ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮೀಕ್ಷೆ ಮುದ್ರಿಸದಿರುವುದೇ ಮೋದಿ ಸರ್ಕಾರದ ಉತ್ತಮ ನಿರ್ಧಾರ: ಚಿದಂಬರಂ ವ್ಯಂಗ್ಯ

Last Updated 30 ಜನವರಿ 2021, 4:42 IST
ಅಕ್ಷರ ಗಾತ್ರ

ನವದೆಹಲಿ: ‘ಕೇಂದ್ರ ಸರ್ಕಾರವು ಶುಕ್ರವಾರ ಸಂಸತ್‌ನಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆಯ ಉದ್ದೇಶವೇ ಸ್ಪಷ್ಟವಾಗಿಲ್ಲ. ಮೋದಿ ಸರ್ಕಾರವು ಆರ್ಥಿಕ ಚೇತರಿಕೆಗೆ ದೂರದೃಷ್ಟಿಯ ನೀತಿಯನ್ನು ಜಾರಿಗೆ ತಂದಿದೆ ಎಂಬ ಸ್ವಯಂ ಅಭಿನಂದನೆಯನ್ನು ಮಾತ್ರ ಒಳಗೊಂಡಿದೆ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ, ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಟೀಕಿಸಿದ್ದಾರೆ.

ಆರ್ಥಿಕ ಸಮೀಕ್ಷೆಯನ್ನು ಮುದ್ರಿಸದೆ ಇರುವುದೇ ಸರ್ಕಾರ ಕೈಗೊಂಡ ‘ಉತ್ತಮ ನಿರ್ಧಾರ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

‘ಒಂದು ಕಾಲದಲ್ಲಿ, ಆರ್ಥಿಕ ಸಮೀಕ್ಷೆಯು ಮುಂಬರುವ ವರ್ಷದ ಆರ್ಥಿಕ ಮುನ್ಸೂಚನೆ ಮತ್ತು ದೇಶದ ಆರ್ಥಿಕತೆಯ ಸ್ಥಿತಿಯನ್ನು ಸರಳವಾಗಿ ಜನರಿಗೆ ಮನವರಿಕೆ ಮಾಡಿಕೊಡುವ ಮಾಧ್ಯಮವಾಗಿತ್ತು’ ಎಂದು ಅವರು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

‘ಈಗ ಸಮೀಕ್ಷೆಯು ಭಿನ್ನ ಉದ್ದೇಶವನ್ನು ಹೊಂದಿದೆ. ಆದರೂ ಆ ಉದ್ದೇಶ ಏನೆಂಬುದು ಸ್ಪಷ್ಟವಾಗಿಲ್ಲ’ ಎಂದು ಚಿದಂಬರಂ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT