ನವದೆಹಲಿ: ಜನಸಾಮಾನ್ಯರೂ ಕೇಂದ್ರ ಸರ್ಕಾರದ ಬಜೆಟ್ ಅನ್ನು ಸರಳ ಮತ್ತು ಸುಲಭವಾಗಿ ಅರ್ಥೈಸಿಕೊಳ್ಳುವುದಕ್ಕೆ ನೆರವಾಗಲು ಹಣಕಾಸು ಸಚಿವಾಲಯವು ಇದೇ 22 ರಿಂದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಅಭಿಯಾನ ಹಮ್ಮಿಕೊಳ್ಳಲಿದೆ.

ಸುಲಭವಾಗಿ ಬಜೆಟ್ ಅರ್ಥ ಮಾಡಿಸುವ ಈ ಪ್ರಚಾರ ಕಾರ್ಯಕ್ರಮವು ಟ್ವಿಟರ್ನಲ್ಲಿ ‘ಅರ್ಥಶಾಸ್ತ್ರಿ’ ಹ್ಯಾಸ್ಟ್ಯಾಗ್ನಡಿ ನಡೆಯಲಿದೆ. ವಿಡಿಯೊ ಮೂಲಕ ಜನಸಾಮಾನ್ಯರು ಮತ್ತು ವಿದ್ಯಾರ್ಥಿಗಳು ಬಜೆಟ್ ಕಸರತ್ತನ್ನು ಸರಳವಾಗಿ ತಿಳಿದುಕೊಳ್ಳುವಂತೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಜೆಟ್ ಬಗ್ಗೆ ಕುತೂಹಲ ತಾಳಿರುವ ವಿದ್ಯಾರ್ಥಿ ಅರ್ಥ, ಪ್ರೊ. ಶಾಸ್ತ್ರಿ ಅವರ ತರಗತಿಯಲ್ಲಿ ಜಟಿಲ ಪ್ರಶ್ನೆಗಳನ್ನು ಕೇಳುತ್ತಾನೆ. ವಿದ್ಯಾರ್ಥಿ ಕೇಳಿದ ಕಠಿಣ ಪ್ರಶ್ನೆಗಳಿಗೆ ಶಿಕ್ಷಕಿ ಡಾ. ಶಾಸ್ತ್ರಿ ಅವರು ಸರಳ ಭಾಷೆಯಲ್ಲಿ ಜಾಣತನದಿಂದ ಉತ್ತರ ನೀಡುವುದನ್ನು ವಿಡಿಯೊ ಒಳಗೊಂಡಿರಲಿದೆ. ಹಿಂದಿನ ವರ್ಷವೂ ಇದೇ ಬಗೆಯ ಪ್ರಚಾರ ಹಮ್ಮಿಕೊಳ್ಳಲಾಗಿತ್ತು.

ಬಜೆಟ್ನಲ್ಲಿ ನೀಡಿದ ಭರವಸೆಗಳು ಮತ್ತು ಜಾರಿಯಾದ ಕಾರ್ಯಕ್ರಮಗಳ ಬಗ್ಗೆಯೂ ಸರ್ಕಾರ ‘#ಹಮಾರಾ ಭರೋಸಾ’ ಪ್ರಚಾರ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಿದೆ. ಈ ಪ್ರಚಾರವು 12 ಪ್ರಾದೇಶಿಕ ಭಾಷೆಗಳಲ್ಲಿ ಇರಲಿದೆ.

ಈ ಎರಡೂ ಪ್ರಚಾರ ಕಾರ್ಯಕ್ರಮಗಳು ಇದೇ 29ರವರೆಗೆ ನಡೆಯಲಿವೆ. ಫೆಬ್ರುವರಿ 1ರಂದು ಕೇಂದ್ರ ಸರ್ಕಾರದ ಬಜೆಟ್ ಮಂಡನೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.