ಹೂಡಿಕೆ ಪೋರ್ಟ್ ಫೋಲಿಯೊ ಅಂತ ಬಂದಾಗ ಹೆಚ್ಚು ರಿಸ್ಕ್ ಇರುವ ಹೂಡಿಕೆಗಳು ಮತ್ತು ಸುರಕ್ಷಿತ ಹೂಡಿಕೆಗಳ ಮಿಶ್ರಣ ಇರಬೇಕು. ರಿಸ್ಕ್ ರಹಿತ ಹೂಡಿಕೆಗಳು ಅಂತ ನೋಡಿದಾಗ ಪಿಪಿಎಫ್ ಮತ್ತು ನಿಶ್ಚಿತ ಠೇವಣಿ (ಫಿಕ್ಸೆಡ್ ಡೆಪಾಸಿಟ್) ವಿಚಾರ ಬಂದೇ ಬರುತ್ತದೆ. ಈ ಎರಡೂ ಹೂಡಿಕೆಗಳು ಹಣ ತೊಡಗಿಸಿದವರಿಗೆ ನಿಶ್ಚಿತ ಆದಾಯವನ್ನು ತಂದುಕೊಡುತ್ತವೆ.

ಆದರೆ, ಅನೇಕರಿಗೆ ಹೂಡಿಕೆ ಮಾಡಲು ನಿಶ್ಚಿತ ಠೇವಣಿ ಉತ್ತಮವೋ ಅಥವಾ ಪಿಪಿಎಫ್ ಪರಿಗಣಿಸುವುದು ಒಳಿತೋ ಎಂಬ ಪ್ರಶ್ನೆ ಎದುರಾಗುತ್ತದೆ. ಬನ್ನಿ, ಇವೆರಡರ ಪೈಕಿ ನಿಮಗೆ ಒಪ್ಪುವ ಆಯ್ಕೆ ಯಾವುದು ಎಂಬುದನ್ನು ವಿವರವಾಗಿ ನೋಡೋಣ.

ಬಡ್ಡಿ ಲಾಭ: ಪಿಪಿಎಫ್ ಹೂಡಿಕೆಗೆ ಸದ್ಯದ ಬಡ್ಡಿದರ ಶೇ 7.1ರಷ್ಟು ಇದೆ. ಆದರೆ, ಬ್ಯಾಂಕ್ ನಿಶ್ಚಿತ ಠೇವಣಿಯ ಬಡ್ಡಿದರ ಶೇ 6.7ರಿಂದ ಶೇ 8ರ ವರೆಗೂ ಇದೆ. ಬಡ್ಡಿ ಲಾಭ ಅಂತ ಬಂದಾಗ ಹೆಚ್ಚು ಕಡಿಮೆ ಪಿಪಿಎಫ್ ನಷ್ಟೇ ಅಥವಾ ಅದಕ್ಕಿಂತ ಕೊಂಚ ಹೆಚ್ಚಿನ ಬಡ್ಡಿ ಗಳಿಕೆಯನ್ನು ನಿಶ್ಚಿತ ಠೇವಣಿಗಳು ನೀಡುತ್ತವೆ.

ತೆರಿಗೆ ಅನುಕೂಲ: ಹಳೆಯ ತೆರಿಗೆ ಪದ್ಧತಿಯಡಿ ಪಿಪಿಎಫ್ನಲ್ಲಿನ ಹೂಡಿಕೆಗೆ ಆದಾಯ ತೆರಿಗೆ ಸೆಕ್ಷನ್ 80ಸಿ ಅಡಿ ತೆರಿಗೆ ವಿನಾಯಿತಿ ಸಿಗುತ್ತದೆ. ಅಲ್ಲದೆ, ಪಿಪಿಎಫ್ನ ಹೂಡಿಕೆ ಮೆಚ್ಯೂರಿಟಿಗೆ ಬಂದಾಗ ಬಡ್ಡಿ ಗಳಿಕೆ ಮೇಲೆ ಯಾವುದೇ ತೆರಿಗೆ ಕಟ್ಟಬೇಕಿಲ್ಲ. ಈ ನಿಯಮ ಹಳೆಯ ಮತ್ತು ಹೊಸ ತೆರಿಗೆ ಪದ್ಧತಿಯಲ್ಲಿ ಇರುವವರಿಗೆ ಅನ್ವಯಿಸುತ್ತದೆ. ನಿಶ್ಚಿತ ಠೇವಣಿಯಲ್ಲಿನ ಬಡ್ಡಿ ಗಳಿಕೆಗೆ ನಿಮ್ಮ ಆದಾಯ ತೆರಿಗೆ ಸ್ಲ್ಯಾಬ್ಗೆ ಅನುಗುಣವಾಗಿ ತೆರಿಗೆ ಕಟ್ಟಬೇಕಾಗುತ್ತದೆ. ತೆರಿಗೆ ಅಂತ ಬಂದಾಗ ಪಿಪಿಎಫ್ ಹೆಚ್ಚು ಅನುಕೂಲ ಒದಗಿಸುತ್ತದೆ.

ಲಾಕಿನ್ ಅವಧಿ: ಪಿಪಿಎಫ್ನಲ್ಲಿ ಖಾತೆ ಆರಂಭಿಸಿದ ದಿನದಿಂದ 15 ವರ್ಷಗಳ ಲಾಕಿನ್ ಅವಧಿ ಇರುತ್ತದೆ. ಆದರೆ, ನಿಶ್ಚಿತ ಠೇವಣಿಯಲ್ಲಿ ನಿಮಗೆ ಎಷ್ಟು ವರ್ಷಕ್ಕೆ ಅಗತ್ಯವೋ ಅಷ್ಟು ವರ್ಷಕ್ಕೆ ಡೆಪಾಸಿಟ್ ಮಾಡಲು ಅವಕಾಶ ಇರುತ್ತದೆ. ಒಂದೊಮ್ಮೆ ತುರ್ತಾಗಿ ಹಣದ ಅಗತ್ಯವಿದೆ ಎಂದಾದರೆ ನಗದೀಕರಣ ಸುಲಭ. ಫಿಕ್ಸೆಡ್ ಡೆಪಾಸಿಟ್ ಮುರಿದು ಹಣ ತೆಗೆದುಕೊಳ್ಳಬಹುದು. ಕೆಲ ವರ್ಷಗಳ ನಂತರ ನಿಮಗೆ ಹೂಡಿಕೆ ಮಾಡಿದ ಹಣದ ಅಗತ್ಯವಿದೆ ಎಂದಾದರೆ ಪಿಪಿಎಫ್ ಹೂಡಿಕೆ ನಿಮಗೆ ಒಪ್ಪುವುದಿಲ್ಲ. 15 ವರ್ಷದ ವರೆಗೆ ಹೂಡುತ್ತೇವೆ ಎನ್ನುವವರಿಗೆ ಮಾತ್ರ ಪಿಪಿಎಫ್ ಒಂದು ಉತ್ತಮ ಸುರಕ್ಷಿತ ಹೂಡಿಕೆಯ ಆಯ್ಕೆಯಾಗಿದೆ.

ಕನಿಷ್ಠ ಮತ್ತು ಗರಿಷ್ಠ ಹೂಡಿಕೆ: ಪಿಪಿಎಫ್ನಲ್ಲಿ ಒಂದು ವರ್ಷಕ್ಕೆ ಕನಿಷ್ಠ ₹500 ಹಾಗೂ ಗರಿಷ್ಠ ₹1.5 ಲಕ್ಷದ ವರೆಗೆ ಹೂಡಿಕೆ ಮಾಡಬಹುದು. ಆದರೆ, ನಿಶ್ಚಿತ ಠೇವಣಿಯಲ್ಲಿ ಇಂತಹ ಯಾವುದೇ ಮಿತಿಗಳಿಲ್ಲ. ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಶ್ಚಿತ ಠೇವಣಿ ಮೊತ್ತವನ್ನು ಪರಿಗಣಿಸಬಹುದು.

ಒಂದು ಕೋಟಿ, ಎರಡು ಕೋಟಿ ಅಥವಾ ಅದಕ್ಕಿಂತ ಹೆಚ್ಚು ಹೂಡಿಕೆ ಮಾಡಬೇಕು ಎಂದರೂ ಫಿಕ್ಸೆಡ್ನಲ್ಲಿ ಸಾಧ್ಯವಿದೆ. ನಿಮ್ಮ ಬಳಿ ಹೂಡಿಕೆಗೆ ದೊಡ್ಡ ಮೊತ್ತವಿದ್ದರೆ ಪಿಪಿಎಫ್ಗಿಂತ ಫಿಕ್ಸೆಡ್ ಸರಿ ಹೊಂದುತ್ತದೆ. ಅಗತ್ಯ ಎನಿಸಿದರೆ ಎರಡರಲ್ಲೂ ಹೂಡಿಕೆಯನ್ನು ಪರಿಗಣಸಬಹುದಾಗಿದೆ.

ಭರ್ಜರಿ ಜಿಗಿತ ಕಂಡ ಸೂಚ್ಯಂಕಗಳು

ಮೇ 16ಕ್ಕೆ ಕೊನೆಗೊಂಡ ವಾರದಲ್ಲಿ ಷೇರು ಸೂಚ್ಯಂಕಗಳು ಉತ್ತಮ ಗಳಿಕೆ ದಾಖಲಿಸಿವೆ. 82330 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 3.62ರಷ್ಟು ಗಳಿಸಿಕೊಂಡಿದೆ. 25019 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 4.21ರಷ್ಟು ಜಿಗಿದಿದೆ. ನಿಫ್ಟಿ ಮಿಡ್ಕ್ಯಾಪ್ ಸೂಚ್ಯಂಕ ಶೇ 7.21ರಷ್ಟು ಗಳಿಸಿಕೊಂಡಿದ್ದರೆ ಸ್ಮಾಲ್ಕ್ಯಾಪ್ ಸೂಚ್ಯಂಕ ಭರ್ಜರಿ ಶೇ 9.17ರಷ್ಟು ಹೆಚ್ಚಳ ದಾಖಲಿಸಿದೆ.

ವಿದೇಶಿ ಮತ್ತು ದೇಶೀಯ ಸಾಂಸ್ಥಿಕ ಹೂಡಿಕೆದಾರರಿಂದ ಖರೀದಿ ಉತ್ಸಾಹ ಕಚ್ಚಾ ತೈಲ ಬೆಲೆ ಇಳಿಕೆ ತಗ್ಗುತ್ತಿರುವ ಹಣದುಬ್ಬರ ಮತ್ತಷ್ಟು ಬಡ್ಡಿದರ ಇಳಿಕೆಯಾಗಲಿದೆ ಎಂಬ ವಿಶ್ವಾಸ ಅಮೆರಿಕ –ಚೀನಾ ಮತ್ತು ಭಾರತ– ಅಮೆರಿಕ ನಡುವಿನ ವ್ಯಾಪಾರ ಸಂಬಂಧ ಸುಧಾರಿಸಲಿದೆ ಎಂಬ ಆಶಾಭಾವ ಸೇರಿ ಹಲವು ಅಂಶಗಳು ಮಾರುಕಟ್ಟೆಯ ಸಕಾರಾತ್ಮಕತೆಗೆ ಕಾರಣವಾಗಿವೆ.

ವಲಯವಾರು ಪ್ರಗತಿಯಲ್ಲಿ ವಾರದ ಗಳಿಕೆ ನೋಡಿದಾಗ ನಿಫ್ಟಿ ಡಿಫೆನ್ಸ್ ಶೇ 11 ರಿಯಲ್ ಎಸ್ಟೇಟ್ ಶೇ 10.78 ಲೋಹ ಶೇ 9.28 ಎನರ್ಜಿ ಶೇ 6.98 ಆಟೊ ಶೇ 5.86 ಐ.ಟಿ ಶೇ 5.83 ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 5.78 ಫೈನಾನ್ಸ್ ಶೇ 3.81 ಸರ್ವಿಸ್ ಶೇ 3.73 ನಿಫ್ಟಿ ಬ್ಯಾಂಕ್ ಶೇ 3.28 ಫಾರ್ಮಾ ಶೇ 2.66 ಮತ್ತು ಎಫ್ಎಂಸಿಜಿ ಶೇ 2.57ರಷ್ಟು ಗಳಿಸಿಕೊಂಡಿವೆ.

ಏರಿಕೆ–ಇಳಿಕೆ: ವಾರದ ಲೆಕ್ಕಾಚಾರದಲ್ಲಿ ನೋಡಿದಾಗ ನಿಫ್ಟಿಯಲ್ಲಿ ಭಾರತ್ ಎಲೆಕ್ಟ್ರಾನಿಕ್ಸ್ ಶೇ 15.25 ಅದಾನಿ ಎಂಟರ್ ಪ್ರೈಸಸ್ ಶೇ 13.48 ಹೀರೊ ಮೋಟೊಕಾರ್ಪ್ ಶೇ 12.6 ಜಿಯೊ ಫೈನಾನ್ಶಿಯಲ್ ಶೇ 11.53 ಶ್ರೀರಾಮ್ ಫೈನಾನ್ಸ್ ಶೇ 10.67 ಬಜಾಜ್ ಆಟೊ ಶೇ 10.46 ಟಾಟಾ ಸ್ಟೀಲ್ ಶೇ 10.3 ಟ್ರೆಂಟ್ ಶೇ 9.27 ಎಟರ್ನಲ್ ಲಿಮಿಟೆಡ್ ಶೇ 8.28 ಟೆಕ್ ಮಹೀಂದ್ರ ಶೇ 8.23 ಅದಾನಿ ಪೋರ್ಟ್ಸ್ ಶೇ 7.63 ಮತ್ತು ಜೆಎಸ್ಡಬ್ಲ್ಯು ಸ್ಟೀಲ್ ಶೇ 7.04ರಷ್ಟು ಗಳಿಸಿಕೊಂಡಿವೆ. ಇಂಡಸ್ ಇಂಡ್ ಬ್ಯಾಂಕ್ ಶೇ 4.31 ಏರ್ಟೆಲ್ ಶೇ 1.93 ಸನ್ ಫಾರ್ಮಾ ಶೇ 0.66 ಕೋಟಕ್ ಮಹೀಂದ್ರ ಬ್ಯಾಂಕ್ ಶೇ 0.1ರಷ್ಟು ಕುಸಿದಿವೆ.

ಮುನ್ನೋಟ: ಈ ವಾರ ಪವರ್ ಗ್ರಿಡ್ ಡಿಎಲ್ಎಫ್ ಭಾರತ್ ಎಲೆಕ್ಚ್ರಾನಿಕ್ಸ್ ಕರೂರ್ ವೈಶ್ಯ ಬ್ಯಾಂಕ್ ಜೆ.ಕೆ. ಪೇಪರ್ ಡೂಡ್ಲಾ ಡೈರಿ ಬೋರೋಸಿಲ್ ಕಾವೇರಿ ಸೀಡ್ಸ್ ಕಂಪನಿ ಗುಜರಾತ್ ಗ್ಯಾಸ್ ಝೈಡಸ್ ವೆಲ್ನೆಸ್ ಯುನೈಟೆಡ್ ಸ್ಪಿರಿಟ್ಸ್ ಹಿಂಡಾಲ್ಕೋ ಇಂಡಸ್ಟ್ರೀಸ್ ಫೋರ್ಟಿಸ್ ಹೆಲ್ತ್ಕೇರ್ ಎನ್ಎಚ್ಪಿಸಿ ಎಚ್ಟಿ ಮಿಡಿಯಾ ಒಎನ್ಜಿಸಿ ರೈಲ್ ವಿಕಾಸ್ ನಿಗಮ್ ವಿಆರ್ಎಲ್ ಲಾಜಿಸ್ಟಿಕ್ಸ್ ಸ್ಟವ್ಕ್ರಾಫ್ಟ್ ಐಟಿಸಿ ಸನ್ ಫಾರ್ಮಾ ಅಶೋಕ್ ಲೇಲೆಂಡ್ ಜೆಎಸ್ಡಬ್ಲ್ಯು ಸ್ಟೀಲ್ ಜೆಕೆ ಸಿಮೆಂಟ್ಸ್ ಇಂಡಿಗೊ ಪೇಂಟ್ಸ್ ಸೇರಿ ಪ್ರಮುಖ ಕಂಪನಿ ತ್ರೈಮಾಸಿಕ ವರದಿ ಪ್ರಕಟಿಸುತ್ತಿವೆ. ಉಳಿದಂತೆ ಜಾಗತಿಕ ವಿದ್ಯಮಾನಗಳು ಹಾಗೂ ದೇಶೀಯ ಬೆಳವಣಿಗೆಗಳು ಷೇರುಪೇಟೆಯ ಮೇಲೆ ಪರಿಣಾಮ ಬೀರಲಿವೆ.

(ಲೇಖಕಿ: ಚಾರ್ಟರ್ಡ್ ಅಕೌಂಟೆಂಟ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.