ಪತಂಜಲಿಯು ಪ್ರಕೃತಿದತ್ತ ಆರೋಗ್ಯ ಮತ್ತು ಸ್ವಾಸ್ಥ್ಯಕ್ಕೆ ಒತ್ತು ನೀಡುತ್ತಿರುವುದಕ್ಕೆ ಹೆಸರುವಾಸಿಯಾದಂತೆಯೇ, ಶಿಕ್ಷಣ ಕ್ಷೇತ್ರದಲ್ಲೂ ಗಮನಾರ್ಹ ಸಾಧನೆ ಮಾಡಿದೆ. ಪ್ರಾಚೀನ ಜ್ಞಾನ ಪದ್ಧತಿಯನ್ನು ಕಾಪಾಡುವ ಬದ್ಧತೆಯ ಜತೆಗೆ ಆಧುನಿಕ ಶಿಕ್ಷಣ ತಂತ್ರಗಳನ್ನೂ ಅಳವಡಿಸಿಕೊಂಡಿದೆ. ಆ ಮೂಲಕ ಭಾರತದಲ್ಲಿ ಶಿಕ್ಷಣ ಪದ್ಧತಿಯನ್ನು ಮರುವ್ಯಾಖಾನಿಸಿದೆ. ಪತಂಜಲಿಯ ಶೈಕ್ಷಣಿಕ ಉಪಕ್ರಮಗಳು ಭವಿಷ್ಯದ ಕಲಿಕೆಗೆ ಮತ್ತು ದೇಶದ ಬೆಳವಣಿಗೆಗೆ ಹೇಗೆ ಸಹಕಾರಿ ಎಂಬುದನ್ನು ನೋಡೋಣ.

ಪತಂಜಲಿ ವಿಶ್ವವಿದ್ಯಾಲಯವು ಶಿಕ್ಷಣದಲ್ಲಿನ ನಾವೀನ್ಯತೆಯ ಪ್ರತಿಬಿಂಬವಾಗಿದ್ದು, ಭಾರತೀಯ ಜ್ಞಾನದ ಅದ್ಭುತ ಪರಂಪರೆಗಳು ಮತ್ತು ಸಮಕಾಲೀನ ಕಲಿಕೆಯ ಶ್ರೇಷ್ಠ ಅಭ್ಯಾಸಗಳನ್ನು ಒಟ್ಟುಗೂಡಿಸಿದೆ. ಆಯುರ್ವೇದ, ಯೋಗ, ಸಂಸ್ಕೃತ ಮತ್ತು ಸಮಕಾಲೀನ ವೈಜ್ಞಾನಿಕ ಪಠ್ಯಕ್ರಮಗಳನ್ನು ವಿಶ್ವವಿದ್ಯಾಲಯವು ಅಳವಡಿಸಿಕೊಂಡಿದ್ದು, ವಿಶಾಲ ಪಠ್ಯಕ್ರಮವನ್ನು ಹೊಂದಿದೆ. ಈ ಎರಡು ಭಿನ್ನ ಜಗತ್ತುಗಳನ್ನು ಒಂದುಗೂಡಿಸುವ ಮೂಲಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಉತ್ತೇಜಿಸಲು ಪತಂಜಲಿ ವಿಶ್ವವಿದ್ಯಾಲಯವು ಸುವ್ಯವಸ್ಥಿತ ಶಿಕ್ಷಣವನ್ನು ನೀಡುತ್ತದೆ. ಪ್ರಾಚೀನ ಜ್ಞಾನವನ್ನು ಆಧುನಿಕ ಅಧ್ಯಯನಗಳೊಂದಿಗೆ ಸಂಯೋಜಿಸುವ ಒತ್ತು ವಿಶಿಷ್ಟ ಕಲಿಕೆಯ ವಾತಾವರಣವನ್ನು ಸೃಷ್ಟಿಸಿದೆ. ಇದರಿಂದ ನಿರಂತರವಾಗಿ ವಿಕಸನಗೊಳ್ಳುತ್ತಿರುವ ಜಗತ್ತಿನಲ್ಲಿ ಬೆಳವಣಿಗೆ ಕಾಣಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದರ ಜತೆಗೆ ಅದು ಸಾಂಸ್ಕೃತಿಕ ಪರಂಪರೆಯಲ್ಲೂ ಬೇರೂರಿರುವಂತೆ ಮಾಡುತ್ತಿದೆ.

ಪತಂಜಲಿ ಗುರುಕುಲಂ ಒಂದು ಹೊಸ ಪರಿಕಲ್ಪನೆಯಾಗಿದ್ದು, ಅದು ಸಾಂಪ್ರದಾಯಿಕ ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಪುನುರುಜ್ಜೀವನಗೊಳಿಸುತ್ತದೆ. , ಇದರ ಅಡಿಯಲ್ಲಿ ವಿದ್ಯಾರ್ಥಿಗಳು ಆಧ್ಯಾತ್ಮಿಕ ಮತ್ತು ಸಮಗ್ರ ರೀತಿಯಲ್ಲಿ ಕಲಿಯುತ್ತಿದ್ದಾರೆ. ಗುರುಕಲಂ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಬೌದ್ಧಿಕ ಶಿಕ್ಷಣದ ಜತೆಗೆ ವ್ಯಕ್ತಿತ್ವ ವಿಕಸನ, ನೈತಿಕ ಮೌಲ್ಯಗಳು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ರೂಢಿಸಿಕೊಳ್ಳಲೂ ಒತ್ತು ನೀಡುತ್ತಿದೆ. ವಿದ್ಯಾರ್ಥಿಗಳು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಕಲಿಯಲು ಮತ್ತು ಸಮಾಜದ ಬಗ್ಗೆ ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಲು ಪ್ರೇರೇಪಿಸಲಾಗುತ್ತದೆ. ಈ ಪಾರಂಪರಿಕ ಕಲಿಕಾ ವಿಧಾನಕ್ಕೆ ಹಿಂತಿರುಗುವ ಮೂಲಕ, ಭಾರತೀಯ ಶಿಕ್ಷಣದ ಶಾಶ್ವತ ಮೌಲ್ಯಗಳನ್ನು ಪತಂಜಲಿ ಮರಳಿ ತರುತ್ತಿದೆ. ಜತೆಗೆ ಕಲಿಕೆ ಮಾತ್ರವಲ್ಲದೇ ವಿದ್ಯಾರ್ಥಿಗಳನ್ನು ಸಮತೋಲಿತ ಮನುಷ್ಯರನ್ನಾಗಿ ಮಾಡುತ್ತಿದೆ.

ಪತಂಜಲಿಯ ಶಿಕ್ಷಣ ವ್ಯವಸ್ಥೆಯಲ್ಲಿ ಆಯುರ್ವೇದದ ಮೇಲೆ ಹೆಚ್ಚು ಒತ್ತು ನೀಡಿರುವುದು ಪ್ರಮುಖ ವಿಶೇಷಗಳಲ್ಲೊಂದು. ನೈಸರ್ಗಿಕ ಆರೋಗ್ಯವನ್ನು ಉತ್ತೇಜಿಸುವಲ್ಲಿ ಮುಂಚೂಣಿಯಲ್ಲಿರುವ ಪತಂಜಲಿ ಆಯುರ್ವೇದ ಶೈಕ್ಷಣಿಕ ಕೇಂದ್ರವಾಗಿ ತನ್ನನ್ನು ತಾನು ರೂಪಿಸಿಕೊಂಡಿದೆ. ವಿಶ್ವವಿದ್ಯಾಲಯದಲ್ಲಿ ಅಳವಡಿಸಿಕೊಂಡಿರುವ ಆಯುರ್ವೇದ ಪಠ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಮಗ್ರ ಚಿಕಿತ್ಸಾ ಪದ್ಧತಿಯಲ್ಲಿ ಆಳವಾದ ತಿಳಿವಳಿಕೆ ಹೊಂದುವಂತೆ ರೂಪಿಸಲಾಗಿದ್ದು, ಇದರಲ್ಲಿ ಪಾರಂಪರಿಕ ತಂತ್ರಗಳನ್ನು ಆಧುನಿಕ ವೈದ್ಯಕೀಯ ಚಿಕಿತ್ಸಾ ಪದ್ಧತಿಯೊಂದಿಗೆ ಹದವಾಗಿ ಬರೆಸಲಾಗಿದೆ. ಗಿಡಮೂಲಿಕೆ ಔಷಧಗಲ್ಲಿ ಪರಿಣಿತರಾಗುವುದಷ್ಟೇ ಅಲ್ಲದೆ, ವಿದ್ಯಾರ್ಥಿಗಳು ಬಹುಮುಖ್ಯವಾದ ಜೀವನಶೈಲಿ, ಪೌಷ್ಟಿಕಾಂಶ ಮತ್ತು ಮಾನಸಿಕ ಆರೋಗ್ಯ ಕುರಿತೂ ಜ್ಞಾನ ನೀಡಲಾಗುತ್ತಿದೆ. ಈ ಸಮಗ್ರ ವಿಧಾನವು ಪತಂಜಲಿ ಆಯುರ್ವೇದ ಶಿಕ್ಷಣವನ್ನು ದೇಶದ ಅತ್ಯುತ್ತಮ ಶೈಕ್ಷಣಿಕ ಕೇಂದ್ರಗಳಲ್ಲಿ ಒಂದನ್ನಾಗಿ ರೂಪುಗೊಳಿಸಿದೆ. ಭವಿಷ್ಯದ ವೈದ್ಯರನ್ನು ಆರೋಗ್ಯ ಕ್ಷೇತ್ರಗಳಲ್ಲಿ ಬದಲಾವಣೆ ತರುವಂತೆ ಸಜ್ಜುಗೊಳಿಸಲಾಗುತ್ತಿದೆ.

ಕಲಿಕಾ ಮಾದರಿಯು ಸ್ವಾಸ್ಥ್ಯ ಮತ್ತು ಜ್ಞಾನ ಕ್ಷೇತ್ರದಲ್ಲಿ ಭವಿಷ್ಯಕ್ಕೆ ಹೊಸರೂಪ ನೀಡುವಂತಿದ್ದು, ದೈಹಿಕ, ಮಾನಸಿಕ ಮತ್ತು ಅಧ್ಯಾತ್ಮಿಕ ಆರೋಗ್ಯ ವಿಷಯಗಳ ಕಲಿಕೆಗೆ ಒತ್ತು ನೀಡುವ ಪಠ್ಯಕ್ರಮವನ್ನು ಅಳವಡಿಸಿಕೊಂಡಿದೆ. ಸಮಗ್ರ ಕಲಿಕಾ ವಿಧಾನದಿಂದ ವಿದ್ಯಾರ್ಥಿಗಳು ಯೋಗಕ್ಷೇಮ, ಆರೋಗ್ಯ ಮತ್ತು ಸುಸ್ಥಿರತೆಯಲ್ಲಿ ವೈವಿಧ್ಯಮಯ ವೃತ್ತಿಜೀವನಕ್ಕೆ ಸಜ್ಜುಗೊಳಿಸುವಂತೆ ಸಿದ್ಧಪಡಿಸಲಾಗಿದೆ. ಪ್ರಾಯೋಗಿಕ ಜ್ಞಾನ ಮತ್ತು ನೈಜ ಜಗತ್ತಿನ ಕಾರ್ಯವಿಧಾನಗಳನ್ನು ಕೇಂದ್ರೀಕರಿಸಿ, ಪತಂಜಲಿಯ ಶೈಕ್ಷಣಿಕ ಉಪಕ್ರಮಗಳು ನುರಿತ ವೃತ್ತಿಪರರನ್ನು ಸಜ್ಜುಗೊಳಿಸುತ್ತಿರುವುದು ಮಾತ್ರವಲ್ಲ, ಬದಲಿಗೆ ಯೋಗಕ್ಷೇಮ ಕ್ಷೇತ್ರದ ರಾಯಭಾರಿಗಳಾಗಿ ಪದವೀಧರರನ್ನು ಸಿದ್ಧಪಡಿಸುತ್ತಿದೆ. ಇದು ಆರೋಗ್ಯಕರ ಸಮಾಜದ ಬೆಳವಣಿಗೆಗೆ ಸಹಕಾರಿಯಾಗಿದೆ.

ಶಿಕ್ಷಣದ ಬಗ್ಗೆ ಪತಂಜಲಿಯ ದೃಷ್ಟಿಕೋನವು ವೈಯಕ್ತಿಕ ಕಲಿಕೆ ಮತ್ತು ಸಾಧನೆಯನ್ನು ಮೀರಿದೆ. ಇದನ್ನು ರಾಷ್ಟ್ರೀಯ ಅಭಿವೃದ್ಧಿಯ ನೀಲನಕ್ಷೆಯಾಗಿ ವಿನ್ಯಾಸಗೊಳಿಸಲಾಗಿದೆ, ಇದು ದೇಶದ ಒಟ್ಟಾರೆ ಬೆಳವಣಿಗೆಗೆ ಕೊಡುಗೆ ನೀಡುತ್ತದೆ. ಶ್ರೇಷ್ಠ ಗುಣಮಟ್ಟದ ಎಲ್ಲರಿಗೂ ಸಿಗಬಹುದಾದ ಶಿಕ್ಷಣವನ್ನು ಸಾಂಪ್ರದಾಯಿಕ ಮತ್ತು ಆಧುನಿಕ ಕ್ಷೇತ್ರದಲ್ಲಿ ನೀಡುತ್ತಿರುವುದರಿಂದ ಪತಂಜಲಿಯು ಭವಿಷ್ಯದ ತಲೆಮಾರಿನ ನಾಯಕರನ್ನು ಸಜ್ಜುಗೊಳಿಸುತ್ತಿದ್ದು, ಅದರಿಂದ ಭಾರತದ ಆರ್ಥಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಾಧ್ಯವಾಗಲಿದೆ. ನೈತಿಕತೆ, ಸುಸ್ಥಿರತೆ ಮತ್ತು ರಾಷ್ಟ್ರದ ಹೆಮ್ಮೆಗೆ ಒತ್ತು ನೀಡುವ ಮೂಲಕ ಸಮಗ್ರ ಶಿಕ್ಷಣದ ಮೇಲೆ ಗಮನ ಕೇಂದ್ರೀಕರಿಸುವುದು ಪತಂಜಲಿಯ ಶೈಕ್ಷಣಿಕ ಉಪಕ್ರಮಗಳನ್ನು ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ಪ್ರಬಲ ಶಕ್ತಿಯನ್ನಾಗಿ ಮಾಡುತ್ತದೆ.

ಪತಂಜಲಿಯ ಶೈಕ್ಷಣಿಕ ಉಪಕ್ರಮಗಳು ಭಾರತದಲ್ಲಿನ ಕಲಿಕೆಗೆ ಹೊಸ ಮಾನದಂಡವನ್ನು ನಿಗದಿಪಡಿಸುತ್ತಿವೆ. ಪ್ರಾಚೀನ ಪದ್ಧತಿಯನ್ನು ಆಧುನಿಕ ಶಿಕ್ಷಣದೊಂದಿಗೆ ಬೆರೆಸುವ ಮೂಲಕ, ಕಾಲಾತೀತ ಮೌಲ್ಯಗಳನ್ನು ಪುನರುಜ್ಜೀವನಗೊಳಿಸುತ್ತ, ಸಮಗ್ರ ಸ್ವಾಸ್ಥ್ಯದ ಮೇಲೆ ಗಮನ ಕೇಂದ್ರೀಕರಿಸುವ ಶಿಕ್ಷಣದ ಭವಿಷ್ಯವನ್ನು ಪತಂಜಲಿ ರೂಪಿಸುತ್ತಿದೆ. ಜತೆಗೆ ಭಾರತದ ರಾಷ್ಟ್ರೀಯ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದೆ. ತನ್ನ ನವೀನ ಕಾರ್ಯಕ್ರಮಗಳ ಮೂಲಕ, ಪತಂಜಲಿ ವಿದ್ಯಾರ್ಥಿಗಳನ್ನು ಜ್ಞಾನ, ಬುದ್ಧಿವಂತಿಕೆ ಮತ್ತು ಸಮಗ್ರತೆಯೊಂದಿಗೆ ಮುನ್ನಡೆಸಲು ಸಜ್ಜುಗೊಳಿಸುತ್ತಿದೆ. ಪ್ರತಿಯೊಬ್ಬರಿಗೂ ಉಜ್ವಲ ಮತ್ತು ಹೆಚ್ಚು ಸುಸ್ಥಿರ ಭವಿಷ್ಯವನ್ನು ಖಾತ್ರಿಪಡಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.