ಮಂಗಳವಾರ, ಜನವರಿ 21, 2020
29 °C

ಉಳಿತಾಯ ಖಾತೆಗೆ 3 ತಿಂಗಳೊಳಗೆ ಬಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಉಳಿತಾಯ ಖಾತೆ ದಾರರಿಗೆ ಸಿಹಿ ಸುದ್ದಿ. ಇನ್ನು ಮುಂದೆ ಬ್ಯಾಂಕುಗಳು ನಿಶ್ಚಿತ ಠೇವಣಿಗೆ ನೀಡು­ವಂತೆಯೇ ಉಳಿತಾಯ ಖಾತೆಯಲ್ಲಿನ ಮೊತ್ತಕ್ಕೂ ಮೂರು ತಿಂಗಳಿಗಿಂತ ಮುಂಚೆಯೇ ಬಡ್ಡಿ ಜಮಾ ಮಾಡಲಿವೆ.ಈವರೆಗೂ ಬ್ಯಾಂಕುಗಳು ಉಳಿ­ತಾಯ ಖಾತೆಯಲ್ಲಿನ ಮೊತ್ತಕ್ಕೆ ನೀಡುವ ಬಡ್ಡಿಯನ್ನು ಆರು ತಿಂಗಳಿ­ಗೊಮ್ಮೆ ಖಾತೆಗೆ ಜಮಾ ಮಾಡುತ್ತಿದ್ದವು. ಆದರೆ, ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಸೂಚನೆ ಅನ್ವಯ ಇನ್ನು ಮುಂದೆ ಮೂರು ತಿಂಗಳಿಗಿಂತ ಮುಂಚಿತ­ವಾಗಿ­ಯೇ ಬಡ್ಡಿ ನೀಡಬೇಕಾಗಿದೆ.

ಪ್ರತಿಕ್ರಿಯಿಸಿ (+)