ಕಳೆದ ಐದು ವರ್ಷಗಳ ಅವಧಿಯಲ್ಲಿ ಎಸ್ಐಪಿ (ವ್ಯವಸ್ಥಿತ ಹೂಡಿಕೆ ಯೋಜನೆ) ಮಾದರಿಯಲ್ಲಿ ಪ್ರತಿ ತಿಂಗಳು ಟಿವಿಎಸ್ ಮೋಟರ್ ಕಂಪನಿಯ ಒಂದೊಂದು ಷೇರು ಖರೀದಿಸಿದ್ದರೆ ನಿಮಗೆ ವಾರ್ಷಿಕ ಸರಾಸರಿ ಶೇ 42ರಷ್ಟು ಲಾಭ ಸಿಗುತ್ತಿತ್ತು. ಇದೇ ಅವಧಿಯಲ್ಲಿ ನೀವು ನಿಪ್ಪಾನ್ ಇಂಡಿಯಾ ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡಿದ್ದರೆ ವಾರ್ಷಿಕ ಸರಾಸರಿ ಶೇ 23.55ರಷ್ಟು ಗಳಿಕೆ ಸಿಗುತ್ತಿತ್ತು. ಈ ಎರಡು ಗಳಿಕೆ ನೋಡಿದಾಗ ಯಾರಿಗೇ ಆದರೂ ಮ್ಯೂಚುವಲ್ ಫಂಡ್ (ಎಂ.ಎಫ್) ಎಸ್ಐಪಿಗಿಂತ, ಷೇರುಗಳ ಮೇಲೆ ಎಸ್ಐಪಿ ಮಾಡುವುದೇ ಲಾಭ ಎನಿಸುತ್ತದೆ. ವಾಸ್ತವದಲ್ಲಿ ಈ ಲೆಕ್ಕಾಚಾರ ಸರಿಯೇ ಅನ್ನೋದು ಪ್ರಶ್ನೆ.

ಇದಕ್ಕೆ ಉತ್ತರ ಕಂಡುಕೊಳ್ಳುವ ಮುನ್ನ ಷೇರು ಎಸ್ಐಪಿ ಎಂದರೇನು ಎಂಬ ಬಗ್ಗೆ ಮೊದಲು ತಿಳಿಯೋಣ.

ಷೇರು ಎಸ್ಐಪಿ ಎಂದರೇನು?: ಒಂದು ಷೇರಿನ ಮೇಲೆ ಅಥವಾ ಹಲವು ಷೇರುಗಳ ಮೇಲೆ ನಿಗದಿತ ಸಮಯಕ್ಕೆ, ನಿಗದಿತ ಮೊತ್ತವನ್ನು ನಿರ್ದಿಷ್ಟ ಕಾಲಾವಧಿಗೆ ಹೂಡಿಕೆ ಮಾಡುತ್ತಾ ಹೋಗುವುದೇ ಸ್ಟಾಕ್ ಎಸ್ಐಪಿ ಅಥವಾ ಷೇರು ಎಸ್ಐಪಿ.

ಷೇರುಗಳ ಮೇಲೆ ಪ್ರತಿ ವಾರ, ಹದಿನೈದು ದಿನ, ತಿಂಗಳಿಗೊಮ್ಮೆ, ಮೂರು ತಿಂಗಳಿಗೊಮ್ಮೆ ಹೀಗೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಎಸ್ಐಪಿ ಹೂಡಿಕೆ ಮಾಡಬಹುದು. ಸ್ಟಾಕ್ ಎಸ್ಐಪಿಯಲ್ಲಿ ನಿಮ್ಮ ಆದಾಯಕ್ಕೆ ತಕ್ಕಂತೆ ₹5 ಸಾವಿರ, ₹10 ಸಾವಿರ, ₹15 ಸಾವಿರ, ₹20 ಸಾವಿರ ಅಥವಾ ಅದಕ್ಕಿಂತಲೂ ಹೆಚ್ಚಿನ ಮೊತ್ತ ಹೂಡಲು ಅವಕಾಶ ಇರುತ್ತದೆ.

ಮ್ಯೂಚುವಲ್ ಫಂಡ್ಗಳಲ್ಲಿ ಹೇಗೆ ಎಸ್ಐಪಿ ಮಾಡುತ್ತೇವೆಯೋ ಅದೇ ಮಾದರಿಯಲ್ಲಿ ಸ್ಟಾಕ್ ಎಸ್ಐಪಿ ಕೂಡ ಕೆಲಸ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಸ್ಟಾಕ್ ಎಸ್ಐಪಿ ಹೆಚ್ಚು ಜನಪ್ರಿಯವಾಗುತ್ತಿದೆ. ಆದರೆ, ಸ್ಟಾಕ್ /ಷೇರು ಎಸ್ಐಪಿ ಸರಿಹೊಂದುವುದೋ ಅಥವಾ ಮ್ಯೂಚುವಲ್ ಫಂಡ್ ಎಸ್ಐಪಿ ಸರಿ ಹೊಂದುವುದೋ ಎನ್ನುವ ನಿರ್ಧಾರ ಮಾಡುವ ಮುನ್ನ ಹೂಡಿಕೆದಾರರು ಹಲವು ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ನಿರ್ವಹಣೆ ವಿಧಾನ ಮತ್ತು ವೆಚ್ಚ: ಮ್ಯೂಚುವಲ್ ಫಂಡ್ಗಳಲ್ಲಿ ನಾವು ಹೂಡಿಕೆ ಮಾಡುವ ಎಸ್ಐಪಿ ಹಣವನ್ನು ವೃತ್ತಿಪರ ಫಂಡ್ ಮ್ಯಾನೇಜರ್ಗಳು ನಿರ್ವಹಣೆ ಮಾಡುತ್ತಾರೆ. ಹೂಡಿಕೆದಾರರ ಮೊತ್ತವನ್ನು ಎಲ್ಲಿ ತೊಡಗಿಸಬೇಕು. ಯಾವ ಷೇರಿನ ಮೇಲೆ ಎಷ್ಟು ಹಣ ಹಾಕಬೇಕು. ಯಾವ ವಲಯದ ಷೇರುಗಳ ಮೇಲೆ ಹೂಡಿಕೆ ಮಾಡಬೇಕು ಎನ್ನುವ ತೀರ್ಮಾನವನ್ನು ಫಂಡ್ ಮ್ಯಾನೇಜರ್ಗಳು ಮಾಡುತ್ತಾರೆ.

ಅದಕ್ಕಾಗಿ ಅವರು ಶೇ 0.5ರಿಂದ ಶೇ 2ರ ವರೆಗೂ ನಿರ್ವಹಣಾ ಶುಲ್ಕ
(ಎಕ್ಸ್ಪೆನ್ಸ್ ರೇಷಿಯೊ/ ಕಮಿಷನ್) ತೆಗೆದುಕೊಳ್ಳುತ್ತಾರೆ. ಆದರೆ, ಸ್ಟಾಕ್ /ಷೇರು ಎಸ್ಐಪಿಯಲ್ಲಿ ಹೂಡಿಕೆ ತೀರ್ಮಾನಗಳನ್ನು ನೀವೇ ತೆಗೆದುಕೊಳ್ಳಬೇಕಿದೆ. ಇದರಿಂದ ನಿರ್ವಹಣಾ ಶುಲ್ಕ ಇರುವುದಿಲ್ಲ. ಡಿಮ್ಯಾಟ್ ಖಾತೆ ವೆಚ್ಚ, ಷೇರು ವಿನಿಮಯ ವೆಚ್ಚ ಮುಂತಾದ ವೆಚ್ಚಗಳು ಬರುತ್ತವೆ. ಆದರೆ, ಈ ವೆಚ್ಚಗಳು ಮ್ಯೂಚುವಲ್ ಫಂಡ್ನ ಎಕ್ಸ್ಪೆನ್ಸ್ ರೇಷಿಯೊದಷ್ಟು ಹೆಚ್ಚಿಗೆ ಇರುವುದಿಲ್ಲ.

ಹೂಡಿಕೆ ವೈವಿಧ್ಯ: ಮ್ಯೂಚುವಲ್ ಫಂಡ್ ಎಸ್ಐಪಿಯಲ್ಲಿ ಹೂಡಿಕೆ ಮಾಡಿದಾಗ ನಿಮ್ಮ ಮೊತ್ತವು ಹತ್ತಾರು ಕಂಪನಿಗಳ ಮೇಲೆ ಹೋಗುತ್ತದೆ. ಬಹುಪಾಲು ಮ್ಯೂಚುವಲ್ ಫಂಡ್ಗಳು 20, 30, 40, 60 ಹೀಗೆ ಹಲವು ಕಂಪನಿಗಳ ಮೇಲೆ ನಮ್ಮ ಮೊತ್ತವನ್ನು ತೊಡಗಿಸುತ್ತವೆ. ಹಾಗಾಗಿ, ಇಲ್ಲಿ ಹೂಡಿಕೆ ಮಿಶ್ರಣ ಕಾಯ್ದುಕೊಳ್ಳುವುದು ಸುಲಭ.

ಆದರೆ, ಸ್ಟಾಕ್ ಎಸ್ಐಪಿಯಲ್ಲಿ ಹೂಡಿಕೆ ವೈವಿಧ್ಯ ಸಾಧಿಸುವುದು ಕಷ್ಟವಾಗುತ್ತದೆ. ಐದಾರು ಕಂಪನಿಗಳ ಮೇಲೆ ಸ್ಟಾಕ್ ಎಸ್ಐಪಿ ಮಾಡುವ ಮೂಲಕ ಹೂಡಿಕೆಯಲ್ಲಿ ಹದವಾದ ಮಿಶ್ರಣ ಸಾಧಿಸುವುದು ಕಷ್ಟವಾಗುತ್ತದೆ. ಹೂಡಿಕೆದಾರನಿಗೆ ಸಹಜವಾಗಿ ಒಬ್ಬ ಫಂಡ್ ಮ್ಯಾನೇಜರ್ಗೆ ಇರುವಷ್ಟು ಹೂಡಿಕೆ ಜ್ಞಾನ ಇಲ್ಲದಿರುವ ಕಾರಣ ಹೂಡಿಕೆ ವೈವಿಧ್ಯ ಮಂಕಾಗುತ್ತದೆ.

ಪೋರ್ಟ್ ಫೋಲಿಯೊ ನಿರ್ವಹಣೆ: ಮ್ಯೂಚುವಲ್ ಫಂಡ್ಗಳಲ್ಲಿ ಲಾಭ ಗಳಿಸುವ ಉದ್ದೇಶದಿಂದ ಫಂಡ್ ಮ್ಯಾನೇಜರ್ಗಳು ತಮಗೆ ಸರಿ ಎನಿಸಿದಾಗ ಷೇರುಗಳ ಮಾರಾಟ ಮತ್ತು ಖರೀದಿ ಮಾಡುತ್ತಾರೆ.

ಮ್ಯೂಚುವಲ್ ಫಂಡ್ ಹೂಡಿಕೆ ಮಾಡಿದಾಗ ಅದರ ನಿರ್ವಹಣೆಗೆ ನೀವು ಪ್ರತ್ಯೇಕ ಸಮಯ ಮೀಸಲಿಡುವ ಅಗತ್ಯ ಇರುವುದಿಲ್ಲ. ಆದರೆ, ಸ್ಟಾಕ್ /ಷೇರು ಎಸ್ಐಪಿಯಲ್ಲಿ ಸನ್ನಿವೇಶಕ್ಕೆ ಅನುಗುಣವಾಗಿ ಷೇರುಗಳ ಮಾರಾಟ ಮತ್ತು ಖರೀದಿಯ ತೀರ್ಮಾನವನ್ನು ನೀವೇ ಕೈಗೊಳ್ಳಬೇಕಾಗುತ್ತದೆ. ಷೇರು ಹೂಡಿಕೆಯಲ್ಲಿ ಪರಿಣತಿ ಇಲ್ಲದಿದ್ದಾಗ ಇದು ಕಷ್ಟವಾಗಬಹುದು. ನೀವು ಪೂರ್ಣಾವಧಿ ಉದ್ಯೋಗದಲ್ಲಿದ್ದರೆ ಪೋರ್ಟ್ ಫೋಲಿಯೊ ನಿರ್ವಹಣೆಗೆ ಸಮಯ ಮೀಸಲಿಡುವುದು ಮತ್ತೊಂದು ಸವಾಲು.

ತೆರಿಗೆ ಲೆಕ್ಕಾಚಾರ: ಮ್ಯೂಚುವಲ್ ಫಂಡ್ನಲ್ಲಿ ನೀವು ಎಸ್ಐಪಿ ಮೊತ್ತ ತೊಡಗಿಸಿದ ನಂತರ ಷೇರುಗಳ ಖರೀದಿ ಮತ್ತು ಮಾರಾಟ ಪ್ರಕ್ರಿಯೆಯು ಮ್ಯೂಚುವಲ್ ಫಂಡ್ ಕಂಪನಿಗಳ ಕಡೆಯಿಂದ (ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಗಳು) ನಡೆಯುತ್ತದೆ. ನಿಮಗೆ ಯಾವುದೇ ತೆರಿಗೆ ಹೊರೆ ಬೀಳುವುದಿಲ್ಲ. ಆದರೆ, ಎಸ್ಐಪಿ ಮೂಲಕ ಖರೀದಿಸಿರುವ ಷೇರುಗಳನ್ನು ನೀವೇ ಮಾರಾಟ ಮಾಡಿದಾಗ ಬಂಡವಾಳ ಗಳಿಕೆ ತೆರಿಗೆ (ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್) ಕಟ್ಟಬೇಕಾಗುತ್ತದೆ.

ರಿಸ್ಕ್ ಪ್ರಮಾಣ: ಮ್ಯೂಚುವಲ್ ಫಂಡ್ ಎಸ್ಐಪಿಯಲ್ಲಿ ಹೂಡಿಕೆ ವೈವಿಧ್ಯ ಸಾಧ್ಯತೆಯಿದೆ. ಇದರಿಂದ ಹೂಡಿಕೆ ರಿಸ್ಕ್ ಕಡಿಮೆ ಇರುತ್ತದೆ. ಇಲ್ಲಿ ವೃತ್ತಿಪರ ಫಂಡ್ ಮ್ಯಾನೇಜರ್ನ ನಿರ್ವಹಣೆಯ ಅನುಕೂಲವೂ ಸಿಗುತ್ತದೆ. ಆದರೆ, ಷೇರು ಎಸ್ಐಪಿ ಹೂಡಿಕೆ ಮಾಡುವಾಗ ಹೂಡಿಕೆ ವೈವಿಧ್ಯ ಕಷ್ಟವಾಗುತ್ತದೆ. ಮಾರುಕಟ್ಟೆ ಅನಿಶ್ಚಿತತೆಯ ಸಂದರ್ಭದಲ್ಲಿ ಪೋರ್ಟ್ ಫೋಲಿಯೊದಲ್ಲಾಗುವ ಏರಿಳಿತಕ್ಕೆ ಸಾಮಾನ್ಯ ಹೂಡಿಕೆದಾರ ತತ್ತರಿಸುವ ಸಾಧ್ಯತೆಯೇ ಹೆಚ್ಚಿರುತ್ತದೆ.

ಕಿವಿಮಾತು: ಸ್ಟಾಕ್/ಷೇರು ಎಸ್ಐಪಿ ಮತ್ತು ಮ್ಯೂಚುವಲ್ ಫಂಡ್ ಎಸ್ಐಪಿಯಲ್ಲಿ ಅದರದ್ದೇ ಆದ ಅನುಕೂಲ–ಅನನುಕೂಲಗಳಿವೆ. ಸ್ಟಾಕ್/ಷೇರು ಎಸ್ಐಪಿ ಮಾಡುವಾಗ ಷೇರುಗಳ ಆಯ್ಕೆಯಲ್ಲಿ ಸಾಕಷ್ಟು ಎಚ್ಚರವಹಿಸಬೇಕಾಗುತ್ತದೆ. ಷೇರು ಆಯ್ಕೆಯಲ್ಲಿ ಎಡವಿದರೆ ಹೆಚ್ಚು ಲಾಭ ಗಳಿಸಲು ಸಾಧ್ಯವಿಲ್ಲ.

ಆದರೆ, ಉತ್ತಮ ಷೇರಿನ ಮೇಲೆ ಅಧ್ಯಯನ ಮಾಡಿ ಹೂಡಿಕೆ ಮಾಡಿದರೆ ಮ್ಯೂಚುವಲ್ ಫಂಡ್ ಎಸ್ಐಪಿಗಳಿಗಿಂತ ಹೆಚ್ಚು ಗಳಿಸುವ ಅವಕಾಶ ಸ್ಟಾಕ್/ಷೇರು ಎಸ್ಐಪಿಯಲ್ಲಿದೆ. ಮ್ಯೂಚುವಲ್ ಫಂಡ್ ಎಸ್ಐಪಿಗಳಲ್ಲಿ ಸ್ಟಾಕ್ ಎಸ್ಐಪಿಗಳಷ್ಟು ಗಳಿಕೆಯಾಗುವ ಸಾಧ್ಯತೆ ಕಡಿಮೆ. ಆದರೆ, ಇಲ್ಲಿ ಹೂಡಿಕೆದಾರನಿಗೆ ಹೆಚ್ಚು ತಿಳಿವಳಿಕೆ, ಅಧ್ಯಯನ, ಕಲಿಕೆಯ ಅಗತ್ಯವಿಲ್ಲ. ಒಳ್ಳೆಯ ಫಂಡ್ ಆಯ್ಕೆ ಮಾಡಿಕೊಂಡು ಹಣ ಹಾಕುತ್ತಾ ಸಾಗಿದರೆ ದೀರ್ಘಾವಧಿಯಲ್ಲಿ ಒಂದು ಉತ್ತಮ ಗಳಿಕೆ ನೋಡಬಹುದು.

ಯಾರಿಗೆ ಸಮಯವಿಲ್ಲ, ಷೇರು ಮಾರುಕಟ್ಟೆ ಬಗ್ಗೆ ಹೆಚ್ಚು ತಿಳಿದಿಲ್ಲ ಅವರಿಗೆ ಮ್ಯೂಚುವಲ್ ಫಂಡ್ ಎಸ್ಐಪಿ ಸರಿ ಹೊಂದುತ್ತದೆ.

ಮೂರನೇ ವಾರವೂ ಕುಸಿದ ಷೇರುಪೇಟೆ

ಷೇರುಪೇಟೆ ಸೂಚ್ಯಂಕಗಳು ಸತತ ಮೂರನೇ ವಾರವೂ ಕುಸಿತ ಕಂಡಿವೆ. ಜನವರಿ 24ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಇಳಿಕೆಯಾಗಿವೆ. 76190 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 0.56ರಷ್ಟು ಕುಸಿದಿದೆ. 23092 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 0.48ರಷ್ಟು ತಗ್ಗಿದೆ. ಇನ್ನು ನಿಫ್ಟಿ ಮಿಡ್ ಕ್ಯಾಪ್ ಸೂಚ್ಯಂಕ ಶೇ 2.46ರಷ್ಟು ಕುಸಿದಿದ್ದರೆ ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ 4.05ರಷ್ಟು ಇಳಿಕೆಯಾಗಿದೆ. ಕಂಪನಿಗಳ ತ್ರೈಮಾಸಿಕ ಫಲಿತಾಂಶಗಳು ನಿರೀಕ್ಷಿತಮಟ್ಟದಲ್ಲಿ ಇರದಿರುವುದು ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಷೇರುಗಳ ಮಾರಾಟ ಸೇರಿ ಹಲವು ಅಂಶಗಳು ಮಾರುಕಟ್ಟೆಮೇಲೆ ನೇರ ಪರಿಣಾಮ ಬೀರಿವೆ. ವಲಯವಾರು ಪ್ರಗತಿಯಲ್ಲಿ ನಿಫ್ಟಿ ರಿಯಲ್ ಎಸ್ಟೇಟ್ ಶೇ 9.12 ಮಾಧ್ಯಮ ಶೇ 3.47 ಆಟೊ ಶೇ 2.72 ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 2.24 ಲೋಹ ಶೇ 0.97 ಫಾರ್ಮಾ ಶೇ 0.86 ಮತ್ತು ನಿಫ್ಟಿ ಬ್ಯಾಂಕ್ ಶೇ 0.36ರಷ್ಟು ಇಳಿಕೆಯಾಗಿವೆ. ನಿಫ್ಟಿ ಮಾಹಿತಿ ತಂತ್ರಜ್ಞಾನ ಸೂಚ್ಯಂಕ ಮತ್ತು ಎಫ್ಎಂಸಿಜಿ ಕ್ರಮವಾಗಿ ಶೇ 3.55 ಮತ್ತು ಶೇ 0.48ರಷ್ಟು ಗಳಿಸಿಕೊಂಡಿವೆ. ಇಳಿಕೆ–ಏರಿಕೆ: ನಿಫ್ಟಿಯಲ್ಲಿ ಟ್ರೆಂಟ್ ಶೇ 11.51 ಎಸ್ಬಿಐ ಲೈಫ್ ಇನ್ಶೂರೆನ್ಸ್ ಶೇ 6.93 ಡಾ.ರೆಡ್ಡೀಸ್ ಲ್ಯಾಬ್ಸ್ ಶೇ 6.29ಅದಾನಿ ಪೋರ್ಟ್ಸ್ ಶೇ 6.21 ಟಾಟಾ ಮೋಟರ್ಸ್ ಶೇ 5.85 ರಿಲಯನ್ಸ್ ಇಂಡಸ್ಟ್ರೀಸ್ ಶೇ 4.33 ಎಕ್ಸಿಸ್ ಬ್ಯಾಂಕ್ ಶೇ 4.31 ಭಾರತ್ ಎಲೆಕ್ಟ್ರಾನಿಕ್ಸ್ ಶೇ 4.15 ಮಹೀಂದ್ರ ಆ್ಯಂಡ್ ಮಹೀಂದ್ರ ಶೇ 4.02 ಬಿಪಿಸಿಎಲ್ ಶೇ 3.75 ಮತ್ತು ಅದಾನಿಎಂಟರ್ ಪ್ರೈಸಸ್ ಶೇ 3.47ರಷ್ಟು ಕುಸಿದಿವೆ. ವಿಪ್ರೊ ಶೇ 13.59 ಕೋಟಕ್ ಮಹೀಂದ್ರ ಬ್ಯಾಂಕ್ ಶೇ 7.32 ಅಲ್ಟ್ರಾಟೆಕ್ ಸಿಮೆಂಟ್ ಶೇ 6.6 ಗ್ರಾಸಿಂ ಇಂಡಸ್ಟ್ರೀಸ್ ಶೇ 5.06 ಬ್ರಿಟಾನಿಯಾ ಇಂಡಸ್ಟ್ರೀಸ್ ಶೇ 4.99 ಟಾಟಾ ಕನ್ಸ್ಯೂಮರ್ ಶೇ 4.25 ಟೆಕ್ ಮಹೀಂದ್ರ ಶೇ 4.03 ಐಷರ್ ಮೋಟರ್ಸ್ ಶೇ 3.87 ಬಜಾಜ್ ಫೈನಾನ್ಸ್ ಶೇ 3.45 ಇನ್ಫೊಸಿಸ್ ಶೇ 3.26 ಮತ್ತು ಬಜಾಜ್ ಫಿನ್ಸರ್ವ್ ಶೇ 2.73ರಷ್ಟು ಗಳಿಸಿಕೊಂಡಿವೆ. ಮುನ್ನೋಟ: ಈ ವಾರ ಕೋಲ್ ಇಂಡಿಯಾ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಟಾಟಾ ಸ್ಟೀಲ್ ಕೆನರಾ ಬ್ಯಾಂಕ್ ಬಜಾಜ್ಹೌಸಿಂಗ್ ಫೈನಾನ್ಸ್ ಯೂನಿಯನ್ ಬ್ಯಾಂಕ್ ಫೆಡರಲ್ ಬ್ಯಾಂಕ್ ಬಜಾಜ್ ಆಟೊ ಹಿಂದುಸ್ತಾನ್ ಜಿಂಕ್ ಟಿವಿಎಸ್ ಮೋಟರ್ಕಂಪನಿ ಸಿಪ್ಲಾ ಹುಂಡೈ ಮೋಟರ್ಸ್ ಇಂಡಿಯಾ ಎಸ್ಬಿಐ ಕಾರ್ಡ್ಸ್ ಆ್ಯಂಡ್ ಪೇಮೆಂಟ್ಸ್ ವಿಗಾರ್ಡ್ ಬಜಾಜ್ ಫೈನಾನ್ಸ್ ಟಾಟಾ ಮೋಟರ್ಸ್ ಮಾರುತಿ ಸುಜುಕಿ ಇಂಡಿಯಾ ಎಲ್ ಆ್ಯಂಡ್ ಟಿ ಬ್ಯಾಂಕ್ ಆಫ್ ಬರೋಡಾ ನೆಸ್ಲೆ ಇಂಡಿಯಾ ಒಎನ್ಜಿಸಿ ಕರ್ಣಾಟಕ ಬ್ಯಾಂಕ್ ಕಲ್ಯಾಣ ಜ್ಯುವೆಲರ್ಸ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಕೇಂದ್ರ ಸರ್ಕಾರದ ಬಜೆಟ್ ನಿರ್ಣಯಗಳು ಕಂಪನಿಗಳ ತ್ರೈಮಾಸಿಕ ಫಲಿತಾಂಶಗಳು ಮತ್ತು ಫೆಬ್ರುವರಿಯಲ್ಲಿ ನಡೆಯಲಿರುವ ಆರ್ಬಿಐ ಹಣಕಾಸು ನೀತಿ ಸಮಿತಿ ಸಭೆಯು ರೆಪೊದರದ ಬಗ್ಗೆ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬ ಅಂಶಗಳು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಲಿವೆ.

(ಲೇಖಕಿ: ಚಾರ್ಟರ್ಡ್ ಅಕೌಂಟೆಂಟ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.