ನವದೆಹಲಿ: ಹೈನುಗಾರಿಕೆ, ಮೀನುಗಾರಿಕೆ, ಹಣ್ಣು, ತರಕಾರಿ ಬೆಳೆಗಳನ್ನು ಒಳಗೊಂಡ ಗರಿಷ್ಠ ಮೌಲ್ಯದ ಕೃಷಿ ವಲಯಕ್ಕೆ ಹೆಚ್ಚಿನ ಕೊಡುಗೆ ನೀಡಲಾಗಿದೆ. ಪಶುವೈದ್ಯಕೀಯ ವೃತ್ತಿಪರರು, ಆಸ್ಪತ್ರೆಗಳ ಲಭ್ಯತೆಯನ್ನು ಹೆಚ್ಚಿಸಲು ವಿಶೇಷ ಯೋಜನೆಯನ್ನು ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದೆ.

ಕೃಷಿ ಆದಾಯದಲ್ಲಿ ಪಶು ಸಂಗೋಪನಾ ವಲಯದಿಂದ ಶೇ 16ರಷ್ಟು ದೊರೆಯುತ್ತದೆ. ಹೀಗಾಗಿ, ಈ ವಲಯಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಮತ್ತೆ 20 ಸಾವಿರಕ್ಕೂ ಹೆಚ್ಚು ಪಶುವೈದ್ಯಕೀಯ ವೃತ್ತಿಪರರು ಲಭ್ಯವಾಗುವಂತೆ ಕ್ರಮಕೈಗೊಳ್ಳುವ ಯೋಜನೆ ರೂಪಿಸಲಾಗಿದೆ.

ಈ ಯೋಜನೆ ಅಡಿ ಪಶುವೈದ್ಯಕೀಯ ಮತ್ತು ಪ್ಯಾರಾ ಪಶುವೈದ್ಯಕೀಯ ಕಾಲೇಜುಗಳು, ಆಸ್ಪತ್ರೆಗಳು, ಡಯಗ್ನಾಸ್ಟಿಕ್ ಪ್ರಯೋಗಾಲಯಗಳನ್ನು ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ.

ಮೀನುಗಾರಿಕೆ: ವಿಶೇಷ ಆರ್ಥಿಕ ವಲಯ (ಎಸ್ಇಜೆಡ್) ಮತ್ತು ಆಳ ಸಮುದ್ರಗಳಲ್ಲಿ ಹಿಡಿಯುವ ಮೀನುಗಳ ಮೇಲೆ ಯಾವುದೇ ಸುಂಕವನ್ನು ವಿಧಿಸಲಾಗುವುದಿಲ್ಲ. ವಿದೇಶಿ ಬಂದರುಗಳಲ್ಲಿ ಈ ಮೀನುಗಳನ್ನು ಇಳಿಸುವುದನ್ನು ಸರಕುಗಳ ರಫ್ತು ಎಂದು ಪರಿಗಣಿಸಲಾಗುತ್ತದೆ. ಇದರೊಂದಿಗೆ, ವಿಶೇಷವಾಗಿ ಕರಾವಳಿಯ ರೈತರನ್ನು ಗಮನದಲ್ಲಿಟ್ಟುಕೊಂಡು ಸಬ್ಸಿಡಿ ಆಧಾರಿತ ಸಾಲ ಯೋಜನೆಗಳನ್ನೂ ಪ್ರಕಟಿಸಲಾಗಿದೆ. 500 ಕೆರೆಗಳು ಮತ್ತು ಅಮೃತ ಸರೋವರಗಳ ಸಮಗ್ರ ಅಭಿವೃದ್ಧಿಗೆ ಗಮನ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.