ಗೃಹಸಾಲ ಪಡೆಯುವಾಗ ಮುಖ್ಯವಾಹಿನಿಯ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳು ನಿಮ್ಮ ಆದ್ಯತೆಯಾಗಲಿ. ಅಲ್ಲಿ ಸಾಲ ಸಿಗದಿದ್ದರೆ ಮಾತ್ರ ಎನ್‌ಬಿಎಫ್‌ಸಿಗಳ ಮೊರೆ ಹೋಗಿ. ಪ್ರಮುಖ ಬ್ಯಾಂಕ್‌ಗಳಲ್ಲಿ ಸಾಲ ಸಿಗುವ ಅರ್ಹತೆ ಇದ್ದರೂ ನೀವು ಎನ್‌ಬಿಎಫ್‌ಸಿಗಳ ಬಳಿ ಸಾಲಕ್ಕಾಗಿ ಮೊರೆ ಹೋದರೆ ಹೆಚ್ಚಿನ ಬಡ್ಡಿ ಕಟ್ಟಬೇಕಾಗಬಹುದು.