ಸೋಮವಾರ, ಅಕ್ಟೋಬರ್ 26, 2020
23 °C

ಟಾಪ್‌–ನಾಚ್‌ ಕ್ಯಾಮೆರಾ ಮತ್ತು ಖಾಸಗಿತನ ಸುರಕ್ಷತೆ ಸೌಲಭ್ಯಗಳಿಂದಾಗಿ ಗ್ಯಾಲಕ್ಸಿ ಎ51 ಮತ್ತು ಎ71 ಮಾಡಿದೆ ಮೋಡಿ

ಪ್ರಾಯೋಜಿತ ಬರಹ Updated:

ಅಕ್ಷರ ಗಾತ್ರ : | |

ಗ್ರಾಹಕರ ಖಾಸಗಿತನದ ಸುರಕ್ಷತೆಗಾಗಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ51 ಮತ್ತು ಗ್ಯಾಲಕ್ಸಿ ಎ71 ಮಾದರಿಯ ಫೋನ್‌ಗಳಿಗೆ ಸಾಕಷ್ಟು ಅಪ್‌ಡೇಟ್‌ಗಳನ್ನು ಬಿಡುಗಡೆ ಮಾಡಿದೆ. ಅವುಗಳ ಪೈಕಿ ಬಹಳ ಗಮನ ಸೆಳೆದಿರುವುದು ಕ್ವಿಕ್‌ ಸ್ವಿಚ್‌. ಗ್ಯಾಲರಿ, ವೆಬ್‌ ಬ್ರೌಸರ್‌ ಹಾಗೂ ವಾಟ್ಸ್‌ಆ್ಯಪ್‌ ರೀತಿಯ ಆ್ಯಪ್‌ಗಳ ಬಳಕೆಯಲ್ಲಿ ಖಾಸಗಿ ಮೋಡ್‌ನಿಂದ ಸಾರ್ವಜನಿಕವಾಗಿ ಕಾಣಿಸಬಹುದಾದ ಸ್ಕ್ರೀನ್‌ಗೆ ಬದಲಿಸಿಕೊಳ್ಳಲು ಕ್ವಿಕ್‌ ಸ್ವಿಚ್‌ ಸಹಕಾರಿಯಾಗಿದೆ.

ನಾವು ನಮ್ಮ ಸ್ಮಾರ್ಟ್‌ಫೋನ್‌ಗಳನ್ನು ಹಲವು ಕಾರ್ಯಗಳಿಗೆ ಬಳಸುತ್ತೇವೆ. ನೆನಪಿನಲ್ಲಿ ಉಳಿಯುವಂತಹ ಕ್ಷಣಗಳನ್ನು ಚಿತ್ರೀಕರಿಸಲು, ಸ್ನೇಹಿತರೊಂದಿಗೆ ಗೇಮ್‌ ಆಡಲು, ಒಟಿಟಿಯಲ್ಲಿ ನಿರಂತರವಾಗಿ ಕಾರ್ಯಕ್ರಮಗಳನ್ನು ನೋಡಲು, ಶಾಲೆ ಅಥವಾ ಕಚೇರಿ ಕೆಲಸಗಳಿಗೆ ಸಂಬಂಧಿಸಿದ ವಿಡಿಯೊ ಕರೆಗಳಲ್ಲಿ ಭಾಗಿಯಾಗಲು ಅಥವಾ ನೋಟ್ಸ್‌ ತೆಗೆದುಕೊಳ್ಳಲು,...ಹೀಗೆ ಪ್ರತಿಯೊಂದು ಕೆಲಸಗಳಿಗೆ ಸ್ಮಾರ್ಟ್‌ಫೋನ್‌ ಉಪಯುಕ್ತವಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ51 ಮತ್ತು ಅದರ ದೊಡ್ಡಣ್ಣ ಗ್ಯಾಲಕ್ಸಿ ಎ71 ಫೋನ್‌ಗಳು ನಿಮಗೆ ಅಗತ್ಯವಿರುವ ಎಲ್ಲ ಕಾರ್ಯಾಚರಣೆಗಳನ್ನು ನಡೆಸಲು ಸಮರ್ಥವಾಗಿವೆ. ಗೇಮಿಂಗ್‌, ಅತ್ಯಮೂಲ್ಯ ಫೋಟೊಗಳನ್ನು ಕ್ಲಿಕ್ಕಿಸುವುದು ಅಥವಾ ವೃತ್ತಿಗೆ ಸಂಬಂಧಿಸಿದ ಕೆಲಸಗಳನ್ನು ಪೂರ್ಣಗೊಳಿಸುವುದು ಸಾಧ್ಯವಿದೆ. ಸ್ಯಾಮ್‌ಸಂಗ್‌ ಪ್ರಕಾರ, ಈ ಎರಡೂ ಮಾದರಿಯ ಸ್ಮಾರ್ಟ್‌ಫೋನ್‌ಗಳು 'ಉತ್ಕೃಷ್ಟ ಸ್ಕ್ರೀನ್‌, ಅತ್ಯುತ್ತಮ ಕ್ಯಾಮೆರಾ ಹಾಗೂ ದೀರ್ಘಾವಧಿ ಚಾರ್ಜ್‌ ಉಳಿಸಿಕೊಳ್ಳುವ ಬ್ಯಾಟರಿ' ಒಳಗೊಂಡಿವೆ.

ಸ್ಟ್ರಾಟೆಜಿ ಅನಾಲಿಟಿಕ್ಸ್‌ ಸಂಶೋಧನಾ ಸಂಸ್ಥೆಯ ಪ್ರಕಾರ, 2020ರ ಮೊದಲ ತ್ರೈಮಾಸಿಕದಲ್ಲಿ ಜಗತ್ತಿನಲ್ಲಿಯೇ ಅತಿ ಹೆಚ್ಚು ಮಾರಾಟವಾಗಿರುವ ಆ್ಯಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ 'ಗ್ಯಾಲಕ್ಸಿ ಎ51'.

ಎಲ್ಲಕ್ಕಿಂತ ಮುಖ್ಯವಾದುದೆಂದರೆ, ಈ ಸ್ಮಾರ್ಟ್‌ಫೋನ್‌ಗಳು 'ಆಲ್ಟ್‌ ಝಡ್‌ ಲೈಫ್‌' ಅನುಭವಿಸಲು ಅನುವು ಮಾಡಿಕೊಡುತ್ತವೆ. ಇದರಿಂದಾಗಿ ನಿಮ್ಮ ಖಾಸಗಿ ಕ್ಷಣಗಳು ಖಾಸಗಿಯಾಗಿಯೇ ಉಳಿಯುತ್ತವೆ.

ಆಲ್ಟ್‌ ಝಡ್‌ ಲೈಫ್‌: ಖಾಸಗಿತನದ ಸುರಕ್ಷತೆಗೆ ಆದ್ಯತೆ

ಪ್ರಸ್ತುತ ಹೊಸ ತಲೆಮಾರಿನವರು ಹಾಗೂ ಮಿಲೇನಿಯಲ್ಸ್ ಸ್ಮಾರ್ಟ್‌ಫೋನ್‌ಗಳಿಗೆ ಸಂಬಂಧಿಸಿದಂತೆ ಹಲವು ಬಗೆಯ ಖಾಸಗಿತನ ಸುರಕ್ಷತೆಯ ತೊಡಕುಗಳನ್ನು ಎದುರಿಸುತ್ತಿದ್ದಾರೆ. ಅದನ್ನು ಗಮನದಲ್ಲಿರಿಸಿ ಸ್ಯಾಮ್‌ಸಂಗ್‌ 'ಆಲ್ಟ್‌ ಝಡ್‌ ಲೈಫ್‌' ಹಾದಿ ಪರಿಚಯಿಸಿದೆ. ನಿಮ್ಮ ಖಾಸಗಿತನದ ಸುರಕ್ಷತೆಯ ಕಳವಳವನ್ನು ದೂರ ಮಾಡಿ ಗ್ಯಾಲಕ್ಸಿ ಎ51 ಮತ್ತು ಗ್ಯಾಲಕ್ಸಿ 71 ಫೋನ್‌ಗಳಲ್ಲಿನ ಎಲ್ಲ ಸೌಲಭ್ಯಗಳನ್ನು ನಿರಾತಂಕವಾಗಿ ಬಳಸುವಂತೆ ಮಾಡುವುದೇ ಆಲ್ಟ್‌ ಝಡ್‌ ಲೈಫ್‌.

ನಿಮ್ಮ ಸ್ನೇಹಿತ ಅಥವಾ ಒಡಹುಟ್ಟಿದವರು ನಿಮ್ಮ ಸ್ಮಾರ್ಟ್‌ಫೋನ್‌ ನೋಡಲು ಕೇಳಿದರೆ, ಅಲ್ಲೊಂದು ರೀತಿಯ ತಳಮಳ ಯಾವಾಗಲೂ ಇದ್ದದ್ದೇ. ನೀವು ಕ್ಲಿಕ್ಕಿಸಿರುವ ಫೋಟೊ ನೋಡಲು ಅಥವಾ ನೀವೇ ಹೇಳುತ್ತಿದ್ದ ಗೇಮ್‌ ಆಡಲು ಮಾತ್ರವೇ ಅವರು ನಿಮ್ಮ ಫೋನ್‌ ಕೇಳಿರಬಹುದು, ಆದರೂ ನಿಮಗೆ ಏನೋ ಒಂಥರ ಹಿಂಜರಿಕೆ ಉಂಟಾಗಿರುತ್ತದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ51 ಮತ್ತು ಎ71 ಮಾದರಿಯ ಫೋನ್‌ಗಳಲ್ಲಿ ಬಿಡುಗಡೆ ಮಾಡಿರುವ ಎರಡು ಹೊಸ ಸೌಲಭ್ಯಗಳಿಂದಾಗಿ ನೀವು ನಿರಾತಂಕವಾಗಿ ಯಾರಿಗೆ ಬೇಕಾದರೂ ನಿಮ್ಮ ಸ್ಮಾರ್ಟ್‌ಫೋನ್‌ ಒಪ್ಪಿಸಬಹುದಾಗಿದೆ.

ಕ್ವಿಕ್‌ ಸ್ವಿಚ್‌, ಹೆಸರೇ ಹೇಳುವಂತೆ ಗ್ಯಾಲರಿ, ವಾಟ್ಸ್‌ಆ್ಯಪ್‌ ಹಾಗೂ ಇತರೆ ಆ್ಯಪ್‌ಗಳ ಬಳಕೆಯಲ್ಲಿ ಖಾಸಗಿ ಮೋಡ್‌ನಿಂದ ಸಾರ್ವಜನಿಕವಾಗಿ ಕಾಣಿಸಬಹುದಾದ ಸ್ಕ್ರೀನ್‌ಗೆ ಕ್ಷಣಾರ್ಧದಲ್ಲೇ ಬದಲಾಯಿಸಲು ಸಹಕಾರಿಯಾಗಿದೆ. ಪವರ್‌ ಬಟನ್‌ ಕೇವಲ ಎರಡು ಬಾರಿ ಒತ್ತುವ ಮೂಲಕ ಇದನ್ನು ಸಾಧ್ಯವಾಗಿಸಬಹುದು. ಕಚೇರಿಯಲ್ಲಿ ಪ್ರೆಸೆಂಟೇಷನ್‌ ಮಾಡುವಾಗ ಅಥವಾ ಕುಟುಂಬದ ಸದಸ್ಯರಿಗೆ ಕಚೇರಿಯಿಂದ ಮರಳಿದ ನಂತರ ಫೋಟೊಗಳನ್ನು ತೋರಿಸುವ ಸಂದರ್ಭಗಳಲ್ಲಿ 'ಕ್ವಿಕ್‌ ಸ್ವಿಚ್‌' ಸಂಕಟಗಳಿಂದ ಪಾರು ಮಾಡುತ್ತದೆ.

ಸಾಧನದೊಂದಿಗೆ ಅಳವಡಿಸಲಾಗಿರುವ ಕೃತಕಬುದ್ಧಿ ಮತ್ತೆ (ಎಐ) ಆಧಾರಿತ ಇಂಟೆಲಿಜೆಂಟ್‌ ಕಂಟೆಂಟ್‌ ಸಜೆಷನ್ಸ್‌, ಗ್ಯಾಲರಿಯಲ್ಲಿ ಖಾಸಗಿಯಾಗಿ ಸುರಕ್ಷಿತವಾಗಿ ಉಳಿಸಬೇಕಾದ ಫೋಟೊಗಳ ಬಗ್ಗೆ ಸಲಹೆ ಮಾಡುತ್ತದೆ. ಇದು ಹಲವು ಸಂದರ್ಭಗಳಲ್ಲಿ ಬಹಳ ಉಪಯುಕ್ತವಾಗುತ್ತದೆ. ಉದಾಹರಣೆಗೆ ನೀವು ವಾರಾಂತ್ಯದ ರಜೆ ಮುಗಿಸಿಕೊಂಡು ಆಗ ತಾನೇ ಬಂದಿರುತ್ತೀರಿ ಹಾಗೂ ನೇರವಾಗಿ ಕಚೇರಿಗೆ ತೆರಳಬೇಕಾಗುತ್ತದೆ. ಖಾಸಗಿಯಾಗಿ ಉಳಿಸಬೇಕಾದ ಚಿತ್ರಗಳು ಅಥವಾ ಮುಖಗಳನ್ನು ಆಯ್ಕೆ ಮಾಡಿದರೆ ಸಾಕು, ಉಳಿದ ಎಲ್ಲವನ್ನೂ ಎಐ ಮಾಡಿ ಮುಗಿಸುತ್ತದೆ!

ಖಾಸಗಿತನದ ಸುರಕ್ಷತೆಯ ಅತ್ಯಾಧುನಿಕ ಅನ್ವೇಷಣೆಗಳು

ಇಲ್ಲಿ ನಟಿ ರಾಧಿಕಾ ಮದನ್‌ ಕ್ವಿಕ್‌ ಸ್ವಿಚ್‌ ಸೌಲಭ್ಯ ಬಳಸಿ ಹೇಗೆ ತಮ್ಮ ಸೋದರಿಯ (ಶಿಖಾ ತಾಲಸಾನಿಯಾ ನಟಿಸಿದ್ದಾರೆ) ಗೂಢಾಚಾರಿಕೆಯಿಂದ ತಪ್ಪಿಸಿಕೊಂಡರು ಎಂಬುದನ್ನು ತೋರಿಸಿದ್ದಾರೆ. ರಾಧಿಕಾ ಅವರ ಮೊಬೈಲ್‌ ಇಣುಕಿ ನೋಡುತ್ತಿದ್ದಂತೆ ಎಲ್ಲವೂ ಬದಲಾಗಿರುತ್ತದೆ.

ಈ ಸೌಲಭ್ಯವನ್ನು ಮತ್ತಷ್ಟು ಚೆನ್ನಾಗಿ ತಿಳಿದುಕೊಳ್ಳಲು ಈ ವಿಡಿಯೊ ನೋಡಿ.

ಇಂಥ ಖಾಸಗಿತನದ ಸುರಕ್ಷತೆಯನ್ನು ಯಾರು ತಾನೇ ಅನುಭವಿಸಲು ಇಷ್ಟ ಪಡುವುದಿಲ್ಲ? ಗ್ಯಾಲಕ್ಸಿ ಎ51 ಮತ್ತು ಗ್ಯಾಲಕ್ಸಿ ಎ71 ಎರಡೂ ಮಾದರಿಯ ಸ್ಮಾರ್ಟ್‌ಫೋನ್‌ಗಳ ಹಾರ್ಡ್‌ವೇರ್‌ ಮತ್ತು ಸಾಫ್ಟ್‌ವೇರ್‌ನಲ್ಲಿ ಮಿಲಿಟರಿ ದರ್ಜೆಯ ಸುರಕ್ಷತಾ ವ್ಯವಸ್ಥೆ ಸ್ಯಾಮ್‌ಸಂಗ್‌ ನಾಕ್ಸ್‌ ಇದ್ದು, ಕ್ವಿಕ್‌ ಸ್ವಿಚ್‌ ಇದರ ಸುರಕ್ಷತೆಗೆ ಒಳಪಟ್ಟಿದೆ.
 
ಅತ್ಯುತ್ತಮ ಕ್ಯಾಮರಾ ಸೌಲಭ್ಯಗಳು

ಎರಡೂ ಮಾದರಿಯ ಫೋನ್‌ಗಳ ಕ್ಯಾಮೆರಾ ಸೌಲಭ್ಯಗಳ ಕುರಿತು ಈಗ ತಿಳಿಯೋಣ.

ನಿಮ್ಮ ಸ್ನೇಹಿತ ಓಟದ ಸ್ಪರ್ಧೆಯಲ್ಲಿರುವ ವಿವರವಾದ ಚಿತ್ರವನ್ನು ತೆಗೆಯಬೇಕೆ? ಇದರಲ್ಲಿ ಪ್ರಯತ್ನಿಸಿ. ದೆಹಲಿಯ ಇಂಡಿಯಾ ಗೇಟ್‌ನ್ನು ವೈಡ್‌–ಆ್ಯಂಗಲ್‌ನಲ್ಲಿ ಸೆರೆ ಹಿಡಿಯಬೇಕೆ? ಇದರಲ್ಲಿ ಪ್ರಯತ್ನಿಸಿ. ನಿಮ್ಮ ಗೆಳೆಯನ ಅಂತಹ ಪೋರ್ಟ್ರೇಟ್‌ ಶಾಟ್‌ ಬೇಕೆ? ಇದರಲ್ಲಿ ಪ್ರಯತ್ನಿಸಿ. ಎಲೆಯ ಮೇಲಿರುವ ಆ ಜೀರುಂಡೆಯ ಚಿತ್ರವನ್ನು ತೆಗೆಯಬೇಕೆ? ಇದರಲ್ಲಿ ಪ್ರಯತ್ನಿಸಿ. ಈ ಎಲ್ಲವನ್ನು ಗ್ಯಾಲಕ್ಸಿ ಎ51 ಮತ್ತು ಎ71 ಫೋನ್‌ಗಳಲ್ಲಿ ಸೆರೆಹಿಡಿಯುವುದು ಸಾಧ್ಯವಿದೆ. ಎರಡೂ ಫೋನ್‌ಗಳಲ್ಲಿ ಬೇರೆ ಬೇರೆ ಸಾಮರ್ಥ್ಯದ ಕ್ವಾಡ್‌–ಕ್ಯಾಮೆರಾ (ನಾಲ್ಕು ಕ್ಯಾಮೆರಾ) ಅಳವಡಿಸಲಾಗಿದೆ.

ಗ್ಯಾಲಕ್ಸಿ ಎ51 ಫೋನ್‌ನಲ್ಲಿ 48–ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ, 12–ಮೆಗಾಪಿಕ್ಸೆಲ್‌ ವೈಡ್‌ ಆ್ಯಂಗಲ್‌ ಕ್ಯಾಮೆರಾ, 5–ಮೆಗಾಪಿಕ್ಸೆಲ್‌  ಡೆಪ್ತ್‌ ಸೆನ್ಸರ್‌ ಹಾಗೂ 5–ಮೆಗಾಪಿಕ್ಸೆಲ್‌ ಮ್ಯಾಕ್ರೊ ಕ್ಯಾಮೆರಾ ನೀಡಲಾಗಿದೆ. ಮುಂಭಾಗದಲ್ಲಿ ಸೆಲ್ಫಿಗಾಗಿ 32–ಮೆಗಾಪಿಕ್ಸೆಲ್‌ ಕ್ಯಾಮೆರಾ ಅಳವಡಿಸಲಾಗಿದೆ.

ಗ್ಯಾಲಕ್ಸಿ ಎ71 ಫೋನ್‌ನಲ್ಲಿ 64–ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ, 12–ಮೆಗಾಪಿಕ್ಸೆಲ್‌ ಅಲ್ಟ್ರಾ ವೈಡ್‌ ಲೆನ್ಸ್‌, 5–ಮೆಗಾಪಿಕ್ಸೆಲ್‌  ಮ್ಯಾಕ್ರೊ ಕ್ಯಾಮೆರಾ ಹಾಗೂ 5–ಮೆಗಾಪಿಕ್ಸೆಲ್‌ ಡೆಪ್ತ್ ಕ್ಯಾಮೆರಾ ಇದೆ. ಮುಂಭಾಗದಲ್ಲಿ ಸೆಲ್ಫಿಗಾಗಿ 32–ಮೆಗಾಪಿಕ್ಸೆಲ್‌ ಕ್ಯಾಮೆರಾ ನೀಡಲಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್‌20 ಫೋನ್‌ನ ಅತ್ಯಾಧುನಿಕ ಕ್ಯಾಮೆರಾ ಸೌಲಭ್ಯಗಳನ್ನು ಗ್ಯಾಲಕ್ಸಿ ಎ51 ಮತ್ತು ಎ71 ಫೋನ್‌ಗಳಿಗೆ ತರಲಾಗಿದೆ. ಇಲ್ಲಿವೆ ನೀವು ಪ್ರಯತ್ನಿಸಲು ಇಷ್ಟಪಡಬಹುದಾದ ಸೌಲಭ್ಯಗಳು:

* ಸಿಂಗಲ್‌ ಟೇಕ್‌: ಇದು ಗ್ಯಾಲಕ್ಸಿ ಎಸ್20 ಫೋನ್‌ನ ಅತ್ಯಾಧುನಿಕವಾದ ಸೌಲಭ್ಯವಾಗಿದ್ದು, ಇದೇ ಫೀಚರ್‌ ಗ್ಯಾಲಕ್ಸಿ ಎ51 ಫೋನ್‌ಗಳಲ್ಲಿ ಸಿಗುತ್ತಿದೆ ಎಂಬುದನ್ನು ತಿಳಿದು ಗ್ರಾಹಕರಲ್ಲಿ ಸಂತಸ ಮೂಡಿದೆ. ಸಿಂಗಲ್‌ ಟೇಕ್‌ ಮೂಲಕ ಒಮ್ಮೆಗೆ 10 ಫೋಟೊಗಳು ಹಾಗೂ ವಿಡಿಯೊಗಳನ್ನು ಸೆರೆ ಹಿಡಿಯಬಹುದಾಗಿದೆ. ಒಳ್ಳೆಯ ಫೋಟೊ ತೆಗೆಯಲು ಹೇಗೆ ಸರಿಯಾಗಿ ಫ್ರೇಮ್‌ ಮಾಡುವುದೆಂದು ತಲೆ ಕೆಡಿಸಿಕೊಳ್ಳಬೇಕಿಲ್ಲ. ಫೋನ್‌ನಲ್ಲಿ ಕ್ಯಾಮೆರಾ ತೆಗೆದು ಸಿಂಗಲ್‌ ಟೇಕ್‌ ಆಯ್ಕೆ ಮಾಡಿ, ಕ್ಲಿಕ್‌ ಮಾಡಿ ಹಾಗೂ ನಿಮ್ಮ ಮುಂದೆ ಫೋಟೊಗೆ ನಿಂತಿರುವವರು ಸಂಭ್ರಮಿಸುತ್ತಿರಲಿ.

ಫೋಟೊ ಕ್ಲಿಕ್‌ ಮಾಡಿದ ಮೇಲೆ ಅದನ್ನು ಕಾಣಲು ಸಾಮಾನ್ಯವಾಗಿ ಗ್ಯಾಲರಿಯಲ್ಲಿ ಹುಡುಕಾಡುತ್ತೇವೆ. ಆದರೆ,  ಸ್ಯಾಮ್‌ಸಂಗ್‌ ಸಿಂಗಲ್‌ ಟೇಕ್‌ ಒಳ್ಳೆಯ ಶಾಟ್‌ಗಳು ಮತ್ತು ಅತ್ಯುತ್ತಮ ಕ್ಷಣಗಳನ್ನು ಸೆರೆ ಮಾಡಿ ಒಂದೇ ಆಲ್ಬಮ್‌ ಮಾಡುತ್ತದೆ. ಪುಟ್ಟ ವಿಡಿಯೊಗಳು, ಜಿಫ್‌ ಆ್ಯನಿಮೇಷನ್‌ಗಳು, ಸ್ಟೈಲೈಜ್ಡ್‌ ಇಮೇಜ್‌ಗಳು ಸೇರಿದಂತೆ ಇನ್ನಷ್ಟು ಎಐನಿಂದಾಗಿ ಪಡೆಯಬಹುದಾಗಿದೆ.

* ನೈಟ್‌ ಹೈಪರ್‌ಲ್ಯಾಪ್ಸ್‌: ಪ್ರವಾಸಿಗರಾಗಿ ನಗರದಲ್ಲಿ ಸುತ್ತಾಡುವುದು ಸದಾ ಉತ್ತಮ ಅನುಭವವೇ ಆಗಿರುತ್ತದೆ. ಅಲ್ಲಿನ ಓಡಾಟದ ಕ್ಷಣಗಳಲ್ಲಿ ಸೆರೆ ಹಿಡಿದು, ನಮಗೆ ಬೇಕಾದಗಲೆಲ್ಲ ಅವುಗಳನ್ನು ನೋಡುತ್ತ ನೆನಪಿಗೆ ಜಾರುವುದು ನಮಗೆಲ್ಲರಿಗೂ ಇಷ್ಟವಾದುದ್ದೇ ಆಗಿದೆ. ಹೈಪರ್‌ಲ್ಯಾಪ್ಸ್‌ ಸೌಲಭ್ಯದ ಮೂಲಕ ಜನರು ತಮ್ಮದೇ ಆದ ಟೈಮ್‌–ಲ್ಯಾಪ್ಸ್‌ ವಿಡಿಯೊಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದು, ಜನಪ್ರಿಯತೆ ಪಡೆದಿದೆ. ಅದೇ ಸ್ಯಾಮ್‌ಸಂಗ್‌ ಎ51 ಫೋನ್‌ಗಳಲ್ಲಿರುವ ನೈಟ್‌ ಹೈಪರ್‌ಲ್ಯಾಪ್ಸ್‌ನಿಂದ ವಿಡಿಯೊಗಳು ಮಧ್ಯರಾತ್ರಿಯಲ್ಲೂ ಇನ್ನಷ್ಟು ಸ್ಪಷ್ಟ ಮತ್ತು ಬ್ರೈಟ್‌ ಆಗಿರುತ್ತವೆ. ಕೆಲವು ಸೆಕೆಂಡ್‌ಗಳ ಲಾಂಗ್‌ ಎಕ್ಸ್‌ಪೋಷರ್ ಶಾಟ್‌ಗಳು ಬೆಳಕು ಮತ್ತು ಮೋಶನ್‌ನ ಮೂಲಕ ವಿಡಿಯೊ ಚಿತ್ತಾರವನ್ನು ಸೃಷ್ಟಿಸುತ್ತದೆ.

* ಕಸ್ಟಮ್‌ ಫಿಲ್ಟರ್‌: ಫೋಟೊಗಳಿಗೆ ಹೊಸ ಬಣ್ಣ ನೀಡುವುದು ಕಸ್ಟಮ್‌ ಫಿಲ್ಟರ್‌ನಿಂದ ಸಾಧ್ಯವಾಗುತ್ತದೆ. ಫೋಟೊ ಹಿಂಬದಿಯಲ್ಲಿ ವಿವಿಧ ರೀತಿಯ ಬ್ಲರ್‌ ಬಳಕೆ ಮಾಡಬಹುದು ಹಾಗೂ ನಮ್ಮ ಕಲ್ಪನೆಯನ್ನು ಮತ್ತಷ್ಟು ವಿಸ್ತರಿಸಬಹುದಾಗಿದೆ.

* ಸ್ಮಾರ್ಟ್‌ ಸೆಲ್ಫಿ ಆ್ಯಂಗಲ್‌: ಮುಂಬದಿಯ ಕ್ಯಾಮೆರಾದಲ್ಲಿ ಶೂಟ್ ಮಾಡುವಾಗ ಒಬ್ಬ ವ್ಯಕ್ತಿಗಿಂತ ಹೆಚ್ಚಿನ ಜನರು ಇದ್ದರೆ, ಕ್ಯಾಮೆರಾ ತಾನಾಗಿಯೇ ವೈಡ್‌–ಆ್ಯಂಗಲ್‌ ಮೋಡ್‌ಗೆ ಬದಲಿಸಿಕೊಳ್ಳುತ್ತದೆ. ಪ್ರತಿ ಬಾರಿಯೂ ಅದ್ಭುತವಾದ ಸೆಲ್ಫಿ ಪಡೆಯಬಹುದು.

* ಕ್ವಿಕ್‌ ವಿಡಿಯೊ: ಕ್ಯಾಮೆರಾ ಬಟನ್‌ ಒತ್ತಿ ಹಿಡಿಯುವ (ಲಾಂಗ್‌ ಪ್ರೆಸ್‌) ಮೂಲಕ ಕ್ವಿಕ್‌ ವಿಡಿಯೊ ತೆಗೆದುಕೊಳ್ಳಬಹುದು. ಫೋಟೊದಿಂದ ವಿಡಿಯೊ ಮೋಡ್‌ಗೆ ಬದಲಿಸಿಕೊಂಡು ಚಿತ್ರೀಕರಿಸುವಷ್ಟರಲ್ಲಿ 'ಆ ಅದ್ಭುತ ಕ್ಷಣ' ಕಳೆದು ಹೋಗಿರುತ್ತದೆ. ಅದನ್ನು ಕಳೆದುಕೊಳ್ಳದಿರಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕ್ಯಾಮೆರಾ ಬಟನ್‌ ಒತ್ತಿ ಹಿಡಿದು ವಿಶೇಷ ಸಂದರ್ಭಗಳನ್ನು ರೆಕಾರ್ಡ್‌ ಮಾಡುವುದು ಶುರುಮಾಡಿ. ಓಟದ ಸ್ಪರ್ಧೆಯಲ್ಲಿರುವ ನಿಮ್ಮ ಸ್ನೇಹಿತರ ಅಥವಾ ನಿಮ್ಮ ಹುಟ್ಟು ಹಬ್ಬದ ಸಮಾರಂಭದಲ್ಲಿ ನಿಮ್ಮ ಸಂಬಂಧಿ ಹಾಡುತ್ತಿರುವುದು, ಹೀಗೆ ಯಾವುದೇ ಸಂದರ್ಭವನ್ನು ಥಟ್ಟನೆ ರೆಕಾರ್ಡ್‌ ಮಾಡಿಕೊಳ್ಳಬಹುದು.

* ರೆಕಾರ್ಡಿಂಗ್‌ ಮಾಡುವಾಗ ಕ್ಯಾಮೆರಾ ಸ್ವಿಚ್‌: ಹಿಂಬದಿ ಕ್ಯಾಮೆರಾದಲ್ಲಿ ವಿಡಿಯೊ ರೆಕಾರ್ಡ್‌ ಮಾಡುವಾಗ ಮುಂದಿನ ಕ್ಯಾಮೆರಾಗೆ ಬದಲಿಸಿಕೊಳ್ಳುವುದು ಅಥವಾ ಮುಂದಿನಿಂದ ಹಿಂದಿನ ಕ್ಯಾಮೆರಾಗೆ ಬದಲಿಸಿಕೊಳ್ಳುವಾಗ ಪ್ರತಿ ಬಾರಿಯೂ ರೆಕಾರ್ಡಿಂಗ್‌ ನಿಲ್ಲಿಸಬೇಕಾಗುತ್ತದೆ. ಆದರೆ, ಗ್ಯಾಲಕ್ಸಿ ಎ51 ಫೋನ್‌ನಲ್ಲಿ ಕ್ವಾಮೆರಾ ಸ್ವಿಚ್‌ ಸೌಲಭ್ಯ ನೀಡಲಾಗಿದ್ದು, ಅತ್ಯುತ್ತಮ ಕ್ಷಣಗಳನ್ನು ಯಾವುದೇ ಅಡಚಣೆ ಇಲ್ಲದೆಯೇ ರೆಕಾರ್ಡ್‌ ಮಾಡುತ್ತ ಮುಂದಿನ ಕ್ಯಾಮೆರಾ ಮತ್ತು ಹಿಂದಿನ ಕ್ಯಾಮೆರಾಗೆ ಸುಲಭವಾಗಿ ಬದಲಿಸಿಕೊಳ್ಳಬಹುದು.

* ಎಐ ಗ್ಯಾಲರಿ ಜೂಮ್‌: ಕಡಿಮೆ ರೆಸಲ್ಯೂಷನ್‌ ಚಿತ್ರಗಳ ಗುಣಮಟ್ಟ ಹೆಚ್ಚಿಸಲು ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಎಐ ಗ್ಯಾಲರಿ ಜೂಮ್‌ ಮೂಲಕ ಅವಕಾಶ ನೀಡುತ್ತದೆ. ಪಿಕ್ಸಲೇಟ್‌ ಮತ್ತು ಬ್ಲರ್‌ ಆಗಿರುವ ಚಿತ್ರಗಳ ಗುಣಮಟ್ಟ ಹೆಚ್ಚಿಸುವ ಮೂಲಕ ಉತ್ತಮ ಚಿತ್ರಗಳಾಗಿ ಕಾಣಿಸಲು ಈ ಸೌಲಭ್ಯ ಸಹಕಾರಿಯಾಗಿದೆ.

ಗ್ಯಾಲಕ್ಸಿ ಎ51 ಫೋನ್‌ ಕುರಿತು ಇನ್ನಷ್ಟು ವಿವರ

ಈ ಫೋನ್‌ ಎರಡು ವೇರಿಯಂಟ್‌ಗಳಲ್ಲಿ ಲಭ್ಯವಿದೆ:
– 6ಜಿಬಿ ರ್‍ಯಾಮ್‌ ಮತ್ತು 128ಜಿಬಿ ಸಂಗ್ರಹ ಸಾಮರ್ಥ್ಯದ ಫೋನ್‌ಗೆ ₹22,999
– 8ಜಿಬಿ ರ್‍ಯಾಮ್‌ ಮತ್ತು 128ಜಿಬಿ ಸಂಗ್ರಹ ಸಾಮರ್ಥ್ಯದ ಫೋನ್‌ಗೆ ₹24,499

ಎರಡೂ ವೇರಿಯಂಟ್‌ಗಳು ಪ್ರಿಸಮ್‌ ಕ್ರಷ್ ವೈಟ್‌, ಪ್ರಿಸಮ್‌ ಕ್ರಷ್‌ ಬ್ಲ್ಯಾಕ್‌, ಪ್ರಿಸಮ್‌ ಕ್ರಷ್‌ ಬ್ಲೂ ಹಾಗೂ ಹೇಜ್‌ ಕ್ರಷ್‌ ಸಿಲ್ವರ್‌ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ. ನೀವು ಯಾವುದೇ ಬಣ್ಣ ಆಯ್ಕೆ ಮಾಡಿದರೂ ಗ್ಯಾಲಕ್ಸಿ ಎ51 ಗಮನ ಸೆಳೆಯುತ್ತದೆ.

ಗ್ಯಾಲಕ್ಸಿ ಎ51 ಫೋನ್‌ನಲ್ಲಿ 6.5 ಇಂಚು ಸೂಪರ್‌ ಅಮೊಲೆಡ್‌ ಫುಲ್‌ ಎಚ್‌ಡಿ+(1,080x2,400 ಪಿಕ್ಸೆಲ್ಸ್) ಡಿಸ್‌ಪ್ಲೇ , ಆಕ್ಟಾ–ಕೋರ್‌ ಎಕ್ಸಿನಾಕ್ಸ್‌ 9611 ಪ್ರೊಸೆಸರ್‌ ಅಳವಡಿಸಲಾಗಿದೆ. ಹೊಸ ರೀತಿಯ ಡಿಸ್‌ಪ್ಲೇ ನೀವು ಮತ್ತು ನಿಮ್ಮ ಸ್ನೇಹಿತರೆಲ್ಲ ಒಟ್ಟಿಗೆ ಫೋಟೊಗಳನ್ನು ನೋಡಲು ಅಥವಾ ಯುಟ್ಯೂಬ್‌ ವಿಡಿಯೊಗಳನ್ನು ಯಾವುದೇ ಹಿಂಜರಿಕೆ ಇಲ್ಲದೆ ನೋಡಲು ಅನುವು ಮಾಡಿಕೊಡುತ್ತದೆ.

ಈ ಸ್ಮಾರ್ಟ್‌ಫೋನ್‌ 4,000ಎಂಎಎಚ್‌ ಬ್ಯಾಟರಿ ಜೊತೆಗೆ 15 ವ್ಯಾಟ್‌ ಫಾಸ್ಟ್‌ ಚಾರ್ಜಿಂಗ್‌ ವ್ಯವಸ್ಥೆ ಹೊಂದಿದೆ. ಇದರಿಂದಾಗಿ ದೀರ್ಘಾವಧಿ ವರೆಗೂ ಗೇಮ್‌ ಆಡುವುದು ಅಥವಾ ಒಟಿಟಿ ವೇದಿಕೆಗಳಲ್ಲಿ ಒಂದರ ಹಿಂದೊಂದು ಕಾರ್ಯಕ್ರಮಗಳನ್ನು ಅಡಚಣೆಯಿಲ್ಲದೆ ನೋಡಬಹುದು. ಫೋನ್‌ ಒನ್‌ ಯುಐ 2.0 ಸಾಫ್ಟ್‌ವೇರ್‌ನಲ್ಲಿ (ಆ್ಯಂಡ್ರಾಯ್ಡ್‌ 10) ಕಾರ್ಯಾಚರಿಸುತ್ತದೆ.

ಗ್ಯಾಲಕ್ಸಿ ಎ71 ಫೋನ್‌ನಲ್ಲಿರುವ ಇತರೆ ಸೌಲಭ್ಯಗಳು

ಗ್ಯಾಲಕ್ಸಿ ಎ71 ಫೋನ್‌ನಲ್ಲಿ 6.7 ಇಂಚು (1,080 x 2,400 ಪಿಕ್ಸೆಲ್ಸ್) ಇನ್ಫಿನಿಟಿ–ಒ ಸೂಪರ್‌ ಅಮೊಲೆಡ್‌ ಪ್ಲಸ್‌ ಡಿಸ್‌ಪ್ಲೇ, ಕ್ವಾಲ್‌ಕಾಮ್‌ ಸ್ನ್ಯಾಪ್‌ಡ್ರ್ಯಾಗನ್‌ 730 ಆಕ್ಟಾ–ಕೋರ್‌ ಚಿಪ್‌ಸೆಟ್‌ ಅಳವಡಿಸಲಾಗಿದೆ. 8ಜಿಬಿ ರ್‍ಯಾಮ್‌ ಮತ್ತು 128ಜಿಬಿ ಸಂಗ್ರಹ ಸಾಮರ್ಥ್ಯವಿದ್ದು, ಒಮ್ಮೆಗೆ ಹಲವು ಕಾರ್ಯಗಳನ್ನು ನಡೆಸಲು ಈ ಫೋನ್‌ ಅನುಕೂಲಕರವಾಗಿದೆ.  

ಇದರಲ್ಲಿ 4,500ಎಂಎಎಚ್‌ ಬ್ಯಾಟರಿ ಇದ್ದು, 25ವ್ಯಾಟ್‌ ಫಾಸ್ಟ್‌ ಚಾರ್ಜಿಂಗ್‌ ವ್ಯವಸ್ಥೆ ನೀಡಲಾಗಿದೆ. ಗ್ಯಾಲಕ್ಸಿ ಎ71 ಫೋನ್‌ 8ಜಿಬಿ ರ್‍ಯಾಮ್‌ ಮತ್ತು 128ಜಿಬಿ ಸಂಗ್ರಹ ಸಾಮರ್ಥ್ಯದ ಒಂದು ಮಾದರಿಯಲ್ಲಿ ಮಾತ್ರ ಸಿಗುತ್ತದೆ. ಇದರ ಬೆಲೆ ₹29,499 ನಿಗದಿಯಾಗಿದೆ.

ಈ ಎಲ್ಲ ಸಾಮರ್ಥ್ಯಗಳೊಂದಿಗೆ ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ ಫೋಟೊಶೂಟ್‌ ಮಾಡುವುದು, ಕಾರ್ಯಕ್ರಮಗಳ ವೀಕ್ಷಣೆ, ಕಾಲ್‌ ಆಫ್‌ ಡ್ಯೂಟಿ: ಮೊಬೈಲ್‌ ಸೆಷನ್ಸ್‌ ಗೇಮ್‌ ಆಡುವುದು ಮುದವಾದ ಅನುಭವ ನೀಡುತ್ತವೆ. ಯಾವುದೇ ಕಾರ್ಯಾಚರಣೆಯನ್ನೂ ಪೂರ್ಣ ಸಾಮರ್ಥ್ಯದೊಂದಿಗೆ ನಡೆಸುತ್ತದೆ. ಹಾಗೇ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಖಾಸಗಿತನ ಸುರಕ್ಷತೆಗೆ ತೊಡಕಾಗದಂತೆ ಮುಂದುವರಿಯುವಿರಿ.