Budget Session 2021 Live | ಆರ್ಥಿಕ ಸಮೀಕ್ಷೆ: 2021-22ರಲ್ಲಿ ದೇಶದ ಆರ್ಥಿಕ ಬೆಳವಣಿಗೆ ದರ ಅಂದಾಜು ಶೇ 11
LIVE
ಫೆಬ್ರುವರಿ 1ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, ಬಜೆಟ್ ಅಧಿವೇಶನ ಇಂದು (ಶುಕ್ರವಾರ) ಆರಂಭಗೊಂಡಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಸಂಸತ್‌ನ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ್ದಾರೆ. ರಾಜ್ಯಸಭೆಯು 3 ಗಂಟೆಗೆ ಪುನರಾರಂಭಗೊಂಡಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಸಮೀಕ್ಷೆ ಮಂಡನೆ ಮಾಡುತ್ತಿದ್ದಾರೆ. ಬಜೆಟ್ ಅಧಿವೇಶನದ ಆರಂಭದ ದಿನದ ಕ್ಷಣಕ್ಷಣದ ಅಪ್‌ಡೇಟ್ಸ್ ಇಲ್ಲಿ ಲಭ್ಯ.