ಆಶಾದಾಯಕ ಬಜೆಟ್

ಮಹಿಳೆಯರಿಗೆ ಆರ್ಥಿಕವಾಗಿ ಅಭಿವೃದ್ಧಿ ಹೊಂದುವ ದೃಷ್ಟಿಯಿಂದ ಮಂಡಿಸಿರುವ ಬಜೆಟ್ ಇದಾಗಿದ್ದು, ಸ್ವ–ಉದ್ಯೋಗದ ಕಡೆಗೆ ಗಮನ ಹರಿಸಿರುವುದು ಸ್ವಾಗತಾರ್ಹ. ರಾಜ್ಯದಲ್ಲಿ 100 ನಾಡ ಕಚೇರಿ ಸ್ಥಾಪಿಸಲು ಮುಂದಾಗಿರುವುದು ರೈತರಿಗೆ ನೆರವಾಗಲಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ₹413 ಕೋಟಿ ಹಾಗೂ ತಾಯಂದಿರ ಮರಣ ಸಂಖ್ಯೆಯನ್ನು ಕಡಿಮೆ ಮಾಡಲು ₹320 ಕೋಟಿ ಅನುದಾನ ನೀಡಿದ್ದು ಆಶಾದಾಯಕ ಬಜೆಟ್ ಆಗಿದೆ.

ಮೀರಾ ಶಿವಲಿಂಗಯ್ಯ, ಸಭಾಧ್ಯಕ್ಷೆ, ರೆಡ್ಕ್ರಾಸ್ ಸಂಸ್ಥೆ, ಮಂಡ್ಯ.

ರೈತರಿಗೆ ಪರಿಹಾರ ಸಿಕ್ಕಿಲ್ಲ

ರೈತ-ಕೃಷಿ ಕೂಲಿಕಾರರ ಆತ್ಮಹತ್ಯೆಗಳು, ವಲಸೆ-ಮರುವಲಸೆ ಸಂಕಟಗಳು, ತೀವ್ರ ಗತಿಯಲ್ಲಿ ಹೆಚ್ಚುತ್ತಿರುವ ಗ್ರಾಮೀಣ ನಿರುದ್ಯೋಗ ಮತ್ತು ಸಾಲಭಾಧೆಗೆ ಪರಿಹಾರ ಒದಗಿಸುವಲ್ಲಿ 2025-26ರ ಈ ಬಜೆಟ್ ಕೂಡ ವಿಫಲವಾಗಿದೆ. ಕೃಷಿ ಉತ್ಪಾದನೆ ಹಾಗೂ ಕೃಷಿ ಭೂಮಿ ರಕ್ಷಣೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಕೃಷಿ ಉತ್ಪನ್ನಗಳ ಬೆಲೆ ಕುಸಿತ ದಿಂದ ಕಂಗೆಟ್ಟಿರುವ ರೈತ ಸಮುದಾಯಗಳಿಗೆ ಯಾವುದೇ ಪರಿಣಾಮಕಾರಿ ಪರಿಹಾರ ಒದಗಿಸಿಲ್ಲ.

–ಎನ್.ಎಲ್. ಭರತ್ರಾಜ್, ಜಿಲ್ಲಾ ಸಂಚಾಲಕ, ಕರ್ನಾಟಕ ಪ್ರಾಂತ ರೈತ ಸಂಘ

ಬಜೆಟ್ ನಿರಾಶಾದಾಯಕ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ನಿರಾಶಾದಾಯಕವಾಗಿದೆ. ವೃತ್ತಿ ತೆರಿಗೆಗೆ ಸಂಬಂಧಿಸಿದಂತೆ ‘ಕರ ಸಮಾಧಾನ’ ಯೋಜನೆ ಜಾರಿ ಮಾಡಬಹುದಿತ್ತು. ಇದರಿಂದ ವ್ಯಾಪಾರಸ್ಥರು ಇತರೆ ಕ್ಷೇತ್ರದ ವೃತ್ತಿಪರರ ದಂಡ ಮತ್ತು ಬಡ್ಡಿ ಹಣ ಉಳಿಯುತಿತ್ತು. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಕಡಿತಗೊಳಿಸಿಲ್ಲ. ವ್ಯಾಪಾರಸ್ಥರ ಹಿತದೃಷ್ಟಿ ಮರೆತಿರುವ ಬಜೆಟ್.

– ರಾಚಪ್ಪ ಶಂಕರ, ತೆರಿಗೆ ಸಲಹೆಗಾರರು, ಮಂಡ್ಯ.

ಕನಿಷ್ಠ ವೇತನ ನೀಡಿಲ್ಲ

ಅಂಗನವಾಡಿ ಕಾರ್ಯಕರ್ತೆಗೆ ₹1,000, ಸಹಾಯಕಿಗೆ ₹750, ಬಿಸಿಯೂಟ ನೌಕರರಿಗೆ ₹1,000, ಆಶಾಗೆ ₹1,000 ಅತಿಥಿ ಉಪನ್ಯಾಸಕರಿಗೆ ₹2,000 ನೀಡಿದ್ದಾರೆ. ಆದರೆ ಕನಿಷ್ಠ ವೇತನ ನೀಡಿಲ್ಲ. ಮಿನಿ ಅಂಗನವಾಡಿ ಪೂರ್ಣ ಅಂಗನವಾಡಿ ಎಂದು ಘೋಷಿಸಿದ್ದಾರೆ. ಗ್ರಾಚ್ಯುಟಿ ನೀಡಿದ್ದಾರೆ. ಮೂಗಿಗೆ ತುಪ್ಪು ಸವರಿದ ಬಜೆಟ್ ಆಗಿದೆ. ವೈದ್ಯಕೀಯ, ಶಿಕ್ಷಣ ಕ್ಷೇತ್ರಕ್ಕೆ ಅನುದಾನ ಹೆಚ್ಚಳ ಮಾಡಿರು ವುದು ಬಿಟ್ಟರೆ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಏನೂ ನೀಡಿಲ್ಲ.

–ಸಿ.ಕುಮಾರಿ, ಪ್ರಧಾನ ಕಾರ್ಯದರ್ಶಿ, ಮಂಡ್ಯ.

ಆರ್ಥಿಕ ಪರಿಸ್ಥಿತಿ ಸುಧಾರಣೆ ಬಜೆಟ್

ಪ್ರಸ್ತುತ ರಾಜ್ಯ ಸರ್ಕಾರದ ಬಜೆಟ್ ನೋಡಿದರೆ ಆರ್ಥಿಕ ಪರಿಸ್ಥಿತಿಯಲ್ಲಿ ತನ್ನ ಜವಾಬ್ದಾರಿಗಳನ್ನು ನಿರ್ವಹಣೆ ಮಾಡುವಲ್ಲಿ ಪೂರಕವಾಗಿದೆ. ವ್ಯವಸಾಯ ಮಾಡಲು ಅನುಕೂಲವಾಗುವಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೃಷಿ ಆಧುನಿಕ ಯಂತ್ರೋಪಕರಣಗಳನ್ನು ಕಡಿಮೆ ಬಾಡಿಗೆ ದರದಲ್ಲಿ ನೀಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕಿತ್ತು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಗೆ ಆದ್ಯತೆ ನೀಡಬೇಕಿತ್ತು.

–ಪುಟ್ಟಸ್ವಾಮಿ, ನಿವೃತ್ತ ಪ್ರಾಂಶುಪಾಲ. ಮಳವಳ್ಳಿ

ಬೆಲೆ ಏರಿಕೆಗೆ ಪರಿಹಾರ ಸಿಕ್ಕಿಲ್ಲ

ಕೃಷಿ ಬಿಕ್ಕಟ್ಟು, ಗ್ರಾಮೀಣ ನಿರುದ್ಯೋಗ, ಬೆಲೆ ಏರಿಕೆಯ ಬವಣೆಗೆ ಪರಿಹಾರ ಒದಗಿಸದ ಬಜೆಟ್ ಮಂಡಿಸಲಾಗಿದೆ. ರೈತ-ಕೃಷಿ ಕೂಲಿಕಾರರ ಆತ್ಮಹತ್ಯೆಗಳು, ವಲಸೆ-ಮರುವಲಸೆ ಸಂಕಟಗಳು, ತೀವ್ರ ಗತಿಯಲ್ಲಿ ಹೆಚ್ಚುತ್ತಿರುವ ಗ್ರಾಮೀಣ ನಿರುದ್ಯೋಗ ಮತ್ತು ಸಾಲಭಾಧೆಗೆ ಪರಿಹಾರ ಒದಗಿಸುವಲ್ಲಿ ಬಜೆಟ್ ಕೂಡ ವಿಫಲವಾಗಿದೆ. ಪಹಣಿಗಳಿಗೆ ಆಧಾರ್ ಜೋಡಣೆ, ರೈತರ ಪಂಪ್ಸೆಟ್ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಕೆ ಪ್ರಸ್ತಾಪ ಮತ್ತು ಕೃಷಿ ಮಾರುಕಟ್ಟೆ ಅಭಿವೃದ್ಧಿಯಲ್ಲಿ ಖಾಸಗಿ ಸಹಭಾಗಿತ್ವ ಇವೆಲ್ಲವೂ ಕೃಷಿ ಮತ್ತು ರೈತರಿಗೆ ಮಾರಕವಾಗಲಿವೆ.

– ಟಿ.ಎಲ್.ಕೃಷ್ಣೇಗೌಡ, ಕಾರ್ಯದರ್ಶಿ, ಸಿಪಿಐಎಂ, ಮಂಡ್ಯ.

ಕೃಷಿ ಕ್ಷೇತ್ರಕ್ಕೆ ಆದ್ಯತೆ ಸಾಲದು

ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಕೃಷಿ ಕ್ಷೇತ್ರಕ್ಕೆ ನಿರೀಕ್ಷಿತ ಪ್ರಮಾಣದ ಆದ್ಯತೆ ನೀಡಿಲ್ಲ. ಕೃಷಿ ಯಾಂತ್ರೀಕರಣ ಯೋಜನೆಯಡಿ 50 ಸಾವಿರ ರೈತರಿಗೆ ₹428 ಕೋಟಿ ನೀಡಿರುವುದು ಸಾಲುವುದಿಲ್ಲ. ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಕಲ್ಪಿಸಲು 52 ಸಾವಿರ ಫಲಾನುಭವಿಗಳಿಗೆ ₹426 ಕೋಟಿ ಒದಗಿಸಿರುವುದು ಕೂಡ ಕಡಿಮೆ. ಈ ಹಿಂದೆ ನಿರ್ಮಿಸಿರುವ ಕೃಷಿ ಹೊಂಡಗಳ ಪೈಕಿ ಶೇ 50ರಷ್ಟು ನಿರುಪಯುಕ್ತವಾಗಿದ್ದು, ಪ್ರಸಕ್ತ ಬಜೆಟ್ನಲ್ಲಿ ಮತ್ತೆ 12 ಸಾವಿರ ಕೃಷಿ ಹೊಂಡಗಳನ್ನು ನಿರ್ಮಿಸುವುದಾಗಿ ಘೋಷಿಸಿರುವುದು ಪ್ರಶ್ನಾರ್ಹವಾಗಿದೆ

–ಶಂಭುಗೌಡ, ಅಧ್ಯಕ್ಷ, ರೈತ ಸಂಘ, ಶ್ರೀರಂಗಪಟ್ಟಣ.

ಯುವ ಜನಾಂಗಕ್ಕೆ ಒತ್ತು ಸಿಕ್ಕಿಲ್ಲ

ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಯುವ ಜನಾಂಗದ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಿಲ್ಲ. ನಿರುದ್ಯೋಗ ಸಮಸ್ಯೆಗೆ ಪರಿಹಾರ ಕ್ರಮಗಳಿಲ್ಲ. ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳ ಉನ್ನತಿಗೆ ಮತ್ತಷ್ಟು ಪರಿಣಾಮಕಾರಿ ಕಾರ್ಯಕ್ರಮಗಳನ್ನು ರೂಪಿಸಬೇಕಿತ್ತು. ಸರ್ಕಾರಿ ಶಾಲೆಗಳನ್ನು ಉಳಿಸಲು ನಿರ್ದಿಷ್ಟ ಯೋಜನೆಗಳು ಬಜೆಟ್ನಲ್ಲಿ ಇಲ್ಲದೇ ಇರುವುದು ನಿರಾಸೆ ಮೂಡಿಸಿದೆ.

–ಕೆ.ಎಸ್.ಜಯಶಂಕರ್, ಸಾಮಾಜಿಕ ಕಾರ್ಯಕರ್ತ, ಶ್ರೀರಂಗಪಟ್ಟಣ.

ಕಿರುಧಾನ್ಯ ಬೆಳೆಗೆ ಪ್ರೋತ್ಸಾಹ

ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಗೆ ₹25 ಕೋಟಿ ಅನುದಾನ ಖುಷಿ ಸಂಗತಿ. ಕಿರುಧಾನ್ಯ ಬೆಳೆಗೆ ಪ್ರೋತ್ಸಾಹ , ಜಮೀನಿಗೆ ಈ ಖಾತೆ ಮಾಡುವ ಯೋಜನೆ ಸ್ವಾಗತಾರ್ಹವಾಗಿದೆ. ಉತ್ಪಾದನಾ ವೆಚ್ಚಕ್ಕೆ ನೀಡಿರುವ ಅಷ್ಟು ಮಾರುಕಟ್ಟೆ ವ್ಯವಸ್ಥೆಗೆ ಬೆಂಬಲ ಬೇಕಿತ್ತು. ನೂತನ ತೊಗರಿ ಬೆಳೆದಾರರಿಗೆ ವಿಶೇಷ ಆದ್ಯತೆ ನೀಡುವ ಮುನ್ನ ಸಂಕಷ್ಟದಲ್ಲಿರುವ ತೊಗರಿ ಬೆಳೆದಾರರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ನೀಡಬೇಕಿತ್ತು.

–ನಂದಿನಿ ಜಯರಾಮ್, ರೈತಪರ ಹೋರಾಟಗಾರ್ತಿ

ಶಿಕ್ಷಣ ಕ್ಷೇತ್ರ ಸುಧಾರಣೆಗೆ ಆದ್ಯತೆ

ಈ ಬಾರಿಯ ರಾಜ್ಯ ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಹೆಚ್ಚು ಹೊತ್ತು ನೀಡಿರುವುದು, ಸರ್ಕಾರಿ ಶಾಲೆಗಳನ್ನು ಉಳಿಸುವದರ ಜೊತೆಗೆ ಅದನ್ನು ಬಲವರ್ಧನೆ ಮಾಡುವ ಪ್ರಯತ್ನಕ್ಕೆ ಗಮನ ನೀಡಿರುವುದು ಪ್ರಶಂಸನೀಯ. ಶಾಲೆಗಳನ್ನು ಗುರುತಿಸಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಒಂದೆಡೆ ವಿಲೀನಗೊಳಿಸಿ ಕೆಪಿಎಸ್ ಮಾದರಿಯವ ಪಬ್ಲಿಕ್ ಶಾಲೆಗಳನ್ನು ತೆರೆಯಬೇಕೆಂಬ ಸರ್ಕಾರದ ಉದ್ದೇಶ ಸ್ವಾಗತ.

–ಬಿ.ಎ.ಶಶಿಧರ, ಕೆ.ಆರ್.ಪೇಟೆ.

ಜನಪರ ಬಜೆಟ್

ಪ್ರಸ್ತುತ ಬಜೆಟ್ ಮೂಲಕ ಬಡವರು ಹಾಗೂ ಜನಸಮಾನ್ಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಕ್ತಿ ತುಂಬಿದ್ದಾರೆ. ಶಿಕ್ಷಣ, ಮಹಿಳಾ ಸಬಲೀಕರಣ, ಗ್ರಾಮೀಣಾಭಿವೃದ್ಧಿ, ನೀರಾವರಿ, ವಸತಿ, ಆರೋಗ್ಯ ಸೇರಿದಂತೆ ಹಲವು ಕ್ಷೇತ್ರಗಳಿಗೆ ದೂರದೃಷ್ಟಿಯೊಂದಿಗೆ ಚಿಂತನೆ ನಡೆಸುವುದರ ಮೂಲಕ ಜನಪರ ಬಜೆಟ್ ಮಂಡಿಸಿದ್ದಾರೆ. ಶಿಕ್ಷಣ ಕ್ಷೇತ್ರದ ಘೋಷಣೆಗಳು ಮಾದರಿಯಾಗಿವೆ.

–ಡಿ.ಎಂ. ಸುಂದರ್, ಅಧ್ಯಕ್ಷ. ಮಳವಳ್ಳಿ ತಾಲ್ಲೂಕು ವಕೀಲರ ಸಂಘ

ಹುಸಿಯಾದ ನಿರೀಕ್ಷೆ

ಮಹಿಳೆಯರಿಗೆ ಹಾಗೂ ರೈತರಿಗೆ ಪ್ರೋತ್ಸಾಹ ನೀಡಿರುವುದು ಸ್ವಾಗತಾರ್ಹ ವಿಚಾರವಾಗಿದೆ. ಶಿಕ್ಷಣ ಇಲಾಖೆಯು ಸರ್ಕಾರಿ ಪ್ರೌಢಶಾಲೆ ಅಭಿವೃದ್ಧಿ ಮಾಡಬೇಕು. ಮಕ್ಕಳಿಗೆ ಮೂಲಸೌಕರ್ಯ ನೀಡಬೇಕು. ಸರ್ಕಾರ ನೀಡುತ್ತಿರುವ ಅನುದಾಗಳನ್ನು ಅಧಿಕಾರಿಗಳು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಿದರೆ ಬಜೆಟ್ ತಲುಪಿದಂತಾಗುತ್ತದೆ. ಸಂತೇಬಾಚಹಳ್ಳಿ ಹೋಬಳಿಯ ಬಳಿ ರೈಲ್ವೆ ಮಾರ್ಗ ಕಲ್ಪಿಸಬೇಕು. ಇಲ್ಲಿನ ಹೇಮಾವತಿ ನಾಲೆ ವಿಸ್ತರಣೆ ಮಾಡುವ ಯೋಜನೆ ಸಿಗಬೇಕೆಂಬ ವಿಶ್ವಾಸದಲ್ಲಿದ್ದೆವು ಅದು ಹುಸಿಯಾಗಿದೆ.

–ಬಿ.ಮೋಹನ್, ಸಾಮಾಜಿಕ ಹೋರಾಟಗಾರ

ಸಮತೋಲನದ ಬಜೆಟ್

ಗ್ಯಾರಂಟಿ ಯೊಜನೆಗಳ ಜಾರಿಯ ನಡುವೆಯೂ ರಾಜ್ಯ ಸರ್ಕಾರವು ಮಂಡಿಸಿರುವ ಬಜೆಟ್ ಸಮತೊಲನ ಕಾಯ್ದುಕೊಂಡಿದೆ. ರಾಮನಗರ, ಶಿಡ್ಲಘಟ್ಟ ರೇಷ್ಮೆ ಗೂಡಿನ ಮಾರುಕಟ್ಟೆಗೆ ₹250 ಕೋಟಿ ಹಾಗೂ ಮದ್ದೂರಿನಲ್ಲಿ ಬಹಳ ವರ್ಷಗಳಿಂದಲೂ ನಿರೀಕ್ಷಿಸುತ್ತಿದ್ದ ಪೇಟೆ ಬೀದಿ ವಿಸ್ತರಣೆ ಘೊಷಣೆ ಸ್ವಾಗತಾರ್ಹ.

–ನ.ಲಿ.ಕೃಷ್ಣ, ರೈತ ಮುಖಂಡ, ಮದ್ದೂರು.

ಪ್ರಾದೇಶಿಕ ಅಸಮಾನತೆ ನಿವಾರಿಸಿಲ್ಲ

ಈ ಬಜೆಟ್ ಆರೋಗ್ಯ, ಶಿಕ್ಷಣ ಮತ್ತು ಪರಿಸರದಲ್ಲಿನ ಪ್ರಗತಿಪರ ಕ್ರಮ ಪರಿಚಯಿಸಿದ್ದರು ಸಹ ಪ್ರಾದೇಶಿಕ ಅಸಮಾನತೆಗಳನ್ನ ವಿಶೇಷವಾಗಿ ನಮ್ಮ ಮಂಡ್ಯ ಜಿಲ್ಲೆಯಲ್ಲಿ ಪರಿಹರಿಸಲು ವಿಫಲವಾಗಿದೆ. ಮಂಡ್ಯದ ಕೃಷಿ, ಪುಷ್ಪ ಕೃಷಿ, ಕೈಗಾರಿಕಾ ಮತ್ತು ಆರೋಗ್ಯ ರಕ್ಷಣೆಯ ಅಗತ್ಯಗಳನ್ನು ಸಂಪೂರ್ಣವಾಗಿ ಕಡೆಗಣಿಸಿರುವ ಬಜೆಟ್ ಇದಾಗಿದೆ. ರಾಜ್ಯ ಸರ್ಕಾರ ನೀಡಿರುವ ತನ್ನ ಅನುದಾನ ಹಂಚಿಕೆಗಳನ್ನು ಮರುಪರಿಶೀಲಿಸಬೇಕು. ಎಲ್ಲಾ ಜಿಲ್ಲೆಗಳಲ್ಲಿ ಸಮತೋಲಿತ ಅಭಿವೃದ್ಧಿ ಖಚಿತಪಡಿಸಿಕೊಳ್ಳಬೇಕು.

–ಟಿ.ವರಪ್ರಸಾದ್, ಉದ್ಯಮಿ, ಮಂಡ್ಯ.

ಶಾಲೆ ಮುಚ್ಚುವ ಕ್ರಮ ಸರಿಯಲ್ಲ

ಮೊದಲ ಹಂತದಲ್ಲಿ 6000ಕ್ಕೂ ಅಧಿಕ ಸರ್ಕಾರಿ ಶಾಲೆ ಮುಚ್ಚಲು ಹೊರಟಿರುವ ಸರ್ಕಾರದ ಬಡ-ವಿದ್ಯಾರ್ಥಿ- ಜನ ವಿರೋಧಿ ನಿಲುವಿಗೆ ಎ.ಐ.ಡಿ.ಎಸ್.ಓ ಹಾಗೂ ರಾಜ್ಯದ ಜನತೆಯ ಪ್ರತಿರೋಧಕ್ಕೆ ಕಿವಿಗೊಡದೆ ಮಾದರಿ ಶಾಲೆಗಳ ಹೆಸರಿನಲ್ಲಿ ರಾಜ್ಯದ ಸಾವಿರಾರು ಶಾಲೆಗಳನ್ನು ಮುಚ್ಚಲು ಹೊರಟಿರುವ ಈ ಬಜೆಟ್ಟನ್ನು ರಾಜ್ಯದ ವಿದ್ಯಾರ್ಥಿಗಳು ತಿರಸ್ಕರಿಸುತ್ತಾರೆ. 500 ಪಬ್ಲಿಕ್ ಶಾಲೆಗಳ ನಿರ್ಮಾಣ ಸ್ವಾಗತಾರ್ಹವಾಗಿದ್ದರೂ, ಈಗಾಗಲೇ ಇರುವ ಶಾಲೆಗಳನ್ನು ಮುಚ್ಚಲು ಇದು ಸಮಜಾಯಿಶಿ ಅಲ್ಲ.

– ಚಂದ್ರಕಲಾ, ಜಿಲ್ಲಾ ಸಂಚಾಲಕಿ, ಎಐಡಿಎಸ್ಒ, ಮಂಡ್ಯ

ರೈತರ ಸಬಲೀಕರಣಕ್ಕೆ ಒತ್ತು

ಇದೊಂದು ಸಮತೋಲಿತ ಬಜೆಟ್ ಆಗಿದ್ದು, ಎಲ್ಲಾ ವರ್ಗದ ಜನರ ಶ್ರೇಯೋಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಸರ್ವರನ್ನು ಒಳಗೊಂಡ ಚಾರಿತ್ರಿಕ ಆಯವ್ಯಯ ರೂಪಿಸಲಾಗಿದೆ. ಬಜೆಟ್ನಲ್ಲಿ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ರೈತರ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ. ಕೃಷಿ ಮತ್ತು ತೋಟಗಾರಿಕೆಗೆ ₹7,145 ಕೋಟಿ ಮೀಸಲಿಡಲಾಗಿದೆ. ಕೃಷಿ, ನೀರಾವರಿ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರಕ್ಕೆ ಶೇ 14ರಷ್ಟು ಅನುದಾನ ಮೀಸಲಿರಿಸಿದೆ. ಮಂಡ್ಯ ಕೃಷಿ ವಿಶ್ವವಿದ್ಯಾಲಯ ಮೂಲಭೂತ ಸೌಕರ್ಯ ಕಲ್ಪಿಸಲು ₹ 25 ಕೋಟಿ ಅನುದಾನ ಪ್ರಸಕ್ತ ಸಾಲಿನಲ್ಲೇ ತರಗತಿ ಪ್ರಾರಂಭವಾಗಲಿದೆ

– ಎನ್.ಚಲುವರಾಯಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ

ಸರ್ವಹಿತದ ಬಜೆಟ್

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟದ 7 ಕೋಟಿ ಜನರ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ಮಂಡಿಸಿದ್ದಾರೆ. ರಾಜಧಾನಿ ಬೆಂಗಳೂರಿನ ಅಭಿವೃದ್ಧಿ, ಹಳೆ ಮೈಸೂರು ಭಾಗಕ್ಕೆ ಒತ್ತು. ಉತ್ತರ ಕರ್ನಾಟಕ ಭಾಗಕ್ಕೆ ಕೈಗಾರಿಕೆಗಳನ್ನು ನೀಡಿದ್ದಾರೆ. ಕೃಷಿಗೆ ಅಗ್ರ ತಾಂಬೂಲ ಕೊಟ್ಟಿರುವುದು, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಕೊಟ್ಟಿರುವುದು ಎಲ್ಲ ಸಮುದಾಯವನ್ನು ಗಮನದಲ್ಲಿರಿಸಿಕೊಂಡು ಬಜೆಟ್ ರೂಪಿಸಿರುವುದು ಮಾದರಿಯಾಗಿದೆ.

– ದಿನೇಶ ಗೂಳಿಗೌಡ, ವಿಧಾನ ಪರಿಷತ್ ಸದಸ್ಯ

ಆಶಾದಾಯಕ ಬಜೆಟ್

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ದಾಖಲೆಯ 16ನೇ ಬಜೆಟ್ ರೈತ, ಕಾರ್ಮಿಕ ಸೇರಿದಂತೆ ಎಲ್ಲ ವರ್ಗದವರ ಹಿತ ಕಾಪಾಡುವ ಆಶಾದಾಯಕ ಬಜೆಟ್ ಆಗಿದೆ. ಆಕಸ್ಮಿಕವಾಗಿ ಮೃತಪಡುವ ರಾಸುಗಳಿಗೆ ಪರಿಹಾರದ ಮೊತ್ತವನ್ನು ಹೆಚ್ಚಳ ಮಾಡಿದ್ದಾರೆ. ಸರಕಾರ ದಿವಾಳಿಯಾಗಿದೆ ಎಂದು ಟೀಕಿಸುವವರಿಗೆ ಸರಿಯಾದ ರೀತಿಯಲ್ಲಿ ಸಿದ್ದರಾಮಯ್ಯ ಬಜೆಟ್ ಮೂಲಕ ಉತ್ತರ ನೀಡಿದ್ದಾರೆ.

– ಮಧು ಜಿ.ಮಾದೇಗೌಡ, ವಿಧಾನ ಪರಿಷತ್ ಸದಸ್ಯ

ದಲಿತ ವಿರೋಧಿ ಬಜೆಟ್

ದಲಿತರನ್ನು ಬಳಸಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರವು, ಈ ಬಜೆಟ್ನಲ್ಲೂ ದಲಿತ ವಿರೋಧಿ ಧೋರಣೆ ಪ್ರದರ್ಶಿಸಿದೆ. ದಲಿತರಿಗೆ ಯಾವುದೇ ಹೊಸ ಯೋಜನೆಗಳನ್ನು ನೀಡದೆ, ದಲಿತರಿಗೆ ಮೀಸಲಾದ ಹಣವನ್ನು ದುರುಪಯೋಗ ಪಡಿಸಿಕೊಂಡಿದೆ. ಮುಸ್ಲಿಂರನ್ನು ಓಲೈಸಿರುವ ಸಿಎಂ ಸಿದ್ದರಾಮಯ್ಯ ಅವರು ಅಹಿಂದ ವರ್ಗಕ್ಕೂ ಅನ್ಯಾಯವೆಸಗಿದ್ದಾರೆ. ಒಟ್ಟಾರೆ ನಿರಾಸಾದಾಯಕ ಬಜೆಟ್ ಇದಾಗಿದೆ.

-ಎಸ್.ಸಚ್ಚಿದಾನಂದ ಇಂಡುವಾಳು, ಬಿಜೆಪಿ ಮುಖಂಡ, ಮಂಡ್ಯ

ಬಜೆಟ್ ಖಂಡಿಸಿ ಪ್ರತಿಭಟನೆ

ರೈತ, ದಲಿತ ಮತ್ತು ಮಹಿಳಾ ವಿರೋಧಿ ಬಜೆಟ್ ಇದಾಗಿದೆ. ಈ ಬಜೆಟ್ನ್ನು ಖಂಡಿಸಿ ಮಾ.8ರಂದು ಮಂಡ್ಯದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಇದು ಅಭಿವೃದ್ಧಿ ಶೂನ್ಯ ಸರಕಾರ. ಜನರಿಗೆ ಸುಳ್ಳು ಹೇಳಿಕೊಂಡು ವಂಚಿಸುತ್ತಾ ಬಂದಿದೆ.

-ಎನ್.ಎಸ್.ಇಂದ್ರೇಶ್, ಜಿಲ್ಲಾ ಘಟಕದ ಅಧ್ಯಕ್ಷ, ಬಿಜೆಪಿ, ಮಂಡ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.