ಶುಕ್ರವಾರ, ಫೆಬ್ರವರಿ 21, 2020
17 °C

ಕೇಂದ್ರ ಬಜೆಟ್‌ 2020: ರಾಜ್ಯಕ್ಕೆ ₹9 ಸಾವಿರ ಕೋಟಿ ಖೋತಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯದ ಗಾಯದ ಮೇಲೆ ಬರೆ ಎಂಬಂತೆ, ಕೇಂದ್ರೀಯ ತೆರಿಗೆಯಲ್ಲಿ ದೊರೆಯುವ ಪಾಲಿನಲ್ಲೂ  ₹9 ಸಾವಿರ ಕೋಟಿಯಷ್ಟು ಕಡಿತವಾಗುವ ಆತಂಕ ಎದುರಾಗಿದೆ. ಇದು ರಾಜ್ಯದ 2020–21ನೇ ಸಾಲಿನ ಬಜೆಟ್‌ ತಯಾರಿಯ ಮೇಲೆ ಭಾರಿ ದುಷ್ಪರಿಣಾಮ ಬೀರಲಿದೆ.

ರಾಜ್ಯ ಕಳೆದುಕೊಳ್ಳಬಹುದಾದ ಕೇಂದ್ರದ ಪಾಲು ಎಷ್ಟು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅದು ₹11 ಸಾವಿರ ಕೋಟಿಯವರೆಗೂ ಏರಬಹುದು ಎಂದೂ ಹೇಳಲಾಗುತ್ತಿದೆ.

‘ಈ ಬಾರಿ ರಾಜ್ಯ ಪಡೆಯುವ ಪಾಲಿನಲ್ಲಿ ₹9 ಸಾವಿರದಷ್ಟು ಕಡಿಮೆಯಾಗುವ ಸಾಧ್ಯತೆಯಂತೂ ಇದೆ’ ಎಂದು ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್‌.ಎನ್‌.ಪ್ರಸಾದ್‌ ಹೇಳಿದರು.

ಜಿಎಸ್‌ಟಿ ಸಂಗ್ರಹ ಸಮರ್ಪಕವಾಗಿ ಆಗದ ಕಾರಣ ಕೇಂದ್ರದಿಂದ ರಾಜ್ಯಕ್ಕೆ ಪರಿಹಾರ ರೂಪದಲ್ಲಿ ಸಿಗಬೇಕಾದ ಹಣದಲ್ಲಿ ಕಡಿತ ಉಂಟಾಗಿದೆ. ಅದು ರಾಜ್ಯದ ಚಿಂತೆ ಹೆಚ್ಚಿಸಿರುವಂತೆಯೇ ಕೇಂದ್ರೀಯ ತೆರಿಗೆಯ ಪಾಲಿಗೂ ಸಂಚಕಾರ ಬಂದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು