ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರುವನಂತಪುರದಿಂದ ಬೆಂಗಳೂರಿಗೆ ಪ್ರತಿನಿತ್ಯ 10 ವಿಮಾನ ಸಂಚಾರ

Published 25 ಮಾರ್ಚ್ 2024, 15:26 IST
Last Updated 25 ಮಾರ್ಚ್ 2024, 15:26 IST
ಅಕ್ಷರ ಗಾತ್ರ

ತಿರುವನಂತಪುರ: ತಿರುವನಂತರಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೇಸಿಗೆ ಅವಧಿಯಲ್ಲಿ ಪ್ರತಿನಿತ್ಯ 10 ವಿಮಾನಗಳು ಸಂಚರಿಸಲಿವೆ.

ಹೊಸ ವೇಳಾಪಟ್ಟಿಯ ಪ್ರಕಾರ ಬೆಂಗಳೂರು, ನವದೆಹಲಿ ಮತ್ತು ಹೈದರಾಬಾದ್‌ಗೆ ಹೆಚ್ಚುವರಿ ವಿಮಾನ ಸೇವೆಗಳು ಲಭ್ಯವಾಗಲಿವೆ. ಅಬುಧಾಬಿ, ದಮ್ಮಾಮ್, ಕುವೈತ್‌, ಕ್ವಾಲಾಲಂಪುರಕ್ಕೂ ಹೆಚ್ಚುವರಿ ಸೇವೆಗಳನ್ನು ಸಹ ಹೊಸ ವೇಳಾಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಪಟ್ಟಿಯಲ್ಲಿ ಹೊಸದಾಗಿ ಮಾಲ್ದೀವ್ಸ್‌ನ ಹನಿಮಾಧು ಸೇರ್ಪಡೆಯಾಗಿದೆ. ಈ ಬೇಸಿಗೆ ವೇಳಾಪಟ್ಟಿಯು ಮಾರ್ಚ್‌ 31ರಿಂದ ಅಕ್ಟೋಬರ್‌ 24ರವರೆಗೆ ಇರಲಿದೆ.

ಚಳಿಗಾಲದ ವೇಳಾ‍ಪಟ್ಟಿಗಿಂತ ಬೇಸಿಗೆ ಅವಧಿಯಲ್ಲಿ ವಿಮಾನ ಕಾರ್ಯಾಚರಣೆ ಶೇ 17ರಷ್ಟು ಹೆಚ್ಚಿರಲಿದೆ. ಚಳಿಗಾಲದಲ್ಲಿ ಒಟ್ಟು 612 ವಿಮಾನಗಳು ಕಾರ್ಯಾಚರಣೆ ನಡೆಸಿದ್ದವು. ಅದು ಈಗ 716ಕ್ಕೇರಲಿದೆ ಎಂದು ತಿರುವಂತನಪುರ ವಿಮಾನ ನಿಲ್ದಾಣ ಪ್ರಾಧಿಕಾರವು ಸೋಮವಾರ ತಿಳಿಸಿದೆ.

ಅಂತರರಾಷ್ಟ್ರೀಯ ವಿಮಾನಗಳು ಚಳಿಗಾಲದಲ್ಲಿ ವಾರಕ್ಕೆ 268 ಸಂಚಾರ ನಡೆಸಿದ್ದರೆ, ಬೇಸಿಗೆಯಲ್ಲಿ 324 ವಿಮಾನಗಳು ಸಂಚರಿಸಲಿವೆ. ಶೇ 21ರಷ್ಟು ಏರಿಕೆ ಆಗಲಿವೆ. ದೇಶೀಯ ವಿಮಾನಗಳ ಸಂಖ್ಯೆ 344ರಿಂದ 392ಕ್ಕೆ (ಶೇ 14) ಹೆಚ್ಚಳವಾಗಲಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT