ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದಾನಿ ತೆಕ್ಕೆಗೆ ಜೆಪಿ ಸಮೂಹದ ಸಿಮೆಂಟ್‌ ಉದ್ದಿಮೆ?

Last Updated 10 ಅಕ್ಟೋಬರ್ 2022, 15:30 IST
ಅಕ್ಷರ ಗಾತ್ರ

ನವದೆಹಲಿ: ಸಾಲದ ಸುಳಿಯಲ್ಲಿ ಇರುವ ಜೈಪ್ರಕಾಶ್‌ ಸಮೂಹದ ಸಿಮೆಂಟ್‌ ಕಂಪನಿಗಳನ್ನು ₹5 ಸಾವಿರ ಕೋಟಿಗೆ ಖರೀದಿಸುವ ಕುರಿತಾಗಿ ಅದಾನಿ ಸಮೂಹವು ಮಾತುಕತೆ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ.

ಜೈಪ್ರಕಾಶ್‌ ಅಸೋಸಿಯೇಟ್ಸ್‌ನ ಆಡಳಿತ ಮಂಡಳಿಯ ಜೊತೆ ಅದಾನಿ ಸಮೂಹವು ಮಾತುಕತೆ ನಡೆಸುತ್ತಿದ್ದು, ಒಪ್ಪಂದದ ಕುರಿತು ಶೀಘ್ರವೇ ಘೋಷಣೆ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಕುರಿತು ಪ್ರತಿಕ್ರಿಯೆ ನೀಡಲು ಎರಡೂ ಸಮೂಹಗಳು ನಿರಾಕರಿಸಿವೆ.

ಸದ್ಯ, ಜೈಪ್ರಕಾಶ್‌ ಅಸೋಸಿಯೇಟ್ಸ್‌ ಲಿಮಿಟೆಡ್‌ ವಾರ್ಷಿಕ 60 ಲಕ್ಷ ಟನ್‌ ಮತ್ತು ಜೈಪ್ರಕಾಶ್‌ ಪವರ್ ವೆಂಚರ್ಸ್ ಲಿಮಿಟೆಡ್‌ ವಾರ್ಷಿಕ 40 ಲಕ್ಷ ಟನ್ ಸಿಮೆಂಟ್‌ ಉತ್ಪಾದನಾ ಸಾಮರ್ಥ್ಯ ಹೊಂದಿವೆ.

ಈ ಎರಡೂ ಕಂಪನಿಗಳು ತಮ್ಮ ಸಾಲದ ಹೊರೆಯನ್ನು ತಗ್ಗಿಸಿಕೊಳ್ಳಲು ಮುಂದಾಗಿದ್ದು, ಸಿಮೆಂಟ್ ವಹಿವಾಟಿನ ಜೊತೆಗೆ ಕೆಲವು ಪ್ರಮುಖವಲ್ಲದ ಆಸ್ತಿಗಳನ್ನು ಮಾರಾಟ ಮಾಡಲು ನಿರ್ಧರಿಸಿವೆ. ಈ ನಿರ್ಧಾರದಿಂದಾಗಿ ಜೈಪ್ರಕಾಶ್‌ ಅಸೋಸಿಯೇಟ್ಸ್‌ನ ಷೇರು ಬೆಲೆ ಸೋಮವಾರ ಶೇ 9.72ರಷ್ಟು ಹೆಚ್ಚಾಗಿ ₹ 11.74ಕ್ಕೆ ಮತ್ತು ಜೈಪ್ರಕಾಶ್‌ ಪವರ್ ವೆಂಚರ್ಸ್‌ನ ಷೇರುಬೆಲೆ ಶೇ 3.80ರಷ್ಟು ಹೆಚ್ಚಾಗಿ ₹ 8.46ಕ್ಕೆ ಏರಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT