ಏರ್‌ಟೆಲ್‌: ‘4ಜಿ’ ಸಂಪರ್ಕಜಾಲ ಮೇಲ್ದರ್ಜೆಗೆ

ಗುರುವಾರ , ಏಪ್ರಿಲ್ 25, 2019
27 °C

ಏರ್‌ಟೆಲ್‌: ‘4ಜಿ’ ಸಂಪರ್ಕಜಾಲ ಮೇಲ್ದರ್ಜೆಗೆ

Published:
Updated:

ಬೆಂಗಳೂರು: ಮೊಬೈಲ್‌ ಸೇವಾ ಸಂಸ್ಥೆ ಏರ್‍ಟೆಲ್, ರಾಜ್ಯದಲ್ಲಿ ‘ಎಲ್‍ಟಿಇ 900’ ತಂತ್ರಜ್ಞಾನ ಅಳವಡಿಸಿಕೊಂಡು ತನ್ನ ‘4ಜಿ’ ಸಂಪರ್ಕ ಜಾಲವನ್ನು ಮೇಲ್ದರ್ಜೆಗೆ ಏರಿಸಿದೆ. 

ಅತ್ಯುನ್ನತವಾದ 900 ಮೆಗಾಹರ್ಟ್ಸ್‌ ತರಂಗಾಂತರ ಬ್ಯಾಂಡ್‍ನಲ್ಲಿ ‘4ಜಿ’ ಸೇವೆ ಒದಗಿಸಲಾಗುತ್ತಿದೆ. ಇದರಿಂದ ಈ ಮೊದಲಿನಕ್ಕಿಂತ ಹೆಚ್ಚು ವೇಗದ ದತ್ತಾಂಶ ವರ್ಗಾವಣೆ ಸಾಮರ್ಥ್ಯ ಲಭ್ಯವಾಗಲಿದೆ. ಗ್ರಾಹಕರಿಗೆ ಗರಿಷ್ಠ ವೇಗದ ಸೇವೆಯನ್ನು ಪರಿಣಾಮಕಾರಿಯಾಗಿ ಒದಗಿಸಲೂ ಸಾಧ್ಯವಾಗಲಿದೆ. ಗ್ರಾಹಕರು, ತಮ್ಮ ಮನೆ, ಕಚೇರಿ, ಶಾಪಿಂಗ್ ಮಾಲ್ ಅಥವಾ ಯಾವುದೇ ಕಟ್ಟಡದ ಒಳಭಾಗದಲ್ಲೂ ಸುಧಾರಿತ ‘4ಜಿ’ ಸೇವೆ ಪಡೆಯಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

ಪಾಲುದಾರಿಕೆ ಸ್ವಾಧೀನ

ಇಂಡೋಫಿಲ್ ಇಂಡಸ್ಟ್ರೀಸ್ (ಇಂಟರ್‍ನ್ಯಾಷನಲ್) ಬಿವಿ, ಬೆಳೆ ರಕ್ಷಣೆ ಮತ್ತು ಸಸಿ ಪೌಷ್ಟಿಕಾಂಶ ಕಂಪನಿಯಾಗಿರುವ ಆಗ್ರೋವಿನ್ ಬಯೋಸೈನ್ಸಸ್‍ನ ಬಹುಪಾಲು ಪಾಲುದಾರಿಕೆಯನ್ನು ಸ್ವಾಧೀನಪಡಿಸಿಕೊಂಡಿದೆ.

‘ಯೂರೋಪಿನಲ್ಲಿನ ಸಂಸ್ಥೆಯ ಎರಡನೇ ಸ್ವಾಧೀನ ಪ್ರಕ್ರಿಯೆ ಇದಾಗಿದೆ. ಪಾಲುದಾರ ಸಂಸ್ಥೆಯಾಗಿರುವ ಆಗ್ರೋವಿನ್‍ನ ಬೆಳವಣಿಗೆಗೆ ಆದ್ಯತೆ ನೀಡಲು ಇದರಿಂದ ನೆರವಾಗಲಿದೆ’ ಎಂದು ಕಂಪನಿಯ ಗ್ರೂಪ್ ಸಿಇಒ ಆರ್.ಕೆ.ಮಲ್ಹೋತ್ರ ತಿಳಿಸಿದ್ದಾರೆ.

 ಗಾಡಿ ಬೈ ಕಾರ್‌ದೇಖೊ ವಹಿವಾಟು ವಿಸ್ತರಣೆ

ಹಳೆಯ ಕಾರುಗಳ ಮಾರಾಟದಲ್ಲಿ ಹರಾಜು ಮಾದರಿ ಪರಿಚಯಿಸಿರುವ ಗಾಡಿ ಬೈ ಕಾರ್‌ದೇಖೊ ಸಂಸ್ಥೆಯು ಬೆಂಗಳೂರಿನಲ್ಲಿ 12 ಮಳಿಗೆಗಳನ್ನು ಆರಂಭಿಸಿದೆ.

ದೆಹಲಿ – ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್‌) ಯಶಸ್ವಿಯಾಗಿ ವಹಿವಾಟು ನಡೆಸಿರುವ ಸಂಸ್ಥೆ ಈಗ ಬೆಂಗಳೂರಿಗೆ ಕಾಲಿಟ್ಟಿದೆ. ‘ಹಳೆಯ ಕಾರುಗಳನ್ನು ಗರಿಷ್ಠ ಬೆಲೆಗೆ ಸುಲಭವಾಗಿ ಮಾರಾಟ ಮಾಡಲು ಸಂಸ್ಥೆ ನೆರವಾಗಲಿದೆ. ಉಚಿತ ಆರ್‌ಸಿ ವರ್ಗಾವಣೆ, ಸಾಲ ಪಾವತಿಗೆ ನೆರವು, ತಕ್ಷಣ ಹಣ ವರ್ಗಾವಣೆ ಮತ್ತು ಸಂಸ್ಥೆಯ ಮಳಿಗೆಗಳಲ್ಲಿ ವೈಜ್ಞಾನಿಕ ಕಾರ್‌ ತಪಾಸಣೆ ಸೌಲಭ್ಯಗಳು ಇರಲಿವೆ’ ಎಂದು ಸಂಸ್ಥೆಯ ಸಿಇಒ ವಿಭೊರ್‌ ಸಹಾರೆ ಹೇಳಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !