ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Union Budget 2023: ವಿಶ್ವಕರ್ಮರಿಗೆ ವಿಶೇಷ ಪ್ಯಾಕೇಜ್– ಕೌಶಲ್ ಸಮ್ಮಾನ್

Last Updated 1 ಫೆಬ್ರುವರಿ 2023, 11:35 IST
ಅಕ್ಷರ ಗಾತ್ರ

ನವದೆಹಲಿ: ಇಂದು ಮಂಡಿಸಲಾದ ಕೇಂದ್ರ ಬಜೆಟ್‌ನಲ್ಲಿ ಭಾರತಾದ್ಯಂತ ನೂರಾರು ವರ್ಷಗಳಿಂದ ಕರಕುಶಲ ಕೆಲಸ, ವಸ್ತುಗಳ ತಯಾರಿಕೆಯಲ್ಲಿ ನಿಷ್ಣಾತರಾಗಿರುವ ವಿಶ್ವಕರ್ಮ ಜನಾಂಗದವರಿಗೆ ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ.

ಪಿಎಂ ವಿಕಾಸ್ ಅಡಿ 'ಪ್ರಧಾನ ಮಂತ್ರಿ ವಿಶ್ವಕರ್ಮ ಕೌಶಲ್ ಸಮ್ಮಾನ್' ಯೋಜನೆಯನ್ನು ಘೋಷಿಸಲಾಗಿದ್ದು, ಈ ಯೋಜನೆಯಡಿ ಫಲಾನುಭವಿಗಳು ಸಹಾಯಧನ, ಸಾಲಸೌಲಭ್ಯ, ತರಬೇತಿ, ಆಧುನಿಕ ಕೌಶಲ್ಯ ಅಳವಡಿಕೆಗೆ ಹಣಕಾಸು ನೆರವು ವಿಶ್ವಕರ್ಮಿಗಳಿಗೆ ಸಿಗಲಿದೆ.

ಆತ್ಮನಿರ್ಭರ್‌ಗೆ ಅನುಗುಣವಾಗಿ ವಿಶ್ವಕರ್ಮರಿಗೆ ಈ ಯೋಜನೆಯನ್ನು ಹೊರತರಲಾಗಿದ್ದು ರಾಷ್ಟ್ರಮಟ್ಟದಲ್ಲಿ ವಿಶ್ವಕರ್ಮರಿಗಾಗಿಯೇ ಘೋಷಿಸಿದ ಮೊದಲ ಪ್ಯಾಕೇಜ್ ಇದಾಗಿದೆ.

ಇದರಿಂದ ವಿಶ್ವಕರ್ಮ ಸಮುದಾಯದ ಕೆಳಹಂತದ ಜನರಿಗೆ ಅನುಕೂಲವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT