ಫ್ಲಿಪ್‌ಕಾರ್ಟ್‌ ಸ್ವಾಧೀನ ಸಮರ್ಥನೆ

7

ಫ್ಲಿಪ್‌ಕಾರ್ಟ್‌ ಸ್ವಾಧೀನ ಸಮರ್ಥನೆ

Published:
Updated:

ಬೆಂಗಳೂರು: ಭಾರತ ಸರ್ಕಾರದ ವಿದೇಶ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ನೀತಿಗೆ ಅನುಗುಣವಾಗಿಯೇ ಇ–ಕಾಮರ್ಸ್ ಸಂಸ್ಥೆ ಫ್ಲಿಪ್‌ಕಾರ್ಟ್‌ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಅಮೆರಿಕದ ರಿಟೇಲ್‌ ದೈತ್ಯ ಸಂಸ್ಥೆ  ವಾಲ್‌ಮಾರ್ಟ್‌ ಸಮರ್ಥಿಸಿಕೊಂಡಿದೆ.

ಈ ಒಪ್ಪಂದದ ವಿರುದ್ಧ ಅಖಿಲ ಭಾರತ ವರ್ತಕರ ಒಕ್ಕೂಟವು  (ಸಿಎಐಟಿ) ಸೋಮವಾರ ದೇಶದಾದ್ಯಂತ ಪ್ರತಿಭಟನೆಗೆ ಕರೆ ನೀಡಿತ್ತು. ಈ ಒಪ್ಪಂದ ರದ್ದುಪಡಿಸಬೇಕು,  ದೇಶಿ ಇ–ಕಾಮರ್ಸ್‌ ಮಾರುಕಟ್ಟೆಯ ನಿಯಂತ್ರಣಕ್ಕೆ ಪ್ರಾಧಿಕಾರ ರಚಿಸಬೇಕು ಎಂದು ಒಕ್ಕೂಟವು ಒತ್ತಾಯಿಸುತ್ತಿದೆ.

ಈ ಸ್ವಾಧೀನದಿಂದ ಭಾರತದಲ್ಲಿ ತಯಾರಿಕೆ ಚಟುವಟಿಕೆಗೆ ಭಾರಿ ಉತ್ತೇಜನ ದೊರೆಯಲಿದೆ. ಈ ಪಾಲುದಾರಿಕೆಯು ಎಸ್‌ಎಂಇಗಳು ಮತ್ತು ರೈತರಿಗೆ ನೆರವಾಗಲಿದೆ ಎಂದು ವಾಲ್‌ಮಾರ್ಟ್‌ ಹೇಳಿಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !