚಿಲ್ರೆ ಕೊಟ್ಟಿರಬೇಕಲ್ಲ. ಜೇಬು ನೋಡಿಕೊಳ್ಳಿ ಸ್ವಲ್ಪ’ ಎಂದುಕಂಡಕ್ಟರ್ ದಬಾಯಿಸಲು ನೋಡಿದರು. ‘ಇಲ್ಲ ಕೊಟ್ಟಿಲ್ಲ’ ಎಂದು ಸ್ಪಷ್ಟವಾಗಿ ಆ ಹಿರಿಯ ನಾಗರಿಕರು ಹೇಳಿದ ಮೇಲೆ ಕಂಡಕ್ಟರ್ ಚಿಲ್ಲರೆ ಹಣ ಮರಳಿಸಿದ.

ಏನಂತಾರೆ ಡಿಪೊ ಮ್ಯಾನೇಜರ್?
ಎ.ಸಿ. ಉಪಕರಣದ ಬಿಡಿ ಬಾಗಗಳು ಕಳಚಿ ಬಿದ್ದು ಪ್ರಯಾಣಿಕರಿಗೆ ಅನನುಕೂಲವಾಗಿದ್ದಕ್ಕೆ ವಿಷಾದಿಸುತ್ತೇವೆ.ಹತ್ತು ವರ್ಷಗಳಲ್ಲಿ ಇಂಥ ಯಾವುದೇ ಪ್ರಮಾದ ಸಂಭವಿಸಿರಲಿಲ್ಲ. ಘಟನೆಯ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರದ ಡ್ರೈವರ್ ಮತ್ತು ಕಂಡಕ್ಟರ್ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಎಸಿ ಉಪಕರಣದ ಬಿಡಿ ಭಾಗಗಳು ಹೇಗೆ ಕಳಚಿ ಬಿದ್ದವು ಎಂಬ ಬಗ್ಗೆತಾಂತ್ರಿಕ ಅಧಿಕಾರಿಗಳಿಂದ ವಿವರಣೆ ಕೇಳಲಾಗಿದೆ.
–ಬಸಪ್ಪ, ಡಿಪೊ–7 ಮ್ಯಾನೇಜರ್, ಮೆಜೆಸ್ಟಿಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.