ಬುಧವಾರ, ಜೂನ್ 3, 2020
27 °C

ಇಪಿಎಫ್‌ಒ: ₹3,360 ಕೋಟಿ ಹಿಂದೆ ಪಡೆದ ಸದಸ್ಯರು

ಪಿಟಿಐ Updated:

ಅಕ್ಷರ ಗಾತ್ರ : | |

Nirmala Sitharaman

ನವದೆಹಲಿ: ‘ಎರಡು ತಿಂಗಳ ಲಾಕ್‌ಡೌನ್‌ ಅವಧಿಯಲ್ಲಿ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) 12 ಲಕ್ಷ ಸದಸ್ಯರು ₹3,360 ಕೋಟಿ ಮೊತ್ತವನ್ನು ಹಿಂದಕ್ಕೆ ಪಡೆದಿದ್ದಾರೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌  ತಿಳಿಸಿದ್ದಾರೆ.

‘ಕೋವಿಡ್‌–19‘ ಪಿಡುಗಿನ ಸಂದರ್ಭದಲ್ಲಿ ಎದುರಾಗುವ ಹಣಕಾಸಿನ ತುರ್ತು ಅಗತ್ಯಗಳನ್ನು ಪೂರೈಸಿಕೊಳ್ಳಲು ಭವಿಷ್ಯ ನಿಧಿ ಖಾತೆಯಲ್ಲಿನ (ಪಿಎಫ್‌) ಹಣ ಹಿಂದೆ ಪಡೆಯಲು ಕಾರ್ಮಿಕ ಸಚಿವಾಲಯವು ವಿಶೇಷ ಸೌಲಭ್ಯ ಕಲ್ಪಿಸಿದೆ. 

ಇದರಡಿ ಸದಸ್ಯರು ತಮ್ಮ ‘ಪಿಎಫ್‌’ ಖಾತೆಯಲ್ಲಿನ ಶೇ 75ರಷ್ಟು ಇಲ್ಲವೇ ತಮ್ಮ ಮೂಲ ವೇತನ ಮತ್ತು ತುಟ್ಟಿ ಭತ್ಯೆಯ ಮೂರು ತಿಂಗಳ ಮೊತ್ತದಲ್ಲಿ ಯಾವುದು ಕಡಿಮೆ ಇರುವುದೋ ಅದನ್ನು ಹಿಂದೆ ಪಡೆಯಲು ಅವಕಾಶ ಕಲ್ಪಿಸಿಕೊಡಲಾಗಿದೆ. ಸದಸ್ಯರು ಈ ಮಿತಿಗಿಂತ ಕಡಿಮೆ ಮೊತ್ತಕ್ಕೂ ಅರ್ಜಿ ಸಲ್ಲಿಸಬಹುದಾಗಿದೆ. ಹೀಗೆ ಪಡೆದ ಮೊತ್ತವನ್ನು ಪಿಎಫ್‌ ಖಾತೆಗೆ ಮರುಪಾವತಿಸುವ ಅಗತ್ಯ ಇರುವುದಿಲ್ಲ. ಈ ಮೊತ್ತಕ್ಕೆ ಆದಾಯ ತೆರಿಗೆಯೂ ಅನ್ವಯವಾಗುವುದಿಲ್ಲ. ಹಣ ಹಿಂದೆ ಪಡೆಯಲು ಸದಸ್ಯರು ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಬಹುದಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು