ಬುಧವಾರ, ಏಪ್ರಿಲ್ 1, 2020
19 °C

ಕರ್ನಾಟಕ ಬಜೆಟ್‌ 2020 | ವಲಯವಾರು ಲೆಕ್ಕಾಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕ ಬಜೆಟ್‌ನ ಮಾದರಿಯೇ ಬದಲಾಗಿದ್ದು, ಇಲಾಖಾವಾರು ಅನುದಾನ ಹಂಚಿಕೆ ಬದಲಿಗೆ ವಲಯವಾರು ಹಂಚಿಕೆ ಮಾಡುವ ಹೊಸ ಪದ್ಧತಿಯನ್ನು ಈ ವರ್ಷ ಚಾಲ್ತಿಗೆ ತರಲಾಗಿದೆ.

ಇದರಿಂದಾಗಿ ಬಜೆಟ್‌ನ ನಿರೂಪಣಾಕ್ರಮವೇ ಬದಲಾಗಿದೆ. ಯಾವ ಇಲಾಖೆಗೆ, ಆದ್ಯತಾ ವಲಯಕ್ಕೆ ಎಷ್ಟು ಹಂಚಿಕೆ ಮಾಡಲಾಗಿದೆ ಎಂಬುದು ಗೊತ್ತಾಗದಷ್ಟು ಬಜೆಟ್‌ ಗೊಂದಲದಿಂದ ಕೂಡಿದೆ. ಆಯವ್ಯಯ ಪಕ್ಷಿನೋಟದಲ್ಲೂ ನಿರ್ದಿಷ್ಟ ಲೆಕ್ಕ ಶೀರ್ಷಿಕೆಯಡಿ ಅನುದಾನ ಹಂಚಿಕೆ ಮಾಡಿದ ವಿವರಗಳಿಲ್ಲ. ಸಂಬಂಧ ಪಟ್ಟ ಖಾತೆ ನಿರ್ವಹಿಸುವ ಸಚಿವರಿಗೂ ತಮ್ಮ ಇಲಾಖೆಗೆ ಎಷ್ಟು ಅನುದಾನ ಲಭ್ಯವಾಗಿದೆ ಎಂಬ ಮಾಹಿತಿಗಳು ಇಲ್ಲದಂತಾಗಿದೆ. ಯೋಜನೆಯ ಹೆಸರಿಗೆ ಅನುದಾನ ಹಂಚಿಕೆ ಮಾಡಿದರೆ  ಯೋಜನೆ ಅನುಷ್ಠಾನವಾಗುವ ಕ್ಷೇತ್ರದ ಶಾಸಕರು ಹಣ ಬಿಡುಗಡೆಗೆ ಒತ್ತಡ ಹೇರಲಿದ್ದಾರೆ, ಆಗ ಇರುವ ಸಂಪನ್ಮೂಲವನ್ನು ಹಂಚಿಕೆ ಮಾಡುವುದು ಕಷ್ಟವಾಗಲಿದೆ. ಇದರಿಂದ ಪಾರಾಗಲು ಯಡಿಯೂರಪ್ಪ ಅವರು ಈ ಹೊಸಮಾರ್ಗ ಹಿಡಿದಿದ್ದಾರೆ ಎಂದು ಹೇಳಲಾಗುತ್ತಿದೆ.

ವಲಯ: ಮೊತ್ತ(₹ಕೋಟಿಗಳಲ್ಲಿ)
ಕೃಷಿ ಮತ್ತು ಪೂರಕ ಚಟುವಟಿಕೆ: 32,259
ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ: 72,093
ಆರ್ಥಿಕ ಅಭಿವೃದ್ಧಿ ಪ್ರಚೋದನೆ: 8,772
ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂಪನ್ಮೂಲ ರಕ್ಷಣೆ: 4,552
ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆಗಳು: 10,194

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು