ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಐ.ಟಿ. ಪೋರ್ಟಲ್‌: ಬಗೆಹರಿಯದ ತಾಂತ್ರಿಕ ಸಮಸ್ಯೆ

Last Updated 11 ಜುಲೈ 2021, 15:52 IST
ಅಕ್ಷರ ಗಾತ್ರ

ನವದೆಹಲಿ: ಆದಾಯ ತೆರಿಗೆ ವಿವರ ಸಲ್ಲಿಸಲು ಹೊಸ ಪೋರ್ಟಲ್‌ ಬಳಕೆಗೆ ಬಂದು ಒಂದು ತಿಂಗಳು ಕಳೆದರೂ ಅದರಲ್ಲಿನ ತಾಂತ್ರಿಕ ಸಮಸ್ಯೆಗಳು ಬಗೆಹರಿದಿಲ್ಲ ಎಂದು ಲೆಕ್ಕ ಪರಿಶೋಧಕರು ಹೇಳಿದ್ದಾರೆ.

ಆದಾಯ ತೆರಿಗೆ ಇಲಾಖೆಯಿಂದ ಬರುವ ನೋಟಿಸ್‌ಗಳಿಗೆ ‍ಪೋರ್ಟಲ್‌ ಮೂಲಕವೇ ಉತ್ತರ ನೀಡಲು ಆಗುತ್ತಿಲ್ಲ, ಡಿಜಿಟಲ್‌ ಸಹಿ ಪ್ರಮಾಣಪತ್ರ ಈಗಲೂ ಕಾರ್ಯನಿರ್ವಹಿಸುತ್ತಿಲ್ಲ. ವಿದೇಶದಲ್ಲಿರುವ ಕೆಲವು ಕಂಪನಿಗಳು ಲಾಗಿನ್‌ ಆಗುವಾಗ ಸಮಸ್ಯೆ ಎದುರಿಸುತ್ತಿವೆ ಎಂದೂ ತಿಳಿಸಿದ್ದಾರೆ.

ಹೊಸ ಜಾಲತಾಣ www.incometax.gov.inಗೆ ಜೂನ್‌ 7ರಂದು ಚಾಲನೆ ನೀಡಲಾಗಿತ್ತು. ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಜೂನ್‌ 22ರಂದು ಇನ್ಫೊಸಿಸ್‌ ತಂಡದೊಂದಿಗೆ ಸಭೆ ನಡೆಸಿದ್ದರು. ಆ ಬಳಿಕವೂ ಸಮಸ್ಯೆಗಳು ಮುಂದುವರಿದಿವೆ.

ಕೆಲವು ಸಮಸ್ಯೆಗಳು: ಹಿಂದಿನ ವರ್ಷಗಳ ಐ.ಟಿ. ರಿಟರ್ನ್ಸ್‌ ಸಲ್ಲಿಸಲು ಆಗುತ್ತಿಲ್ಲ. 2019–20 ಮತ್ತು ಅದಕ್ಕೂ ಹಿಂದಿನ ಅಂದಾಜು ವರ್ಷಗಳ ನೋಟಿಸ್‌ ಯು/ಎಸ್‌ 143 (1) ಡೌನ್‌ಲೋಡ್‌ ಆಗುತ್ತಿಲ್ಲ. ವಿವಾದ್ ಸೆ ವಿಶ್ವಾಸ್ ಯೋಜನೆಯ ಫಾರಂ–3 ಸಿಗುತ್ತಿಲ್ಲ.

ಹೊಸ ಪೋರ್ಟಲ್‌ನಿಂದಾಗಿ ರಿಟರ್ನ್ಸ್‌ ಸಲ್ಲಿಕೆ ಮತ್ತು ತೆರಿಗೆ ನಿರ್ವಹಣೆ ಇನ್ನಷ್ಟು ಸುಧಾರಣೆ ಆಗುವ ನಿರೀಕ್ಷೆ ಇದೆ. ಹೀಗಿದ್ದರೂ ಪೋರ್ಟಲ್‌ನಲ್ಲಿ ಪ್ರಮುಖ ತೊಂದರೆಗಳು ಇರುವುದರಿಂದ ತೆರಿಗೆ ಪಾವತಿದಾರರು ಮತ್ತು ತೆರಿಗೆ ವೃತ್ತಿಪರರು ಹೆಚ್ಚು ತೊಂದರೆ ಎದುರಿಸುವಂತಾಗಿದೆ ಎಂದು ಪಿಎಚ್‌ಡಿ ಛೇಂಬರ್‌ ಆಪ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರಿಯ ನೇರ ತೆರಿಗೆ ಸಮಿತಿಯ ಅಧ್ಯಕ್ಷ ಮುಕುಲ್‌ ಬಾಗ್ಲಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT