ಮುಂಬೈ: ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಉಪ ನಾಯಕ ಶುಭಮನ್ ಗಿಲ್ ಅವರು ಇತ್ತೀಚಿನ ಪಂದ್ಯಗಳಲ್ಲಿ ಲಯದಲ್ಲಿ ಇಲ್ಲದಿರುವುದು ಕಳವಳಕ್ಕೆ ಕಾರಣವಾಗಿದೆಯೇನೊ ನಿಜ. ಆದರೆ ಮುಂದಿನ ಫೆಬ್ರುವರಿ– ಮಾರ್ಚ್ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ಗೆ ರಾಷ್ಟ್ರೀಯ ಆಯ್ಕೆಗಾರರು ಶನಿವಾರ ಇಲ್ಲಿ ತಂಡ ಪ್ರಕಟಿಸುವಾಗ ಅಚ್ಚರಿಯ ಬದಲಾವಣೆಗಳನ್ನು ಮಾಡುವ ಸಾಧ್ಯತೆ ಕ್ಷೀಣ.

ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ಫೆಬ್ರುವರಿ 7 ರಂದು ವಿಶ್ವಕಪ್ ಆರಂಭವಾಗಲಿದೆ. ಅದಕ್ಕೆ ಮೊದಲು ತಂಡದಲ್ಲಿ ಯಾವುದೇ ಆಟಗಾರರನ್ನು ಬದಲಾಯಿಸುವ ಮರ್ಜಿ ಬಿಸಿಸಿಐಗೆ ಇದೆ. ಈ ವರ್ಷದ ಆರಂಭದಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಮೊದಲು, ದುಬೈನ ನಿಧಾನಗತಿಯ ಟ್ರ್ಯಾಕ್ ಗಮನದಲ್ಲಿರಿಸಿ, ಯಶಸ್ವಿ ಜೈಸ್ವಾಲ್ ಬದಲು ಕೊನೆಗಳಿಗೆಯಲ್ಲಿ ವರುಣ್ ಚಕ್ರವರ್ತಿ ಅವರಿಗೆ ಅವಕಾಶ ನೀಡಲಾಗಿತ್ತು.

ಬಿಸಿಸಿಐನಿಂದ ಅಧಿಕೃತವಾಗಿ ಯಾರೂ ಹೇಳಿಕೆ ನೀಡದೇ ಇದ್ದರೂ, ಈ ಐಸಿಸಿ ಟೂರ್ನಿಯು ಸೂರ್ಯಕುಮಾರ್ ಯಾದವ್ ಅವರಿಗೆ ಟಿ20 ತಂಡದ ನಾಯಕನಾಗಿ ಕೊನೆಯದಾಗುವ ಸಾಧ್ಯತೆ ನಿಚ್ಚಳವಾಗಿದೆ. ಈಗಾಗಲೇ ಸೂರ್ಯ ಅವರಿಗೆ 35 ವರ್ಷ ಆಗಿದ್ದು, ಒಂದು ವರ್ಷದಿಂದ ಅವರು ಫಾರ್ಮ್ನಲ್ಲಿ ಬೇರೆ ಇಲ್ಲ. 14 ತಿಂಗಳಲ್ಲಿ 24 ಪಂದ್ಯಗಳನ್ನು ಆಡಿರುವ ಸೂರ್ಯ ನಾಯಕನಾಗಿರುವ ಕಾರಣಕ್ಕಾಗಿಯಷ್ಟೇ ತಂಡದಲ್ಲಿ ಉಳಿದುಕೊಂಡಿದ್ದಾರೆ.

ಆಯ್ಕೆ ಸಮಿತಿಯು, ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಗೂ ಭಾರತ ತಂಡವನ್ನು ಆಯ್ಕೆ ಮಾಡಲಿದೆ. ಆದರೆ ವಿಶ್ವ ಕಪ್ ತಂಡವನ್ನೂ ಈ ಸರಣಿಗೂ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚು.

ಗಿಲ್ ಸತತವಾಗಿ ವಿಫಲರಾಗುತ್ತಿದ್ದರೂ, ಸದ್ಯ ಯಾವುದೇ ಆಟಗಾರ ತಂಡದಿಂದ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿಲ್ಲ. ವಿಶ್ವಕಪ್ಗೆ ಜೈಸ್ವಾಲ್ ಅಗತ್ಯ ಬೀಳಲಿದೆಯೇ ಎಂಬುದನ್ನು ಪರೀಕ್ಷಿಸಲೋಸುಗ ಅವರನ್ನು ನ್ಯೂಜಿಲೆಂಡ್ ಸರಣಿಗೆ ಪರಿಗಣಿಸುತ್ತಾರೆಯೇ ಎಂಬುದನ್ನು ಕಾದುನೋಡಬೇಕಾಗಿದೆ.

ಗಿಲ್ ಅವರ ವೈಫಲ್ಯ ಸೂರ್ಯಕುಮಾರ್ ಅವರಿಗೆ ಒಂದು ರೀತಿ ನೆರವಾಗಿದೆ. ಅವರನ್ನು ಎಲ್ಲ ಮಾದರಿಗೆ ನಾಯಕನಾಗಬಲ್ಲ ಆಟಗಾರ ಎಂದು ಬಿಂಬಿಸಲಾಗಿದೆ. ಈಗಾಗಲೇ ಟೆಸ್ಟ್ ಮತ್ತು ಏಕದಿನ ಮಾದರಿಗೆ ಗಿಲ್ ನಾಯಕರಾಗಿದ್ದಾರೆ.

ಲಯದಲ್ಲಿರುವ ಜೈಸ್ವಾಲ್ ಹೆಸರು ಸಮಿತಿ ಸಭೆಯಲ್ಲಿ ಮುನ್ನೆಲೆಗೆ ಬರುವ ನಿರೀಕ್ಷೆ ತಳ್ಳಿಹಾಕುವಂತಿಲ್ಲ. ಅವರು ಗಿಲ್ ಮತ್ತು ಸ್ಯಾಮ್ಸನ್ ಅವರಿಗೆ ಹೋಲಿಸಿದರೆ, ಚುಟುಕು ಮಾದರಿಗೆ ಒಗ್ಗಬಲ್ಲ ಬಹೂಪಯೋಗಿ ಆಟಗಾರ. ಆದರೆ ಸ್ಯಾಮ್ಸನ್ ಎರಡನೇ ಕೀಪರ್ ಆಗಿರುವ ಕಾರಣ (ಮೊದಲ ಆಯ್ಕೆಯ ಕೀಪರ್ ಜಿತೇಶ್ ಶರ್ಮಾ) ಮತ್ತು ಗಿಲ್ ಅವರನ್ನು ಉಪನಾಯಕರಾಗಿ ನೇಮಕ ಮಾಡಿರುವ ಕಾರಣ ಜೈಸ್ವಾಲ್ ಅವರಿಗೆ 15ರಲ್ಲಿ ಸ್ಥಾನ ಸಿಗುವ ಸಾಧ್ಯತೆ ಕಡಿಮೆ.

ಈಗ ಇರುವ ತಂಡದ ಸಣ್ಣ ದೌರ್ಬಲ್ಯದ ಇನ್ನೊಂದು ಕೊಂಡಿ ಎಂದರೆ ವಾಷಿಂಗ್ಟನ್ ಸುಂದರ್. ಆಲ್ರೌಂಡರ್ ಆಗಿದ್ದರೂ ಅವರು ಆಡಿರುವ 57 ಟಿ20 ಪಂದ್ಯಗಳಲ್ಲಿ ಒಂದರಲ್ಲೂ ಈ ಮಾದರಿಗೆ ಅಗತ್ಯವಿರುವ ಸ್ಫೋಟಕ ಆಟವಾಡಿಲ್ಲ.

ಸಂಭವನೀಯ ತಂಡ:

ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಜಸ್ಪ್ರೀತ್ ಬೂಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್.

ಸಂಭನವೀಯ ಸ್ಟ್ಯಾಂಡ್ಬೈಸ್:

ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಯಾನ್ ಪರಾಗ್, ಶಾಬಾಜ್ ಅಹ್ಮದ್/ ನಿತೀಶ್ ಕುಮಾರ್ ರೆಡ್ಡಿ, ಪ್ರಸಿದ್ಧ ಕೃಷ್ಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.