ಸೋಮವಾರ, ಅಕ್ಟೋಬರ್ 26, 2020
27 °C

ನಿಮ್ಮ ನೆಚ್ಚಿನ ರೆಡ್‌ಮಿ ಸ್ಮಾರ್ಟ್‌ಫೋನ್‌ ಮೇಲೆ ಭರ್ಜರಿ ಡಿಸ್ಕೌಂಟ್‌; ಅಕ್ಟೋಬರ್ 16 -21ರ ವರೆಗೂ - ಇಲ್ಲಿದೆ ವಿವರ

ಪ್ರಾಯೋಜಿತ ಬರಹ Updated:

ಅಕ್ಷರ ಗಾತ್ರ : | |

ಹಬ್ಬದ ದಿನಗಳಂತೂ ಶುರುವಾಗಿವೆ, ಒಂದರ ಹಿಂದೊಂದು ಹಬ್ಬಗಳ ಸರಣಿಯೇ ಮುಂದಿದೆ. ಇದೇ ಸಮಯದಲ್ಲಿ ಭಾರತದ ಅತ್ಯಂತ ಜನಪ್ರಿಯ ಮತ್ತು ನಂ.1 ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌, 'ರೆಡ್‌ಮಿ' ತನ್ನ ಅಧಿಕೃತ ವೆಬ್‌ಸೈಟ್‌ ಎಂಐ ಡಾಟ್‌ ಕಾಮ್‌ನಲ್ಲಿ (mi.com) ದೀಪಾವಳಿ ವಿಶೇಷ ಮಾರಾಟ ನಡೆಸುತ್ತಿದೆ.  ಹಿಂದೆಂದೂ ಕಂಡು ಕೇಳರಿಯದಂತಹ ರಿಯಾಯಿತಿಗಳನ್ನು ಸ್ಮಾರ್ಟ್‌ಫೋನ್‌ಗಳಿಂದ ಹಿಡಿದು ಅಸೆಸ್ಸರೀಸ್‌ ವರೆಗೂ ನೀಡಲಾಗುತ್ತಿದೆ. ಅಕ್ಟೋಬರ್‌ 16ರಿಂದ ಮಾರಾಟ ಆರಂಭವಾಗಿದ್ದು ಇದೇ 21ಕ್ಕೆ ಕೊನೆಯಾಗಲಿದೆ.

ಭಾರತದ ಅತಿ ದೊಡ್ಡ ಹಬ್ಬದ ಆಚರಣೆಯೊಂದಿಗೆ 'ರೆಡ್‌ಮಿ ಇಂಡಿಯಾ' ತಂದಿದೆ ತುದಿಗಾಲಿನಲ್ಲಿ ಕೂರಿಸುವಷ್ಟು ಅಪಾರವಾದ ಕೊಡುಗೆಗಳು.  ಅತ್ಯಂತ ಜನಪ್ರಿಯ 'ರೆಡ್‌ಮಿ ನೋಟ್‌ 9' ಸರಣಿಯ ಫೋನ್‌ಗಳು ಅತಿ ಕಡಿಮೆ ಬೆಲೆಗೆ ಹಾಗೂ 'ರೆಡ್‌ಮಿ 9' ಸರಣಿಗಳ ಫೋನ್‌ಗಳ ಮೇಲೆ ಮೊದಲ ಬಾರಿಗೆ ಅತಿ ದೊಡ್ಡ ರಿಯಾಯಿತಿ ಸಿಗುತ್ತಿದೆ. ಇದರೊಂದಿಗೆ 'ದೇಶ್ ಕಾ ಸ್ಮಾರ್ಟ್‌ಫೋನ್‌' ರೆಡ್‌ಮಿ 9ಎ, ಆಡಿಯೊ ಪ್ರಾಡ್ಟ್‌ಗಳು ಮತ್ತು ಇತರೆ ಅಸೆಸ್ಸರೀಸ್‌ಗಳ ಮೇಲೆ ಭಾರಿ ಡಿಸ್ಕೌಂಟ್‌ ನೀಡಲಾಗಿದೆ. ಇಷ್ಟೆಲ್ಲ ರಿಯಾಯಿತಿಗಳಷ್ಟೇ ಅಲ್ಲದೆ, ಗ್ರಾಹಕರು ಆ್ಯಕ್ಸಿಸ್ ಬ್ಯಾಂಕ್‌ ಕಾರ್ಡ್‌ಗಳು ಮತ್ತು ಬಿಒಬಿ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ಖರೀದಿಸುವ ಮೂಲಕ ₹1,000 ವರೆಗೂ ಇನ್‌ಸ್ಟಂಟ್‌ ಡಿಸ್ಕೌಂಟ್‌ ಪಡೆಯಬಹುದು.

 

ರೆಡ್‌ಮಿ ಇಂಡಿಯಾದಿಂದ ಅತಿ ದೊಡ್ಡ ಕೊಡುಗೆಗಳು:

ಪ್ರಾಡಕ್ಟ್‌ಗಳುಕೊಡುಗೆ ಬೆಲೆ (₹)ಎಂಆರ್‌ಪಿ (₹)
ರೆಡ್‌ಮಿ ನೋಟ್‌ 91099914999
ರೆಡ್‌ಮಿ ನೋಟ್‌ 9 ಪ್ರೊ1299916999
ರೆಡ್‌ಮಿ ನೋಟ್‌ 9 ಪ್ರೊ ಮ್ಯಾಕ್ಸ್‌1599918999
ರೆಡ್‌ಮಿ ಸ್ಮಾರ್ಟ್‌ ಬ್ಯಾಂಡ್‌13992099
ರೆಡ್‌ಮಿ ಇಯರ್‌ ಬಡ್ಸ್‌ 2 ಸಿ12991999

ಪ್ರೊ ಕ್ಯಾಮೆರಾಗಳು ಮತ್ತು ಅಧಿಕ ಸಾಮರ್ಥ್ಯದ 'ರೆಡ್‌ಮಿ ನೋಟ್‌ 9 ಪ್ರೊ ಮ್ಯಾಕ್ಸ್‌' ಫೋನ್‌ಗಳ ಆರಂಭಿಕ ದರ ₹18,999 ಇದ್ದು, ಇದೀಗ ಕೇವಲ ₹15,999ರಿಂದ ಸಿಗುತ್ತಿದೆ. ಇನ್ನೂ ಕಾರ್ಯನಿರ್ವಹಣೆಯಲ್ಲಿ ಅತ್ಯಂತ ಸಮರ್ಥ ಫೋನ್‌ ಆಗಿರುವ 'ರೆಡ್‌ಮಿ ನೋಟ್‌ 9 ಪ್ರೊ' ಕೇವಲ ₹12,999ಕ್ಕೆ ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಇದರ ಆರಂಭಿಕ ಎಂಆರ್‌ಪಿ ₹16,999 ಇದೆ. ಈ ಎರಡೂ ಮಾದರಿಯ ಫೋನ್‌ಗಳನ್ನು 12 ತಿಂಗಳು ಮತ್ತು 6 ತಿಂಗಳ ನೊ ಕಾಸ್ಟ್‌ ಇಎಂಐ ಆಧಾರದಲ್ಲೂ ಖರೀದಿಸಬಹುದಾಗಿದೆ. ಇನ್ನೂ ಈವರೆಗಿನ ಫೋನ್‌ಗಳ ಪೈಕಿ ಚಾಂಪಿಯನ್‌ ರೀತಿಯಲ್ಲಿ ಜನರಿಗೆ ಪ್ರಿಯವಾಗಿರುವ 'ರೆಡ್‌ಮಿ ನೋಟ್‌ 9' ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತಿದೆ. ಆರಂಭಿಕ ಎಂಆರ್‌ಪಿ ₹14,999ಕ್ಕೆ ಬಿಡುಗಡೆಯಾದ ಫೋನ್‌ ಈಗ ₹10,999ರಿಂದ ಸಿಗುತ್ತಿದೆ.

ಇದೇ ಮೊದಲ ಬಾರಿಗೆ ರೆಡ್‌ಮಿ 9 ಸರಣಿಯ ಫೋನ್‌ಗಳ ಮೇಲೆ ರಿಯಾಯಿತಿ ನೀಡಲಾಗುತ್ತಿದ್ದು, ಇದು ಸೀಮಿತ ಅವಧಿಯ ಕೊಡುಗೆಯಾಗಿದೆ. ಉತ್ಕೃಷ್ಟ ಡಿಸ್‌ಪ್ಲೇ, ಅಧಿಕ ಕಾರ್ಯನಿರ್ವಹಣೆ ಸಾಮರ್ಥ್ಯ ಹಾಗೂ ಅತ್ಯುತ್ತಮ ಗುಣಮಟ್ಟದ ಕ್ಯಾಮೆರಾ ಅನುಭವ ಈ ಫೋನ್‌ಗಳಿಂದ ಸಿಗುತ್ತಿದೆ. ಉದಾಹರಣೆಗೆ, ರೆಡ್‌ಮಿ 9 ಪ್ರೈಮ್‌ (4ಜಿಬಿ+128ಜಿಬಿ) ಫೋನ್‌ ಈಗ ಕೇವಲ ₹10,999ಕ್ಕೆ ನಿಮ್ಮದಾಗಿಸಿಕೊಳ್ಳಬಹುದು. ಈ ಫೋನ್‌ ಎಂಆರ್‌ಪಿ ₹13,999 ಇದೆ. ಇನ್ನೂ ರೆಡ್‌ಮಿ 9ಐ ಮಾದರಿಯ ಫೋನ್ ಆರಂಭಿಕ ಬೆಲೆ  ₹8,299 ನಿಗದಿಯಾಗಿದೆ. ಲಕ್ಷಾಂತರ ಭಾರತೀಯರ ಆಯ್ಕೆ ಮತ್ತು ದೇಶ್‌ ಕಾ ಸ್ಮಾರ್ಟ್‌ಫೋನ್‌ ಆಗಿರುವ 'ರೆಡ್‌ಮಿ 9ಎ' ಕೈಗೆಟುಕುವ ದರದಲ್ಲಿ ಲಭ್ಯವಿದ್ದು, ಈಗ ಆರಂಭಿಕ ಬೆಲೆ ₹6,499 ಇದೆ. ಈ ಫೋನ್‌ನ ಆರಂಭಿಕ ಎಂಆರ್‌ಪಿ ₹8,499 ಇದೆ.

 

ಎಂಐ ದೀಪಾಳಿಯ ವಿಶೇಷ ಕೊಡುಗೆಯನ್ನು ತನ್ನ ಲೈಫ್‌ಸ್ಟೈಲ್‌ ಪ್ರಾಡಕ್ಟ್‌ಗಳು ಹಾಗೂ ವೇರೆಬಲ್‌ಗಳಿಗೂ ನೀಡುತ್ತಿದೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಸೋನಿಕ್‌ಬಾಸ್‌ ವೈರ್‌ಲೆಸ್‌ ಇಯರ್‌ಫೋನ್‌ ಗರಿಷ್ಠ ಮಾರಾಟ ಬೆಲೆಗಿಂತ ಎರಡನೇ ಮೂರರಷ್ಟು ದರದಲ್ಲಿ ಸಿಗುತ್ತಿದೆ. ಇನ್ನೂ ಟ್ರೂಲಿ ವೈರ್‌ಲೆಸ್‌ ರೆಡ್‌ಮಿ ಇಯರ್‌ಬಡ್ಸ್‌ 2ಸಿ ಮತ್ತು ಎಸ್‌ ಮಾದರಿಗಳ ಮೇಲೆ ಅತಿ ಹೆಚ್ಚು ರಿಯಾಯಿತಿ ನೀಡಲಾಗಿದ್ದು, ಕ್ರಮವಾಗಿ ₹1,299 ಮತ್ತು ₹1,499ಕ್ಕೆ ಲಭ್ಯವಿದೆ.

ಈ ವಿಶೇಷ ಮಾರಾಟ ಸಮಯದಲ್ಲಿ ನೀವು ರೆಡ್‌ಮಿ ನೋಟ್‌ 9 ಪ್ರೊ, ಟಿವಿ ಇನ್ನಷ್ಟು ಸಾಧನಗಳನ್ನು ಕೇವಲ ₹1 ನೀಡಿ ಗೆಲ್ಲಬಹುದಾಗಿದೆ. ₹1 ಫ್ಲ್ಯಾಷ್‌ ಸೇಲ್‌ನಲ್ಲಿ ಭಾಗಿಯಾಗುವ ಮೂಲಕ ಸಾಧನಗಳನ್ನು ಗೆಲ್ಲಬಹುದು ಅಥವಾ ಪಿಕ್‌ ಅಂಡ್ ಚೂಸ್‌ ಬಂಡಲ್‌ ಆಫರ್‌ ಮೂಲಕ ಹೆಚ್ಚು ಉಳಿತಾಯ ಮಾಡುವ ಅವಕಾಶವೂ ಇದೆ. ಎಂಐ ಗಿಫ್ಟ್‌ ಕಾರ್ಡ್‌ಗಳ ಮೂಲಕವೂ ನಿಮ್ಮ ಸ್ನೇಹಿತರು ಮತ್ತು ಪ್ರೀತಿ ಪಾತ್ರರಿಗೆ ದೀಪಾವಳಿ ಸಂಭ್ರಮದ ಬೆಳಕನ್ನು ಹಂಚಬಹುದಾಗಿದೆ.

ಎಂಐ ಜೊತೆಗೆ ಈ ಬಾರಿಯ ದೀಪಾವಳಿ ಆಚರಿಸಲು ಸಿದ್ಧರಾಗಿ ಮತ್ತು ನಿಮ್ಮ ನೆಚ್ಚಿನ ರೆಡ್‌ಮಿ ಪ್ರಾಡಕ್ಟ್‌ಗಳನ್ನು ಇಲ್ಲಿಂದ ಖರೀದಿಸಿ.