ಮಂಗಳವಾರ, ಮೇ 17, 2022
30 °C

ಜನವರಿ ತಿಂಗಳಲ್ಲಿ ದಾಖಲೆಯ ₹ 1.20 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕಟ್ಟುನಿಟ್ಟಿನ ಲಾಕ್‌ಡೌನ್ ನಿರ್ಬಂಧಗಳನ್ನು ಹಿಂತೆಗೆದುಕೊಂಡ ಬಳಿಕ ದೇಶದಲ್ಲಿ ಆರ್ಥಿಕ ಚಟುವಟಿಕೆಗಳು ಚುರುಕು ಪಡೆದಿದ್ದು, ಜನವರಿ ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹವು ಸಾರ್ವಕಾಲಿಕ ಗರಿಷ್ಠ ₹ 1.20 ಲಕ್ಷ ಕೋಟಿಗೆ ಏರಿಕೆಯಾಗಿದೆ.
 

ಇದನ್ನೂ ಓದಿ.. ಕೇಂದ್ರ ಬಜೆಟ್–2021 ಕನ್ನಡದಲ್ಲಿ ಲೈವ್ ಅಪ್‌ಡೇಟ್

ದಿನ ಬಳಕೆಯ ವಸ್ತುಗಳ ಮಾರಾಟ ಅಥವಾ ಟ್ರಾವೆಲ್ ಬುಕ್ಕಿಂಗ್‌ನಂತಹ ಸೇವೆಗಳಿಂದ ಜನವರಿಯಲ್ಲಿ ಶೇ. 8ರಷ್ಟು ಸರಕು ಮತ್ತು ಸೇವಾ ತೆರಿಗೆ ಹೆಚ್ಚಾಗಿದೆ.

ಜನವರಿ ತಿಂಗಳಲ್ಲಿ ಸಂಗ್ರಹವಾದ ತೆರಿಗೆಯ ಪ್ರಮಾಣವು ಜುಲೈ 2017 ರಲ್ಲಿ ರಾಷ್ಟ್ರವ್ಯಾಪಿ ಜಿಎಸ್‌ಟಿ ತೆರಿಗೆ ಜಾರಿಗೆ ಬಂದ ಬಳಿಕ ಸಂಗ್ರಹವಾದ ಅತ್ಯಂತ ಗರಿಷ್ಠ ತೆರಿಗೆಯಾಗಿದೆ ಎಂದು ಹಣಕಾಸು ಸಚಿವಾಲಯ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.

ಡಿಸೆಂಬರ್ 2020 ರಲ್ಲಿ ₹ 1,15,174 ಕೋಟಿ ಜಿಎಸ್‌ಟಿ ಸಂಗ್ರಹದ ಮೂಲಕ ನಂತರದ ಸ್ಥಾನದಲ್ಲಿದೆ.

ಸತತ 4ನೇ ತಿಂಗಳಲ್ಲಿ ₹ 1 ಲಕ್ಷ ಕೋಟಿಗೂ ಅಧಿಕ ತೆರಿಗೆ ಸಂಗ್ರಹವಾಗುತ್ತಿದ್ದು, ಇದು ಆರ್ಥಿಕತೆಯ ಬಲವಾದ ಚೇತರಿಕೆಯ ಸಂಕೇತವಾಗಿದೆ.

ಇನ್ನೂ, ಡಿಸೆಂಬರ್ ತಿಂಗಳಿಂದ ಜನವರಿ 1 ರವರೆಗೆ ಸಲ್ಲಿಸಲಾದ ಒಟ್ಟು ಜಿಎಸ್‌ಟಿಆರ್ -3 ಬಿ ರಿಟರ್ನ್ಸ್ ಸಂಖ್ಯೆ 90 ಲಕ್ಷ ಎಂದು ಸಚಿವಾಲಯ ತಿಳಿಸಿದೆ.

‘ಜನವರಿ 2021 ರಲ್ಲಿ ತೆರಿಗೆ ಸಂಗ್ರಹ ಸುಮಾರು ₹ 1.2 ಲಕ್ಷ ಕೋಟಿ ರೂ.ಗಳನ್ನು ಮುಟ್ಟಿದ್ದು, ಈ ಜಿಎಸ್‌ಟಿ ಆದಾಯವು ಜಿಎಎಸ್‌ಟಿ ಪರಿಚಯಿಸಿದ ನಂತರದ ಅತ್ಯಧಿಕ ಸಂಗ್ರಹವಾಗಿದೆ. ಕಳೆದ ತಿಂಗಳ ದಾಖಲೆಯ ಸಂಗ್ರಹ ₹ 1.15 ಲಕ್ಷ ಕೋಟಿಗಳನ್ನು ಇದು ಮೀರಿದೆ’ ಎಂದು ಸಚಿವಾಲಯ ತಿಳಿಸಿದೆ.

ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ₹ 1 ಲಕ್ಷ ಕೋಟಿಗಿಂತ ಹೆಚ್ಚಿನ ಪ್ರಮಾಣದ ಜಿಎಸ್‌ಟಿ ಆದಾಯ ಸಂಗ್ರಹವಾಗಿದ್ದು, ಕೊರೊನಾ ಸಾಂಕ್ರಾಮಿಕ ರೋಗದ ಬಳಿಕ ಕ್ಷಿಪ್ರಗತಿಯಲ್ಲಿ ಆರ್ಥಿಕ ಚೇತರಿಕೆಯ ಸೂಚಕವಾಗಿದೆ ಎಂದು ಹೇಳಿದೆ.

ನಕಲಿ-ಬಿಲ್ಲಿಂಗ್ ವಿರುದ್ಧ ನಿಕಟ ಮೇಲ್ವಿಚಾರಣೆ, ಜಿಎಎಸ್‌ಟಿ, ಆದಾಯ ತೆರಿಗೆ ಮತ್ತು ಕಸ್ಟಮ್ಸ್ ಐಟಿ ವ್ಯವಸ್ಥೆಗಳಲ್ಲಿ ಪರಿಣಾಮಕಾರಿ ತೆರಿಗೆ ಆಡಳಿತವು ಈ ಗರಿಷ್ಠ ತೆರಿಗೆ ಸಂಗ್ರಹಕ್ಕೆ ಕಾರಣವಾಗಿದೆ.

ಸೇರಿದಂತೆ ಅನೇಕ ಮೂಲಗಳಿಂದ ದತ್ತಾಂಶವನ್ನು ಬಳಸುವ ಆಳವಾದ ದತ್ತಾಂಶ ವಿಶ್ಲೇಷಣೆಗಳ ವಿರುದ್ಧ ನಿಕಟ ಮೇಲ್ವಿಚಾರಣೆ ಕಳೆದ ಕೆಲವು ತಿಂಗಳುಗಳಲ್ಲಿ ತೆರಿಗೆ ಆದಾಯದಲ್ಲಿ ಸ್ಥಿರ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಅದು ಹೇಳಿದೆ.

ಹಣಕಾಸಿನ ವರ್ಷದ ಮೊದಲಾರ್ಧದಲ್ಲಿ (ಏಪ್ರಿಲ್-ಸೆಪ್ಟೆಂಬರ್) (–)24 ಕ್ಕೆ ಹೋಲಿಸಿದರೆ ಅಕ್ಟೋಬರ್-ಜನವರಿ ಅವಧಿಯಲ್ಲಿ ಜಿಎಎಸ್‌ಟಿ ಆದಾಯವು ಸರಾಸರಿ ಶೇ. 8 ರಷ್ಟು ಹೆಚ್ಚಾಗಿದೆ.

“ಜನವರಿ 31, 2021 ರ ಸಂಜೆ 6 ಗಂಟೆವರೆಗೆವರೆಗೆ ಸಂಗ್ರಹವಾದ ಜನವರಿ ತಿಂಗಳ ಒಟ್ಟು ಜಿಎಸ್‌ಟಿ ಆದಾಯ ₹ 1,19,847 ಕೋಟಿ. ಇದರಲ್ಲಿ ಸಿಜಿಎಸ್‌ಟಿ ₹ 21,923 ಕೋಟಿ, ಎಸ್‌ಜಿಎಸ್‌ಟಿ ₹ 29,014 ಕೋಟಿ ಐಜಿಎಸ್‌ಟಿ 60,288 ಕೋಟಿ ರೂ. (27,424 ಕೋಟಿ ರೂ. ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾಗಿದೆ) ಮತ್ತು ಸೆಸ್ 8,622 ಕೋಟಿ ರೂ. (ಸರಕುಗಳ ಆಮದಿಗೆ ಸಂಗ್ರಹಿಸಿದ ₹883 ಕೋಟಿ ಸೇರಿ) ”ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಜಿಎಸ್‌ಟಿ ಮಾರಾಟ ರಿಟರ್ನ್ಸ್ ಸಲ್ಲಿಕೆ ಹೆಚ್ಚಾದ ಬಳಿಕ ಈ ಜಿಎಸ್‌ಟಿ ಸಂಗ್ರಹದ ಪ್ರಮಾಣ ಇನ್ನಷ್ಟು ಹೆಚ್ಚಬಹುದು.

ಕೊರೊನಾ ವೈರಸ್ ಹರಡುವಿಕೆ ತಡೆಯಲು ಸರ್ಕಾರ ರಾಷ್ಟ್ರವ್ಯಾಪಿ ಲಾಕ್ ಡೌನ್ ವಿಧಿಸಿದ ನಂತರ, ಆರ್ಥಿಕ ಚಟುವಟಿಕೆಯ ಸ್ಥಿತಿಯನ್ನು ನೇರವಾಗಿ ಪ್ರತಿಬಿಂಬಿಸುವ ಜಿಎಎಸ್‌ಟಿ ಸಂಗ್ರಹವು ಏಪ್ರಿಲ್ 2020 ರಲ್ಲಿ ದಾಖಲೆಯ ಕನಿಷ್ಠ 32,172 ಕೋಟಿ ರೂ.ಗೆ ಇಳಿದಿತ್ತು.

ನಿರ್ಬಂಧಗಳನ್ನು ಕ್ರಮೇಣ ತೆಗೆದುಹಾಕಿದಂತೆ, ಆರ್ಥಿಕತೆಯ ಅನೇಕ ವಲಯಗಳಲ್ಲಿ ಮತ್ತೆ ಚಟುವಟಿಕೆ ಆರಂಭವಾಗಿದೆ. ಆದರೂ ಉತ್ಪಾದನೆಯು ಸಾಂಕ್ರಾಮಿಕ ಪೂರ್ವದ ಮಟ್ಟಕ್ಕಿಂತಲೂ ಕಡಿಮೆ ಇದೆ.

ಜಿಎಎಸ್‌ಟಿ ಸಂಗ್ರಹ ದ ಬಗ್ಗೆ ಪ್ರತಿಕ್ರಿಯಿಸಿದ ಡೆಲಾಯ್ಟ್ ಇಂಡಿಯಾದ ಹಿರಿಯ ನಿರ್ದೇಶಕ ಎಂ.ಎಸ್.ಮಣಿ, “ಕಳೆದ ನಾಲ್ಕು ತಿಂಗಳುಗಳಲ್ಲಿ ಕಂಡ ಜಿಎಎಸ್‌ಟಿ ಸಂಗ್ರಹಗಳ ಹೆಚ್ಚಳವು ಪ್ರಸಕ್ತ ಹಣಕಾಸು ವರ್ಷದ ಮುಂಬರುವ ತಿಂಗಳುಗಳಲ್ಲಿ ವಾಯುಯಾನ, ಆತಿಥ್ಯ, ಮನರಂಜನೆ ಇತ್ಯಾದಿ ಸೇವೆಗಳು ಆರಂಭವಾಗುತ್ತಿರುವುದರಿಂದ ಮತ್ತಷ್ಟು ಹೆಚ್ಚಲಿದೆ ” ಎಂದು ಹೇಳುಇದ್ದಾರೆ.

ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಏಪ್ರಿಲ್-ಜನವರಿಯಲ್ಲಿ ಜಿಎಸ್‌ಟಿ ಆದಾಯವು ಶೇಕಡಾ 12 ರಷ್ಟು ಕಡಿಮೆಯಾಗಿದೆ.

2019-20ರ ಆರ್ಥಿಕ ವರ್ಷದ 12 ತಿಂಗಳ ಪೈಕಿ 8 ತಿಂಗಳು ಜಿಎಸ್‌ಟಿ ಆದಾಯವು ₹ 1 ಲಕ್ಷ ಕೋಟಿ ಆಗಿತ್ತು. ಆದರೂ, ಪ್ರಸಕ್ತ ಹಣಕಾಸು ವರ್ಷದಲ್ಲಿ, ಕೋವಿಡ್ ಕಾರಣದಿಂದ ಆದಾಯ ಕುಸಿದಿದೆ.

ಏಪ್ರಿಲ್‌ನಲ್ಲಿ ₹ 32,172 ಕೋಟಿ., ಬಳಿಕ ಮೇ ತಿಂಗಳಲ್ಲಿ ₹ 62,151 ಕೋಟಿ, ಜೂನ್‌ನಲ್ಲಿ ₹ 90,917 ಕೋಟಿ, ಜುಲೈನಲ್ಲಿ ₹ 87,422 ಕೋಟಿ ಮತ್ತು ಆಗಸ್ಟ್‌ನಲ್ಲಿ ₹ 86,449 ಕೋಟಿ, ಸೆಪ್ಟೆಂಬರ್‌ನಲ್ಲಿ ₹ 95,480 ಕೋಟಿ, ಅಕ್ಟೋಬರ್‌ನಲ್ಲಿ ₹ 1,05,155 ಕೋಟಿ, ನವೆಂಬರ್‌ನಲ್ಲಿ ₹ 1,04,963 ಕೋಟಿ ಮತ್ತು ₹ 1,15 ಜಿಎಸ್‌ಟಿ ಆದಾಯ ಸಂಗ್ರಹವಾಗಿತ್ತು.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು