ಸ್ಯಾಂಡಲ್ವುಡ್ ಜನಪ್ರಿಯ ನಟ ಹಾಗೂ ನಟಿಯರ ಮನೆಯಲ್ಲಿ ದೀಪಾವಳಿ ಸಂಭ್ರಮ ಕಳೆಗಟ್ಟಿದೆ. ರಾಕಿಂಗ್ ಸ್ಟಾರ್ ಯಶ್, ಅಭಿಷೇಕ್ ಅಂಬರೀಶ್, ಅದಿತಿ ಪ್ರಭುದೇವ, ಕಿರುತೆರೆ ನಟಿ ವೈಷ್ಣವಿ ಗೌಡ ಸೇರಿದಂತೆ ಸಾಕಷ್ಟು ತಾರೆಯರ ಮನೆಯಲ್ಲಿ ದೀಪಾವಳಿ ಸಂಭ್ರಮ ಜೋರಾಗಿದೆ.

ಬೆಳಕಿನ ಹಬ್ಬ ಎಂದು ಕರೆಯಲ್ಪಡುವ ದೀಪಾವಳಿಯನ್ನು ಕನ್ನಡ ಚಿತ್ರರಂಗದ ತಾರೆಯರು ತಮ್ಮ ಮನೆಗಳಲ್ಲಿ ಆಚರಿಸಿದ್ದಾರೆ. ದೀಪಗಳಿಂದ ಮನೆಯನ್ನು ಅಲಂಕರಿಸಿ ಕುಟುಂಬಸ್ಥರ ಜೊತೆಗೆ ಆಚರಣೆ ಮಾಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಪಂಡಿತ್ ಹಾಗೂ ಇಬ್ಬರು ಮುದ್ದಾದ ಮಕ್ಕಳು ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ನಟ ಯಶ್ ದಂಪತಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಯಶ್, ರಾಧಿಕಾ ಪಂಡಿತ್ ಮಕ್ಕಳಾದ ಐರಾ, ಮತ್ತು ಯಥರ್ವ್ ‘ಎಲ್ಲರಿಗೂ ನಮಸ್ಕಾರ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು’ ಎಂದಿದ್ದಾರೆ.
.Deepavali 2025 | ಕುಂಬಾರರ ಬಾಳು ಬೆಳಗದ ದೀಪಾವಳಿ.ಮನೆ ಮನ ಬೆಳಗುತ್ತಿರುವ ಸಾಲು ದೀಪಗಳು....
ಅಭಿಷೇಕ್ ಅಂಬರೀಶ್ ದಂಪತಿ ಕೂಡ ದೀಪಾವಳಿಯನ್ನು ಆಚರಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಫೋಟೊವನ್ನು ಹಂಚಿಕೊಂಡು ‘ದೀಪಾವಳಿಯ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ.

ನಟಿ ಅದಿತಿ ಪ್ರಭುದೇವ ಮನೆಯಲ್ಲೂ ಕೂಡ ದೀಪಾವಳಿ ಹಬ್ಬದ ಸಂಭ್ರಮ ಜೋರಾಗಿದೆ. ಮಗಳು ನೇಸರ ಹಾಗೂ ಪತಿ ಜೊತೆಗೆ ಹಬ್ಬದ ನಿಮಿತ್ತ ಸುಂದರವಾದ ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ. ಅದೇ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಇತ್ತೀಚಿಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಕಿರುತೆರೆ ನಟಿ ವೈಷ್ಣವಿ ಗೌಡ ನಿವಾಸದಲ್ಲೂ ಹಬ್ಬದ ಸಂಭ್ರಮ ಜೋರಾಗಿದೆ. ನಟಿ ವೈಷ್ಣವಿ ಗೌಡ ಮದುವೆ ಬಳಿಕ ಇದೇ ಮೊದಲ ಬಾರಿಗೆ ದೀಪಾವಳಿ ಹಬ್ಬವನ್ನು ಪತಿ ಜೊತೆಗೆ ಆಚರಿಸಿದ್ದಾರೆ. ಹಬ್ಬದ ನಿಮಿತ್ತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೊಗಳನ್ನು ಹಂಚಿಕೊಂಡು ‘ಬೆಳಕು, ಪ್ರೀತಿ ಮತ್ತು ಸಂತೋಷದಿಂದ ತುಂಬಿರಲಿ. ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.