ಢಾಕಾ: ಆತಿಥೇಯ ಬಾಂಗ್ಲಾದೇಶ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಎರಡನೇ ಪಂದ್ಯವನ್ನು ವೆಸ್ಟ್ ಇಂಡೀಸ್ ತಂಡ ಸೂಪರ್ ಓವರ್ನಲ್ಲಿ ಗೆದ್ದು ಬೀಗಿತು. ಇದರೊಂದಿಗೆ, ಮೂರು ಪಂದ್ಯಗಳ ಸರಣಿಯಲ್ಲಿ 1-1 ಅಂತರದ ಸಮಬಲ ಸಾಧಿಸಿದೆ.

ಢಾಕಾದ ಶೇರ್ ಬಾಂಗ್ಲಾ ನ್ಯಾಷನಲ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ, ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 213 ರನ್ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ವಿಂಡೀಸ್ ಕೂಡ, ಪೂರ್ಣ 50 ಓವರ್ಗಳಲ್ಲಿ 9 ವಿಕೆಟ್ಗಳನ್ನು ಕಳೆದುಕೊಂಡು 213 ರನ್ ಗಳಿಸಿ ಮೊತ್ತ ಸಮಗೊಳಿಸಿತು.

ಹೀಗಾಗಿ, ನಡೆದ ಸೂಪರ್ ಓವರ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪ್ರವಾಸಿ ಪಡೆ, ಆತಿಥೇಯರಿಗೆ 11 ರನ್ಗಳ ಗುರಿ ಒಡ್ಡಿತು. ಆದರೆ, ಬಾಂಗ್ಲಾ ಪಡೆ 9 ರನ್ ಗಳಿಸಿ ಕೇವಲ ಎರಡು ರನ್ ಅಂತರದಿಂದ ಸೋಲೊಪ್ಪಿಕೊಂಡಿತು.

ಸರಣಿಯ ಅಂತಿಮ ಪಂದ್ಯವು, ಇದೇ ಕ್ರೀಡಾಂಗಣದಲ್ಲಿ ನಾಳೆ (ಅಕ್ಟೋಬರ್ 23ರಂದು) ನಡೆಯಲಿದೆ.

ಇದೇ ಮೊದಲು!

ಬಾಂಗ್ಲಾದೇಶ ತಂಡದ ಬ್ಯಾಟಿಂಗ್ ವೇಳೆ ವೆಸ್ಟ್ ಇಂಡೀಸ್ ಪರ ಸಂಪೂರ್ಣ 50 ಓವರ್ಗಳನ್ನು ಸ್ಪಿನ್ನರ್ಗಳೇ ಎಸೆದರು. ಐಸಿಸಿ ಪೂರ್ಣ ಸದಸ್ಯತ್ವ ಹೊಂದಿರುವ ರಾಷ್ಟ್ರಗಳ ಪೈಕಿ ಈವರೆಗೆ ಯಾವುದೇ ತಂಡ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ ಇಂತಹ ಸಾಧನೆ ಮಾಡಿರಲಿಲ್ಲ. ಹೀಗಾಗಿ, ಅಪರೂಪದ ದಾಖಲೆಗೆ ಢಾಕಾ ಕ್ರೀಡಾಂಗಣ ಸಾಕ್ಷಿಯಾಯಿತು.

ವಿಂಡಿಸ್ನ ಅಕೀಲ್ ಹೊಸೈನ್ (41 ರನ್ಗೆ 2 ವಿಕೆಟ್), ರೋಸ್ಟನ್ ಚೇಸ್ (44 ರನ್), ಖಾರಿ ಪಿಯರೆ (43 ರನ್), ಗುಡಕೇಶ್ ಮೋಟೀ (65 ರನ್ಗೆ 3 ವಿಕೆಟ್) ಹಾಗೂ ಅಲಿಕ್ ಅಥಾಂಜೆ (14 ರನ್ಗೆ 2 ವಿಕೆಟ್) ತಲಾ 10 ಓವರ್ ಎಸೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.