2019ರ ಪ್ರವಾಹದಲ್ಲಿ ಮನೆ ಕಳೆದುಕೊಂಡವರು ನಿಗದಿತ ಅವಧಿಯಲ್ಲೇ ಹೊಸ ಮನೆ ಕಟ್ಟಿಕೊಳ್ಳಬೇಕಿತ್ತು. ತಡ ಮಾಡಿದ್ದರಿಂದ ಹೆಚ್ಚಿನವರಿಗೆ ಪೂರ್ತಿ ₹ 5 ಲಕ್ಷ ಪರಿಹಾರ ಬಂದಿಲ್ಲ. ಈಗಿನ ಸರ್ಕಾರ ಹಿಂದಿನ ಸರ್ಕಾರದ ಯೋಜನೆ ರದ್ದುಪಡಿಸಿದೆ. ಹಾಗಾಗಿ ಮನೆ ಕಾಮಗಾರಿ ಪೂರ್ಣಗೊಳಿಸದವರು ಈಗ ಬೇರೆ ವಸತಿ ಯೋಜನೆಗಳ ಸದ್ಬಳಕೆ ಮಾಡಿಕೊಂಡು ಕಾಮಗಾರಿ ಮುಗಿಸಬೇಕು.
–ಮೊಹಮ್ಮದ್ ರೋಷನ್, ಬೆಳಗಾವಿ ಜಿಲ್ಲಾಧಿಕಾರಿ
ಅವೈಜ್ಞಾನಿಕವಾಗಿ ನಿರ್ಮಿಸಿದ ಪುನರ್ವಸತಿ ಕೇಂದ್ರಗಳಲ್ಲಿ ಕನಿಷ್ಠ ಮೂಲಸೌಕರ್ಯವಿಲ್ಲ. ಹಾಗಾಗಿ ಅಲ್ಲಿ ಹೋಗಿ ಸಂತ್ರಸ್ತರು ವಾಸಿಸುತ್ತಿಲ್ಲ. ಅಥಣಿ ತಾಲ್ಲೂಕಿನ 17 ಪ್ರವಾಹಪೀಡಿತ ಗ್ರಾಮಗಳ ಪುನರ್ವಸತಿಗೂ ಕ್ರಮ ವಹಿಸಬೇಕು.
–ರಮೇಶ ಪಾಟೀಲ, ಹಿಪ್ಪರಗಿ ಆಣೆಕಟ್ಟೆಯ ಸಂತ್ರಸ್ತರ ಹಿತರಕ್ಷಣಾ ಸಮಿತಿ ಅಧ್ಯಕ್ಷ
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಶಿವಪೇಟೆಯ ಸರ್ಕಾರಿ ಜಾಗದಲ್ಲಿ ಹಾಕಿರುವ ತಗಡಿನ ಶೆಡ್‌ನಲ್ಲಿ ಸಂತ್ರಸ್ತರು ವಾಸಿಸುತ್ತಿರುವುದು
–ಪ್ರಜಾವಾಣಿ ಚಿತ್ರ: ಇಮಾಮ್ ಹುಸೇನ್ ಗೂಡುನವರ
ವಿಜಯಪುರ ಜಿಲ್ಲೆಯ ಆಲಮೇಲ ತಾಲ್ಲೂಕಿನ ತಾವರಖೇಡ ಪುನರ್ ವಸತಿ ಕೇಂದ್ರದ ಶಾಲೆಯು ಮಕ್ಕಳ ಓಡಾಟವಿಲ್ಲದೆ ಬಣಗುಡುತ್ತಿರುವುದು
–ಪ್ರಜಾವಾಣಿ ಚಿತ್ರ: ಇಮಾಮ್ ಹುಸೇನ್ ಗೂಡುನವರ
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಖ್ಯಾಡ ಗ್ರಾಮದಲ್ಲಿ ಆಸರೆ ಯೋಜನೆಯಡಿ ಪ್ರವಾಹ ಸಂತ್ರಸ್ತರಿಗಾಗಿ ನಿರ್ಮಿಸಿದ್ದ ಮನೆಗಳು ಪಾಳು ಬಿದ್ದಿರುವುದು
–ಪ್ರಜಾವಾಣಿ ಚಿತ್ರ: ಇಮಾಮ್ ಹುಸೇನ್ ಗೂಡುನವರ
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಗಂಜಿಹಾಳದಲ್ಲಿ ಮನೆ ಖಾಲಿ ಬಿದ್ದಿರುವುದರಿಂದ ಸುತ್ತಲೂ ಜಾಲಿ ಗಿಡಗಳು ಬೆಳೆದಿರುವುದು