ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಬಜೆಟ್ 2020: ರೈತರಿಗಾಗಿ ಕಿಸಾನ್ ರೈಲು ಯೋಜನೆ

Last Updated 1 ಫೆಬ್ರುವರಿ 2020, 10:33 IST
ಅಕ್ಷರ ಗಾತ್ರ

ನವದೆಹಲಿ:ರೈತರ ಜೇಬಿಗೆ ಹೆಚ್ಚಿನ ಹಣ ಹರಿದುಬರುವಂತೆ ಮಾಡಲು ಕಿಸಾನ್ ರೈಲು ಯೋಜನೆ ಮತ್ತು ಕಿಸಾನ್ ಉಡಾನ್ ಯೋಜನೆಯನ್ನು ಸರ್ಕಾರಜಾರಿಗೆ ತರಲಿದೆ.

ಭಾರತೀಯ ರೈಲ್ವೆ ಇಲಾಖೆಯ ಸಹಕಾರದೊಂದಿದೆಈ ರೈಲು ದೇಶದಾದ್ಯಂತ ಸಂಚರಿಸಲಿದೆ. ಕಿಸಾನ್ ರೈಲಿನಲ್ಲಿ ರೈತರು ಬೆಳೆದ ತರಕಾರಿ, ಹಣ್ಣುಗಳನ್ನು ಸಂರಕ್ಷಿಸಲು ಶೀತಲೀಗೃಹ ಜಾಲ ನಿರ್ಮಿಸಿ ಆ ಮೂಲಕ ರೈತರಬೆಳೆಗಳಿಗೆ ಸರಿಯಾದ ಬೆಲೆ ದೊರಕಿಸಿಕೊಡಲಾಗುವುದು.ಇದು ಜಾರಿಗೆ ಬಂದಲ್ಲಿ ರೈತರು ತಾವು ಬೆಳೆದ ಬೆಳೆಗಳನ್ನು ಸಂರಕ್ಷಿಸಿ ಬೆಲೆ ಹೆಚ್ಚಾದಾಗ ಮಾರಾಟ ಮಾಡಲು ಅನುಕೂಲವಾಗಲಿದೆ.

ಉದಾಹರಣೆಗೆ ಟೊಮ್ಯಾಟೋ ಹೆಚ್ಚು ಬೆಳೆದರೆ ಅದಕ್ಕೆ ಸರಿಯಾದ ಬೆಲೆ ಸಿಗದಿದ್ದಾಗ ರೈತರು ಹತಾಶರಾಗಿ ರಸ್ತೆಗೆ ಚಲ್ಲುತ್ತಾ, ನಷ್ಟ ಅನುಭವಿಸುತ್ತಿದ್ದರು. ಕಿಶಾನ್ ರೈಲು ಹಾಗೂ ಕಿಸಾನ್ ಉಡಾನ್ಪದ್ದತಿ ಜಾರಿಗೆ ಬಂದರೆ ಈ ರೀತಿಯ ನಷ್ಟ ಸಂಭವಿಸುವ ಪ್ರಮೇಯ ಬರುವುದಿಲ್ಲ.ಈ ಶೀತಲೀಗೃಹ(ಕೋಲ್ಡ್ ಸ್ಟೋರೇಜ್) ವ್ಯವಸ್ಥೆ ಇರುವ ವಿಮಾನಗಳನ್ನು ಯೋಜನೆಯಲ್ಲಿ ಬಳಸಿಕೊಳ್ಳಲಾಗುವುದು. ಇದಕ್ಕಾಗಿ ನಾಗರಿಕವಿಮಾನ ಯಾನ ಖಾತೆ ಸಚಿವಾಲಯದೊಂದಿಗೆ ಮಾತುಕತೆ ನಡೆಸುವ ಸರ್ಕಾರ ಯೋಜನೆಯನ್ನು ಕಾರ್ಯರೂಪಕ್ಕೆ ತರಲಿದೆ.

ಈ ಯೋಜನೆಯ ವಚ್ಚಕ್ಕಾಗಿ ₹15 ಲಕ್ಷ ಕೋಟಿ ಹೂಡಿಕೆ ಮಾಡಲಾಗುವುದು. ಖಾಸಗಿ ಸಹಭಾಗಿತ್ವದಲ್ಲಿ ರಾಷ್ಟ್ರೀಯ ಶೀತಲೀಗೃಹ ಜಾಲ ನಿರ್ಮಾಣಕ್ಕೆ ನಬಾರ್ಡ್‌‌ನಿಂದ ಈ ಹಣಕಾಸು ಯೋಜನೆ ವಿಸ್ತರಣೆ ಮಾಡಲಾಗುವುದು.

ಮೀನು ರಫ್ತಿನಿಂದ ಅಧಿಕ ಆದಾಯ

ನೀಲಿ ಕ್ರಾಂತಿಯಿಂದ ಹೆಚ್ಚಿನ ಆದಾಯ ಬರುವ ನಿರೀಕ್ಷೆ ಇದ್ದು, 2024-25ನೇ ಸಾಲಿಗೆ 1ಲಕ್ಷ ಕೋಟಿ ಮೀನು ಉತ್ಪಾದಿಸಿ ರಫ್ತು ಮಾಡುವ ಗುರಿ ಹೊಂದಲಾಗಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಬಜೆಟ್ ಭಾಷಣದಲ್ಲಿ ಹೇಳಿರುವ ಅವರು, 2022-23ರವರೆಗೆ 200 ಲಕ್ಷ ಟನ್ ಮೀನು ಉತ್ಪಾದಿಸುವ ಗುರಿ ಹೊಂದಲಾಗಿದೆ. 3477 ಸಾಗರ ಮಿತ್ರ ಹಾಗೂ 500 ಮೀನು ಉತ್ಪಾದನಾ ಸಂಘಗಳು ಇದರಲ್ಲಿ ಭಾಗಿಯಾಗಲಿದ್ದಾರೆ. ಸಮುದ್ರಕಳೆ, ಪಂಜರ ಪದ್ದತಿಗೆ ಉತ್ತೇಜನ ನೀಡಲಾಗುವುದು.ಸಮುದ್ರ ಮೀನುಗಾರಿಕೆ, ಸಂಪನ್ಮೂಲಗಳನ್ನು ಸಂರಕ್ಷಿಸಲು ಕಾರ್ಯಕ್ರಮ ರೂಪಿಸಲಾಗುವುದು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT