ಬುಧವಾರ, ಏಪ್ರಿಲ್ 21, 2021
25 °C

ಪ್ರಪ್ರಥಮ ಬಾರಿಗೆ ಕಾಗದರಹಿತ ಬಜೆಟ್; ಕೇಂದ್ರ ಬಜೆಟ್ ಆ್ಯಪ್‌ನಲ್ಲಿ ಮಾಹಿತಿ ಲಭ್ಯ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಲ್ಲಿ ಇದೇ ಮೊದಲ ಬಾರಿಗೆ ಕಾಗದ ರಹಿತ ಮುದ್ರಣ ಪ್ರತಿಗಳಿಲ್ಲದ ಕೇಂದ್ರ ಬಜೆಟ್ ಮಂಡನೆಯಾಗುತ್ತಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಬಜೆಟ್ ಮಂಡಿಸಲಿದ್ದಾರೆ.

ಕೋವಿಡ್-19 ನಿಯಮಗಳ ಕಾರಣ ಈ ಬಾರಿ ಬಜೆಟ್ ಪ್ರತಿಯನ್ನು ಮುದ್ರಿಸಲಾಗುವುದಿಲ್ಲ. ಬದಲಾಗಿ ಡಿಜಿಟಲ್ ರೂಪದಲ್ಲಿ ಸಿಗಲಿದೆ. ಇದರಂತೆ ಕೇಂದ್ರ ಬಜೆಟ್ ಬಗ್ಗೆ ಸುಲಭವಾಗಿ ಮಾಹಿತಿ ಸಾರ್ವಜನಿಕರಿಗೆ ದೊರಕುವ ನಿಟ್ಟಿನಲ್ಲಿ ಹೊಸ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಗಿದೆ.

ಬಜೆಟ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?
ಕೇಂದ್ರ ಬಜೆಟ್ ವೆಬ್‌ಸೈಟ್ https://www.indiabudget.gov.in/ ನಿಂದ ಆ್ಯಪ್ ಡೌನ್ ಮಾಡಿಕೊಳ್ಳಬಹುದಾಗಿದೆ.

ಮೊಬೈಲ್‌ನಿಂದಲೇ ಕೇಂದ್ರ ಬಜೆಟ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಆಂಡ್ರಾಯ್ಡ್ ಹಾಗೂ ಐಒಎಸ್ ಫ್ಲ್ಯಾಟ್‌ಫಾರ್ಮ್‌ಗಳಲ್ಲೂ ಲಭ್ಯವಿರುತ್ತದೆ.

ಇದನ್ನೂ ಓದಿ: 

ವೈಶಿಷ್ಟ್ಯಗಳೇನು?
ಕೇಂದ್ರ ಬಜೆಟ್‌ನ ಎಲ್ಲ 14 ದಾಖಲೆಗಳು ಆ್ಯಪ್‌ನಲ್ಲಿ ಲಭ್ಯವಾಗಲಿದೆ. ವಾರ್ಷಿಕ ಹಣಕಾಸು ಸ್ಟೇಟ್‌ಮೆಂಟ್ (ಬಜೆಟ್), ಡಿಮಾಂಡ್ ಫಾರ್ ಗ್ರಾಂಟ್ಸ್, ಹಣಕಾಸು ಬಿಲ್ ಇತ್ಯಾದಿಗಳು ಇದರಲ್ಲಿ ಒಳಗೊಂಡಿರಲಿದೆ.

ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳಲ್ಲಿ ಆ್ಯಪ್ ಲಭ್ಯವಾಗಲಿದೆ. ಸರ್ಚ್, ಝೂಮಿಂಗ್, ಸ್ಕ್ರಾಲಿಂಗ್, ವಿಷಯಗಳ ಪಟ್ಟಿ, ಬಾಹ್ಯ ಲಿಂಕ್ ಮುಂತಾದ ವ್ಯವಸ್ಥೆಯಿರಲಿದೆ. ಹಣಕಾಸು ಸಚಿವರು ಬಜೆಟ್ ಓದಿ ಮುಗಿಸಿದ ಬಳಿಕ ಬಜೆಟ್ ಪ್ರತಿಗಳು ಆ್ಯಪ್‌ನಲ್ಲಿ ಡೌನ್‌ಲೋಡ್ ಮಾಡಲು ಸಿಗಲಿದೆ.

ಆರ್ಥಿಕ ವ್ಯವಹಾರಗಳ ಇಲಾಖೆಯ (ಡಿಇಎ) ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಮಾಹಿತಿ ಕೇಂದ್ರವು (ಎನ್‌ಐಸಿ) ಕೇಂದ್ರ ಬಜೆಟ್ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು