ಮಂಗಳವಾರ, ಮಾರ್ಚ್ 9, 2021
30 °C
ದ.ಕೊರಿಯಾ ಪಾಲುದಾರಿಕೆಯಲ್ಲಿ ಹೊಸ ಘಟಕ

₨60ಕೋಟಿ ಹೂಡಿಕೆ: ಗೋಗ್ರೀನ್‌ ಬಿಒವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

₨60ಕೋಟಿ ಹೂಡಿಕೆ: ಗೋಗ್ರೀನ್‌ ಬಿಒವಿ

ಬೆಂಗಳೂರು: ಬ್ಯಾಟರಿ ಆಧಾರಿತ ದ್ವಿಚಕ್ರ ವಾಹನಗಳಿಗೆ ನಿದಾನವಾಗಿ ಬೇಡಿಕೆ ಹೆಚ್ಚುತ್ತಿದೆ. ಎಲೆಕ್ಟ್ರಿಕ್‌ ಸ್ಕೂಟರ್‌ಗಳನ್ನು ಸಂಪೂರ್ಣ ದೇಶಿಯವಾಗಿಯೇ ತಯಾ ರಿಸಲು ಅವಕಾಶವಾಗುವಂತೆ ನಗರದ ಹೊರವಲಯದಲ್ಲಿ ₨60 ಕೋಟಿ ವೆಚ್ಚ ದಲ್ಲಿ 60 ಎಕರೆ ವಿಸ್ತೀರ್ಣದಲ್ಲಿ ಹೊಸ ಕಾರ್ಖಾನೆ ಆರಂಭಿಸಲಾಗುವುದು ಎಂದು ‘ಗೊ ಗ್ರೀನ್‌ ಬಿಒವಿ’ ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕ ಧಿವಿಕ್‌ ರೆಡ್ಡಿ ಹೇಳಿದರು.ಇಲ್ಲಿ ಬುಧವಾರ ಸುದ್ದಿಗೋಷ್ಠಿ ಯಲ್ಲಿ ನಾಲ್ಕು ಮಾದರಿ ಸ್ಕೂಟರ್‌ ಗಳನ್ನು ಪರಿಚಯಿಸಿದ ಅವರು, 2007 ರಲ್ಲಿ ಕಂಪೆನಿ ಆರಂಭವಾದಾಗಿನಿಂದ ಈವರೆಗೆ 14 ಸಾವಿರ ದ್ವಿಚಕ್ರ ವಾಹನ ಮಾರಾಟ ಮಾಡಲಾಗಿದೆ. ಸದ್ಯ ತಿಂಗ ಳಿಗೆ 1200 ವಾಹನ ಮಾರಾಟವಾಗು ತ್ತಿವೆ. ದಕ್ಷಿಣ ಕೊರಿಯಾದ ಬ್ಯಾಟರಿ ಕಂಪೆನಿಯ ಶೇ 45 ಪಾಲುದಾರಿಕೆ ಯಲ್ಲಿ ಹೊಸ ಘಟಕ ಆರಂಭಿಸಿದ ನಂತರ ತಿಂಗಳಿಗೆ 1400ಕ್ಕೂ ಅಧಿಕ ವಾಹನ ಮಾರಾಟ ಮಾಡುವ ವಿಶ್ವಾಸ ವಿದೆ ಎಂದರು.15ರಿಂದ 18 ವರ್ಷದ ವಿದ್ಯಾರ್ಥಿಗ ಳಿಗಾಗಿಯೇ ‘ಕೊಹ್ರಾ’ ಸ್ಕೂಟರ್ ಸಿದ್ಧ ಪಡಿಸಿದ್ದು, ಬೆಲೆ ₨38,000. ಇದು ಒಂದು ಬಾರಿ ಚಾರ್ಜ್‌ ಮಾಡಿದರೆ 60 ಕಿ.ಮೀವರೆಗೂ ಸಂಚರಿಸುತ್ತದೆ. ಮಹಿಳೆ ಯರಿಗಾಗಿ ₨47,000 ಬೆಲೆ ಕಿಮಯಾ ಮಾದರಿ ಇದೆ ಎಂದು ವಿವರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.