ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 34 ಲಕ್ಷ ಕೋಟಿ ರೂಪಾಯಿಗಳ ಬಜೆಟ್ ಮಂಡಿಸಿದ್ದಾರೆ. ಹಾಗಾದರೆ, ಈ ಬೃಹತ್ ಬಜೆಟ್ಗೆ ಹಣ ಎಲ್ಲಿಂದ ಬರುತ್ತದೆ ಮತ್ತು ಯಾವ ಯಾವ ವಲಯಕ್ಕೆ ಎಷ್ಟು ಖರ್ಚಾಗಲಿದೆ ಎಂಬುದನ್ನು ರೂಪಾಯಿಗೆ ಹೋಲಿಸಿ ಪೈಸೆಗಳ ಲೆಕ್ಕದಲ್ಲಿ ನೋಡುವುದಾದರೆ..

ಕೇಂದ್ರ ಸರಕಾರದ ಬೊಕ್ಕಸಕ್ಕೆ ಪ್ರತಿ ರೂಪಾಯಿಗೆ 58 ಪೈಸೆ ನೇರ ಮತ್ತು ಪರೋಕ್ಷ ತೆರಿಗೆಯಿಂದ ಬರುತ್ತದೆ. 35 ಪೈಸೆ ಸಾಲ ಮತ್ತು ಇತರ ಮೂಲಗಳಿಂದ, 5 ಪೈಸೆ ತೆರಿಗೆಯೇತರ ಆದಾಯದಿಂದ ಮತ್ತು 2 ಪೈಸೆ ಸಾಲಯೇತರ ಬಂಡವಾಳ ಸಂದಾಯಗಳಿಂದ ಬರಲಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಸಂಸತ್ತಿನಲ್ಲಿ ಮಂಡಿಸಿದ ಕೇಂದ್ರ ಬಜೆಟ್ 2022-23 ರ ಪ್ರಕಾರ, ಸರಕು ಮತ್ತು ಸೇವಾ ತೆರಿಗೆಯು ಪ್ರತಿ ರೂಪಾಯಿ ಆದಾಯದಲ್ಲಿ 16 ಪೈಸೆಗಳ ಕೊಡುಗೆ ನೀಡಿದರೆ, ಕಾರ್ಪೊರೇಷನ್ ತೆರಿಗೆಯು 15 ಪೈಸೆ ಕೊಡುಗೆ ನೀಡುತ್ತದೆ.

ಯೂನಿಯನ್ ಅಬಕಾರಿ ಸುಂಕದಿಂದ ಪ್ರತಿ ರೂಪಾಯಿಗೆ 7 ಪೈಸೆ ಮತ್ತು ಕಸ್ಟಮ್ಸ್ ಸುಂಕದಿಂದ 5 ಪೈಸೆ ಗಳಿಸಲು ಸರ್ಕಾರ ಎದುರ ನೋಡುತ್ತಿದೆ. ಆದಾಯ ತೆರಿಗೆಯು ಪ್ರತಿ ರೂಪಾಯಿಯಲ್ಲಿ 15 ಪೈಸೆ ನೀಡುತ್ತದೆ. ಸಾಲಗಳು ಮತ್ತು ಇತರ ಹೊಣೆಗಾರಿಕೆಗಳಿಂದ ತೆರಿಗೆ ಸಂಗ್ರಹವು 35 ಪೈಸೆಯಾಗಿರುತ್ತದೆ ಎಂದು ಬಜೆಟ್ನಲ್ಲಿ ತಿಳಿಸಲಾಗಿದೆ.

ಯಾವ ವಲಯಕ್ಕೆ ಎಷ್ಟು ವೆಚ್ಚ?

ಪ್ರತಿ ರೂಪಾಯಿಗೆ 20 ಪೈಸೆಯನ್ನು ಸಾಲಗಳ ಮೇಲಿನ ಬಡ್ಡಿ ಪಾವತಿ ಮಾಡಲಾಗುತ್ತದೆ. ತೆರಿಗೆಗಳು ಮತ್ತು ಸುಂಕಗಳ ರಾಜ್ಯಗಳ ಪಾಲು 17 ಪೈಸೆಯಾಗಿದೆ.

ರಕ್ಷಣಾ ಇಲಾಖೆಗೆ 8 ಪೈಸೆ ಹಂಚಿಕೆಯಾಗಿದೆ.

ಕೇಂದ್ರ ವಲಯದ ಯೋಜನೆಗಳ ವೆಚ್ಚವು 15 ಪೈಸೆಯಾಗಿದೆ. ಇದೇವೇಳೆ, ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಹಂಚಿಕೆ 9 ಪೈಸೆಯಾಗಿರುತ್ತದೆ.

'ಹಣಕಾಸು ಆಯೋಗ ಮತ್ತು ಇತರ ವರ್ಗಾವಣೆಗಳ' ವೆಚ್ಚವನ್ನು 10 ಪೈಸೆಗೆ ನಿಗದಿಪಡಿಸಲಾಗಿದೆ. ಪ್ರತಿ ರೂಪಾಯಿ ವೆಚ್ಚದಲ್ಲಿ ಸಬ್ಸಿಡಿಗಳು ಮತ್ತು ಪಿಂಚಣಿಗಳು ಕ್ರಮವಾಗಿ 8 ಪೈಸೆ ಮತ್ತು 4 ಪೈಸೆಗಳಿರುತ್ತವೆ.

ಸರ್ಕಾರ ಪ್ರತಿ ರೂಪಾಯಿಯಲ್ಲಿ 9 ಪೈಸೆಯನ್ನು 'ಇತರ ಖರ್ಚು'ಗಳಿಗೆ ಖರ್ಚು ಮಾಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.