ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Union Budget 2021: ಸಿಬ್ಬಂದಿ ಸಚಿವಾಲಯಕ್ಕೆ ₹257 ಕೋಟಿ

Last Updated 1 ಫೆಬ್ರುವರಿ 2021, 12:57 IST
ಅಕ್ಷರ ಗಾತ್ರ

ನವದೆಹಲಿ: ಈ ಬಾರಿಯ ಬಜೆಟ್‌ನಲ್ಲಿ ಸಿಬ್ಬಂದಿ ಸಚಿವಾಲಯಕ್ಕೆ ಒಟ್ಟು ₹257.35 ಕೋಟಿ ಅನುದಾನ ನೀಡಲಾಗಿದೆ.

2021–22ರ ಹಣಕಾಸು ವರ್ಷದಲ್ಲಿ ಸರ್ಕಾರಿ ಅಧಿಕಾರಿಗಳಿಗೆ ದೇಶ ಹಾಗೂ ವಿದೇಶದಲ್ಲಿ ತರಬೇತಿ ನೀಡಲು ಹಾಗೂ ಈಗಿರುವ ತರಬೇತಿ ಕೇಂದ್ರಗಳಿಗೆ ಅಗತ್ಯ ಮೂಲ ಸೌಕರ್ಯ ಹೆಚ್ಚಿಸಲು ಈ ಹಣ ವಿನಿಯೋಗಿಸಬಹುದಾಗಿದೆ.

ಮಸ್ಸೂರಿಯಲ್ಲಿರುವ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಆಡಳಿತ ತರಬೇತಿ ಸಂಸ್ಥೆಯ (ಎಲ್‌ಬಿಎಸ್‌ಎನ್‌ಎಎ) ಉನ್ನತೀಕರಣ, ನವದೆಹಲಿಯ ಸಚಿವಾಲಯ ಸಿಬ್ಬಂದಿ ತರಬೇತಿ ಮತ್ತು ಆಡಳಿತ ನಿರ್ವಹಣಾ ಸಂಸ್ಥೆ (ಐಎಸ್‌ಟಿಎಂ) ಹಾಗೂ ರಾಷ್ಟ್ರೀಯ ನಾಗರಿಕ ಸೇವಾ ಸಾಮರ್ಥ್ಯ ವೃದ್ಧಿ ಸೇರಿದಂತೆ ಇತರೆ ಸಂಸ್ಥೆಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲು ₹178.32 ಕೋಟಿ ಮೀಸಲಿಡಲಾಗಿದೆ.

ಎಲ್‌ಬಿಎಸ್‌ಎನ್‌ಎಎ ಹಾಗೂ ಐಎಸ್‌ಟಿಎಂ ಸಂಸ್ಥೆಗಳಲ್ಲಿ ಐಎಎಸ್‌ ಸೇರಿದಂತೆ ಇತರ ಅತ್ಯುನ್ನತ ವರ್ಗದ ಅಧಿಕಾರಿಗಳು ಮತ್ತು ಸಚಿವಾಲಯದ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತದೆ.

ಎಲ್‌ಬಿಎಸ್‌ಎನ್‌ಎಎ, ಐಎಸ್‌ಟಿಎಂ ಹಾಗೂ ಸಿಬ್ಬಂದಿ ಸಚಿವಾಲಯ ಮತ್ತು ತರಬೇತಿ (ಡಿಒಪಿಟಿ) ಘಟಕಗಳ ನಿರ್ವಹಣಾ ವೆಚ್ಚದ ರೂಪದಲ್ಲಿ ಸಚಿವಾಲಯಕ್ಕೆ ₹79.03 ಕೋಟಿ ಮೀಸಲಿಡಲಾಗಿದೆ.

ಗೃಹ ಕಲ್ಯಾಣ ಕೇಂದ್ರ, ಕೇಂದ್ರೀಯ ನಾಗರಿಕ ಸೇವೆಯ ಸಾಂಸ್ಕೃತಿಕ ಮತ್ತು ಕ್ರೀಡಾ ಮಂಡಳಿ ಹಾಗೂ ರಾಷ್ಟ್ರೀಯ ನೇಮಕಾತಿ ಸಂಸ್ಥೆಗಳಿಗೆ (ಎನ್‌ಆರ್‌ಎ) ನೆರವು ಒದಗಿಸುವ ಸಲುವಾಗಿ ಸಿಬ್ಬಂದಿ ಸಚಿವಾಲಯ ಮತ್ತು ತರಬೇತಿಯ (ಡಿಒಪಿಟಿ) ಸ್ವಾಯತ್ತ ಸಂಸ್ಥೆಗಳ ಅಡಿಯಲ್ಲಿ ₹136.69 ಕೋಟಿ ಮಂಜೂರು ಮಾಡಲಾಗಿದೆ.

ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಗಳಿಗೆ (ಸಿಎಟಿ) 2021–22ನೇ ಹಣಕಾಸು ವರ್ಷದಲ್ಲಿ ₹122.03 ಕೋಟಿ ಹಾಗೂ ವಿವಿಧ ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆಸಿ, ನೇಮಕ ಆದೇಶ ಹೊರಡಿಸುವ ಸಿಬ್ಬಂದಿ ಆಯ್ಕೆ ಸಮಿತಿಗೆ (ಎಸ್‌ಎಸ್‌ಸಿ) ₹382.59 ಕೋಟಿ ಹಂಚಿಕೆ ಮಾಡಲಾಗಿದೆ.

ಇವುಗಳನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT