ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Union Budget: ರಾಷ್ಟ್ರೀಯ ಹೆದ್ದಾರಿ ಜಾಲ ಯೋಜನೆ ವರ್ಷ 25,000 ಕಿ.ಮೀ ವಿಸ್ತರಣೆ

Last Updated 1 ಫೆಬ್ರುವರಿ 2022, 16:44 IST
ಅಕ್ಷರ ಗಾತ್ರ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲವನ್ನು 25,000 ಕಿಮೀಗಳಷ್ಟು ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಇದನ್ನು ಬಜೆಟ್‌ನಲ್ಲಿ ಪ್ರಕಟಿಸಿದೆ.

ಹೆದ್ದಾರಿ ಜಾಲವನ್ನು 25,000 ಕಿ.ಮೀಗೆ ವಿಸ್ತರಿಸಬೇಕು ಎಂದರೆ ದಿನಕ್ಕೆ 70 ಕಿ.ಮೀ ರಸ್ತೆಯನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನಿರ್ಮಿಸಬೇಕಾಗುತ್ತದೆ. ಕಳೆದ ಸಾಲಿನಲ್ಲಿ ದಿನಕ್ಕೆ 40 ಕಿ.ಮೀ ರಸ್ತೆ ನಿರ್ಮಿಸುವ ಗುರಿ ಹೊಂದಲಾಗಿತ್ತು.2020-21 ರಲ್ಲಿ ದಿನಕ್ಕೆ 28 ಕಿ.ಮೀ ರಸ್ತೆ ನಿರ್ಮಾಣವಾಗುತ್ತಿತ್ತು. 2020–21ರಲ್ಲಿ ಇದು ಶೇ 36.5ರಷ್ಟು ಏರಿಕೆಯಾಗಿತ್ತು.

ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ನಾಲ್ಕು ಕಡೆ ಬಹುಮಾದರಿ ಲಾಜಿಸ್ಟಿಕ್ಸ್ ಪಾರ್ಕ್‌ಗಳ ಅನುಷ್ಠಾನಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು.ಸಾರ್ವಜನಿಕ ಸಂಪನ್ಮೂಲಗಳಿಗೆ ಪೂರಕವಾಗಿ ಹೊಸ ವಿಧಾನಗಳ ಮೂಲಕ ₹ 20,000 ಕೋಟಿ ಸಂಗ್ರಹಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಜನರು ಮತ್ತು ಸರಕುಗಳ ವೇಗದ ಚಲನೆಗೆ ಅನುಕೂಲವಾಗುವಂತೆ ಎಕ್ಸ್‌ಪ್ರೆಸ್‌ವೇಗಳಿಗಾಗಿ ‘ಪಿಎಂ ಗತಿ ಶಕ್ತಿ ಮಾಸ್ಟರ್ ಪ್ಲಾನ್’ ರೂಪಿಸಲಾಗುವುದು.ಕಷ್ಟಕರವಾದ ಗುಡ್ಡಗಾಡು ಪ್ರದೇಶಗಳಲ್ಲಿ ರಾಷ್ಟ್ರೀಯ ರೋಪ್‌ವೇಸ್ ಅಭಿವೃದ್ಧಿ ಕಾರ್ಯಕ್ರಮವನ್ನು ಪಿಪಿಪಿ ಮಾದರಿಯಲ್ಲಿ ತೆಗೆದುಕೊಳ್ಳಲಾಗುವುದು ಎಂದು ಪ್ರಸ್ತಾಪಿಸಿದ್ದಾರೆ.

ಪ್ರವಾಸೋದ್ಯಮವನ್ನು ಉತ್ತೇಜಿಸುವುದರ ಜೊತೆಗೆ ಪ್ರಯಾಣಿಕರಿಗೆ ಸಂಪರ್ಕ ಮತ್ತು ಅನುಕೂಲತೆಯನ್ನು ಸುಧಾರಿಸುವ ಗುರಿ ಹೊಂದಲಾಗಿದೆ.60 ಕಿಮೀ ಉದ್ದದ ಎಂಟು ರೋಪ್‌ವೇ ಯೋಜನೆಗಳ ಗುತ್ತಿಗೆಯನ್ನು ಈ ಆರ್ಥಿಕ ಸಾಲಿನಲ್ಲಿ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ನಗರಾಭಿವೃದ್ಧಿ
*ನಗರ ಯೋಜನೆ ಮತ್ತು ವಿನ್ಯಾಸದಲ್ಲಿ ನಿರ್ದಿಷ್ಟ ಜ್ಞಾನ ಅಭಿವೃದ್ಧಿಪಡಿಸಲು ಮತ್ತು ಈ ಕ್ಷೇತ್ರದಲ್ಲಿ ಉನ್ನತಮಟ್ಟದ ತರಬೇತಿ ನೀಡಲು ಸುಮಾರು ಐದು ಸಂಸ್ಥೆಗಳನ್ನು ದೇಶದ ವಿವಿಧ ಭಾಗಗಳಲ್ಲಿ ಸ್ಥಾಪಿಸಲಾಗುವುದು. ಈ ಕೇಂದ್ರಗಳಿಗೆ ತಲಾ ₹250 ಕೋಟಿ ದತ್ತಿ ನೀಡಲಾಗುವುದು.
*ದೇಶಕ್ಕೆ ಸ್ವಾತಂತ್ರ್ಯ ಬಂದು 100 ವರ್ಷ ತುಂಬುವಷ್ಟರಲ್ಲಿ ದೇಶದ ಅರ್ಧದಷ್ಟು ಜನಸಂಖ್ಯೆ ನಗರಗಳಲ್ಲಿ ವಾಸಿಸಲಿದ್ದಾರೆ. ಆ ದಿನಗಳಿಗಾಗಿ ನಗರಗಳನ್ನು ಅಣಿಗೊಳಿಸಬೇಕು. ಅದಕ್ಕಾಗಿ ಬೃಹತ್‌ ನಗರಗಳನ್ನು ಉತ್ತಮಪಡಿಸಬೇಕು. ಎರಡು ಮತ್ತು ಮೂರನೇ ಹಂತದ ನಗರಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.
*ನಗರ ವಲಯ ನೀತಿಗಳು, ಕಟ್ಟಡಗಳ ಸಾಮರ್ಥ್ಯ, ನಗರಗಳ ಯೋಜನೆ ಮತ್ತು ಆಡಳಿತ ಕುರಿತು ಶಿಫಾರಸ್ಸುಗಳನ್ನು ನೀಡುವ ಸಲುವಾಗಿ ನಗರಗಳ ಯೋಜನೆ ಮಾಡವವರು, ಅರ್ಥಶಾಸ್ತ್ರಜ್ಞರು, ಸಂಸ್ಥೆಗಳನ್ನು ಒಳಗೊಂಡಿರುವ ಉನ್ನತ ಮಟ್ಟದ ಸಮಿತಿ ರಚನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT