ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಿತ್ಯ ಬಿರ್ಲಾ ತೆಕ್ಕೆಗೆ ಟಿಸಿಎನ್‌ಎಸ್

Published 10 ಮೇ 2023, 2:15 IST
Last Updated 10 ಮೇ 2023, 2:15 IST
ಅಕ್ಷರ ಗಾತ್ರ

ಬೆಂಗಳೂರು: ಆದಿತ್ಯ ಬಿರ್ಲಾ ಫ್ಯಾಷನ್ ರಿಟೇಲ್‌ ಲಿಮಿಟೆಡ್ ಕಂಪನಿಯು ಟಿಸಿಎನ್‌ಎಸ್‌ ಕ್ಲೋದಿಂಗ್ ಕಂಪನಿಯ ಸ್ವಾಧೀನಕ್ಕೆ ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿಸಿದೆ. ಇದರ ಭಾಗವಾಗಿ ಆದಿತ್ಯ ಬಿರ್ಲಾ ಫ್ಯಾಷನ್ ರಿಟೇಲ್ ಲಿಮಿಟೆಡ್‌ ಕಂಪನಿಯು, ಟಿಸಿಎನ್‌ಎಸ್‌ನ ಶೇ 51ರಷ್ಟು ಷೇರುಗಳನ್ನು ತನ್ನದಾಗಿಸಿಕೊಳ್ಳಲಿದೆ.

ಈ ಸ್ವಾಧೀನವು ಅಂದಾಜು ₹ 1650 ಕೋಟಿ ಮೌಲ್ಯದ್ದಾಗಿರಲಿದೆ. ಇದು ದೇಶದ ಫ್ಯಾಷನ್ ಉದ್ಯಮದಲ್ಲಿ ಅತಿದೊಡ್ಡ ವಹಿವಾಟುಗಳಲ್ಲಿ ಒಂದಾಗಲಿದೆ ಎಂದು ಆದಿತ್ಯ ಬಿರ್ಲಾ ಫ್ಯಾಷನ್ ರಿಟೇಲ್‌ ಲಿಮಿಟೆಡ್‌ (ಎಬಿಎಫ್‌ಆರ್‌ಎಲ್‌) ಹೇಳಿದೆ.

‘ದೇಶದ ಗ್ರಾಹಕ ಅರ್ಥ ವ್ಯವಸ್ಥೆಯ ಶಕ್ತಿಯ ಮೇಲೆ ಆದಿತ್ಯ ಬಿರ್ಲಾ ಸಮೂಹ ಇರಿಸಿರುವ ಭರವಸೆಗೆ ಈ ಸ್ವಾಧೀನವು ಇನ್ನೊಂದು ನಿದರ್ಶನ. ಭಾರತವು ಬೇಡಿಕೆಯಲ್ಲಿ ಭಾರಿ ಬೆಳವಣಿಗೆ ಸಾಧಿಸುವ ಹಂತದಲ್ಲಿ ಇದೆ. ಎಬಿಎಫ್‌ಆರ್‌ಎಲ್‌ ಪಾಲಿಗೆ ಈ ಸ್ವಾಧೀನವು ಮೈಲಿಗಲ್ಲು ಇದ್ದಂತೆ’ ಎಂದು ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರ ಮಂಗಲಂ ಬಿರ್ಲಾ ಹೇಳಿದ್ದಾರೆ.

ಈ ಸ್ವಾಧೀನದ ನಂತರದ ಎಬಿಎಫ್‌ಆರ್‌ಎಲ್‌ ಕಂಪನಿಯ ಸಾಂಪ್ರದಾಯಿಕ ಉಡುಗೆಗಳ ವಹಿವಾಟು ಮೌಲ್ಯವು ಮುಂದಿನ ಮೂರು ವರ್ಷಗಳಲ್ಲಿ ₹ 5 ಸಾವಿರ ಕೋಟಿಗೆ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಪ್ರಕಟಣೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT