ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಮುಂಚಿನ ಸ್ಥಿತಿಗೆ ವರಮಾನ: 82% ಕಂಪನಿಗಳ ನಿರೀಕ್ಷೆ

Last Updated 30 ಜುಲೈ 2020, 20:34 IST
ಅಕ್ಷರ ಗಾತ್ರ

ನವದೆಹಲಿ: ಮುಂದಿನ ವರ್ಷದಜೂನ್‌ ತಿಂಗಳಿಗೂ ಮೊದಲು ತಮ್ಮ ವರಮಾನವು ಕೋವಿಡ್–ಪೂರ್ವ ಸ್ಥಿತಿಗೆ ಮರಳಲಿದೆ ಎಂದು ಭಾರತದ ಶೇಕಡ 82ರಷ್ಟು ಕಂಪನಿಗಳು ವಿಶ್ವಾಸ ವ್ಯಕ್ತಪಡಿಸಿವೆ.

ಪಿಡಬ್ಲ್ಯುಸಿ ಇಂಡಿಯಾ ನಡೆಸಿರುವ ಸಮೀಕ್ಷೆಯಲ್ಲಿ ಈ ಮಾಹಿತಿ ಇದೆ. ಮುಖ್ಯ ಅನುಭವಿ ಅಧಿಕಾರಿಗಳು ಮತ್ತು ಆಡಳಿತ ಮಂಡಳಿಯ ಹಿರಿಯ ಸದಸ್ಯರು ತಮ್ಮ ಅಭಿಪ್ರಾಯ ನೀಡಿದ್ಧಾರೆ.

ಸಮೀಕ್ಷೆಯ ವಿವರ

225 -ಅಭಿಪ್ರಾಯ ನೀಡಿರುವ ಮುಖ್ಯ ಅನುಭವಿ ಅಧಿಕಾರಿಗಳು (ಸಿಎಕ್ಸ್‌ಒ)

ಜೂನ್‌ 17–ಜುಲೈ 10 -ಸಮೀಕ್ಷೆ ಕೈಗೊಂಡ ಅವಧಿ

73% -2020-21ರಲ್ಲಿ ವರಮಾನ ಕಡಿಮೆಯಾಗಲಿದೆ ಎಂದಿರುವ ಕಂಪನಿಗಳು

15% -ಮುಂದಿನ ಹಣಕಾಸು ವರ್ಷದಲ್ಲಿಯೂ ಕುಸಿತ ಮುಂದುವರಿಯಲಿದೆ ಎಂದಿರುವವರು

77% -ಡಿಜಿಟಲ್‌ ಅಳವಡಿಕೆಗೆ ವೇಗ ನೀಡಲು ಬಯಸಿರುವವರು

45% -ಸ್ವಾಧೀನಕ್ಕೆ ಉತ್ಸಾಹ ತೋರಿಸಿರುವ ಕಂಪನಿಗಳ ಪ್ರಮಾಣ

20% -ಪ್ರಮುಖವಲ್ಲದ ವಹಿವಾಟನ್ನು ಕೈಬಿಡಲು ಉದ್ದೇಶಿಸಿರುವವರು

26% -ಬಂಡವಾಳ ಸಂಗ್ರಹಕ್ಕೆ ಮುಂದಾಗಿರುವವರು

***

ಹೆಚ್ಚು ವರಮಾನ ನಷ್ಟ: ಮೂಲಸೌಕರ್ಯ, ರಿಯಲ್‌ ಎಸ್ಟೇಟ್‌, ಕೈಗಾರಿಕೆಗಳು, ರಿಟೇಲ್‌, ಆತಿಥ್ಯ, ಮನರಂಜನೆ

ನಷ್ಟಕ್ಕೆ ಕಾರಣಗಳು: ಬೇಡಿಕೆ ಕುಸಿತ, ಪೂರೈಕೆ ವ್ಯವಸ್ಥೆಗೆ ಅಡ್ಡಿ ಮತ್ತು ನಗದು ಬಿಕ್ಕಟ್ಟು

ಕಡಿಮೆ ಪರಿಣಾಮ: ತಂತ್ರಜ್ಞಾನ, ಆರೋಗ್ಯಸೇವೆ, ಔಷಧ, ದೂರಸಂಪರ್ಕ, ಗ್ರಾಹಕ ಬಳಕೆ ವಸ್ತುಗಳು

ಸವಾಲುಗಳು: ತೀವ್ರ ಸ್ಪರ್ಧೆ, ಗರಿಷ್ಠ ವೆಚ್ಚ, ಬಂಡವಾಳ ಸಂಗ್ರಹ

*****

ವಾಣಿಜ್ಯೋದ್ಯಮಿಗಳು ಈ ಅನಿಶ್ಚಿತ ಪರಿಸ್ಥಿತಿಗೆ ಹೊಂದಿಕೊಂಡಿದ್ದು, ವಹಿವಾಟು ಚೇತರಿಸಿಕೊಳ್ಳುವ ಆಶಾವಾದದಲ್ಲಿದ್ದಾರೆ

-ಸಂಜೀವ್‌ ಕೃಷ್ಣ

ಪಿಡಬ್ಲ್ಯುಸಿ ಇಂಡಿಯಾದ ಪಾಲುದಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT