ಆಧಾರ್ ಮತ್ತು ಪ್ಯಾನ್ ಕಾರ್ಡ್ಗಳನ್ನು ಲಿಂಕ್ ಮಾಡುವುದಕ್ಕೆ ಡಿಸೆಂಬರ್ 31 ಕೊನೆಯ ದಿನವಾಗಿದೆ. ಒಂದು ವೇಳೆ ಆಧಾರ್–ಪ್ಯಾನ್ ಲಿಂಕ್ ಮಾಡಲು ವಿಫಲವಾದರೆ 2026ರ ಜನವರಿ 1ರಿಂದ ಹಣಕಾಸಿನ ವ್ಯವಹಾರದಲ್ಲಿ ಅಡಚಣೆ ಎದುರಿಸಬೇಕಾಗುತ್ತದೆ.

ಮುಖ್ಯವಾಗಿ ಐಟಿಆರ್ ಪಡೆಯಲು, ಸಲ್ಲಿಸಲು ಮತ್ತು ಹಣಕಾಸಿನ ವಹಿವಾಟುಗಳಲ್ಲಿ ತೊಂದರೆಯುಂಟಾಗುತ್ತದೆ. ಜತೆಗೆ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳಲಿದೆ. ಪ್ಯಾನ್ ಕಾರ್ಡ್ ಮರುಸಕ್ರಿಯಗೊಳಿಸಲು ₹1 ಸಾವಿರ ದಂಡವನ್ನೂ ಪಾವತಿಸಬೇಕಾಗುತ್ತದೆ.
.ಆಧಾರ್ ಜೊತೆ ಜೋಡಣೆ ಆಗದ ಪ್ಯಾನ್ 2023ರ ಮಾರ್ಚ್ ನಂತರ ನಿಷ್ಕ್ರಿಯ.
2024ರ ಅ.1ರ ಒಳಗೆ ಆಧಾರ್ ನೋಂದಣಿ ಮಾಡಿಸಿದ್ದವರು ಡಿ.31ರೊಳಗೆ ಲಿಂಕ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ. ನಿಮ್ಮ ಆಧಾರ್ ನೋಂದಣಿ ಐಡಿ ಆಧರಿಸಿಯೇ ಪ್ಯಾನ್ ಕಾರ್ಡ್ ನೀಡಲಾಗಿದೆಯಾದರೂ, ಅದು ಸಕ್ರಿಯವಾಗಿರಬೇಕಾದರೆ ಎರಡನ್ನೂ ಲಿಂಕ್ ಕಡ್ಡಾಯ.

ಆಧಾರ್–ಪ್ಯಾನ್ ಹೀಗೆ ಲಿಂಕ್ ಮಾಡಿ

ಅಧಿಕೃತ ಆದಾಯ ತೆರಿಗೆ ಪೋರ್ಟಲ್ಗೆ (https://www.incometax.gov.in/iec/foportal/) ಭೇಟಿ ಕೊಡಿ.

ಕ್ವಿಕ್ ಲಿಂಕ್ ಆಯ್ಕೆ ಮಾಡಿ, ಅದರಲ್ಲಿ ಲಿಂಕ್ ಆಧಾರ್ ಆಯ್ಕೆಯನ್ನು ಒತ್ತಿ.

ಆಧಾರ್ ಕಾರ್ಡ್ನಲ್ಲಿರುವಂತೆ ಹೆಸರು, ಸಂಖ್ಯೆ ಮತ್ತು ಪ್ಯಾನ್ ನಂಬರ್ ನಮೂದಿಸಿ.

ಆಧಾರ್ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನು ನಮೂದಿಸಿ.

ನಂತರ ವ್ಯಾಲಿಡೇಟ್ ಆಯ್ಕೆ ಕ್ಲಿಕ್ ಮಾಡಿ, ಅರ್ಜಿಯನ್ನು ಸಲ್ಲಿಕೆ ಮಾಡಿ. ಪರದೆಯ ಮೇಲೆ ದೃಢೀಕರಣ ಸಂದೇಶ ಕಾಣಿಸುತ್ತದೆ.

ನಂತರ 3–4 ದಿನಗಳಲ್ಲಿ ಪ್ರಕ್ರಿಯೆ ಪೂರ್ಣಗೊಂಡು ಆಧಾರ್ ಮತ್ತು ಪ್ಯಾನ್ ಲಿಂಕ್ ಆಗಿರುತ್ತದೆ.

ಈಗಾಗಲೇ ಲಿಂಕ್ ಆಗಿದ್ದರೆ ಹೀಗೆ ಪರಿಶೀಲಿಸಿ

ಆಧಾರ್ ಮತ್ತು ಪ್ಯಾನ್ ಲಿಂಕ್ ಆಗಿದೆಯೇ ಎಂದು ಪರಿಶೀಲಿಸಲು ಅಧಿಕೃತ ಆದಾಯ ತೆರಿಗೆ ಇ–ಫೈಲಿಂಗ್ ವೆಬ್ಸೈಟ್ಗೆ ಭೇಟಿ ಕೊಡಿ.

ಅಲ್ಲಿ ‘ಕ್ವಿಕ್ ಲಿಂಕ್’ ಅನ್ನು ಆಯ್ಕೆ ಮಾಡಿ. ನಂತರ ‘ಆಧಾರ್ ಸ್ಟೇಟಸ್’ ಮೇಲೆ ಕ್ಲಿಕ್ ಮಾಡಿ. ನಿಮ್ಮ ಪ್ಯಾನ್ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿ, ನಂತರ ‘ವೀವ್ ಲಿಂಕ್ ಆಧಾರ್ ಸ್ಟೇಟಸ್’ ಕ್ಲಿಕ್ ಮಾಡಿ. ನಿಮ್ಮ ಪ್ಯಾನ್ ಈಗಾಗಲೇ ಆಧಾರ್ನೊಂದಿಗೆ ಲಿಂಕ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರದೆ ಮೇಲೆ ನೋಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.