ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದಾನಿ ಬಂದರು ಕಂಪನಿಗೆ ₹2,014 ಕೋಟಿ ಲಾಭ

Published 2 ಮೇ 2024, 14:08 IST
Last Updated 2 ಮೇ 2024, 14:08 IST
ಅಕ್ಷರ ಗಾತ್ರ

ನವದೆಹಲಿ: ಅದಾನಿ ಬಂದರು ಮತ್ತು ವಿಶೇಷ ಆರ್ಥಿಕ ವಲಯ ಕಂಪನಿಯು (ಎಪಿಎಸ್‌ಇಝಡ್‌) 2023–24ನೇ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹2,014 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹1,139 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಲಾಭದಲ್ಲಿ ಶೇ 77ರಷ್ಟು ಏರಿಕೆಯಾಗಿದೆ ಎಂದು ಕಂಪನಿಯು ಷೇರುಪೇಟೆಗೆ ತಿಳಿಸಿದೆ.

ವರಮಾನವು ₹6,178 ಕೋಟಿಯಿಂದ ₹7,199 ಕೋಟಿಗೆ ಹೆಚ್ಚಳವಾಗಿದೆ. ವೆಚ್ಚದಲ್ಲೂ ಏರಿಕೆಯಾಗಿದ್ದು, ₹3,995 ಕೋಟಿಯಿಂದ ₹4,450 ಕೋಟಿಗೆ ಮುಟ್ಟಿದೆ.

2023–24ನೇ ಪೂರ್ಣ ಆರ್ಥಿಕ ವರ್ಷದಲ್ಲಿ ₹8,103 ಕೋಟಿ ಲಾಭ ಗಳಿಸಿದೆ. ಹಿಂದಿನ ಆರ್ಥಿಕ ವರ್ಷದ ಇದೇ ಅವಧಿಗೆ ಹೋಲಿಸಿದರೆ ಲಾಭದಲ್ಲಿ ಶೇ 50ರಷ್ಟು ಏರಿಕೆಯಾಗಿದೆ. ಉತ್ತಮ ವಹಿವಾಟು, ಸರಕು ಸಾಗಣೆ ಹೆಚ್ಚಳದಿಂದಾಗಿ ಲಾಭದಲ್ಲಿ ಏರಿಕೆಯಾಗಿದೆ ಎಂದು ತಿಳಿಸಿದೆ. 

ಅದಾನಿ ಎಂಟರ್‌ಪ್ರೈಸಸ್ ಲಾಭ ಕುಸಿತ: 

ತಯಾರಿಕಾ ವೆಚ್ಚದ ಹೆಚ್ಚಳದಿಂದಾಗಿ ಅದಾನಿ ಎಂಟರ್‌ಪ್ರೈಸಸ್‌ ಲಿಮಿಟೆಡ್‌ ಲಾಭವು ಮಾರ್ಚ್‌ ತ್ರೈಮಾಸಿಕದಲ್ಲಿ ಶೇ 37ರಷ್ಟು ಕುಸಿದಿದೆ.

ಕೊನೆಯ ತ್ರೈಮಾಸಿಕದಲ್ಲಿ ₹450 ಕೋಟಿ ಲಾಭ ಗಳಿಸಿದೆ. ವರಮಾನವು ₹28,943 ಕೋಟಿಯಿಂದ ₹29,180 ಕೋಟಿಗೆ ಹೆಚ್ಚಳವಾಗಿದೆ. 2023–24ರ ಪೂರ್ಣ ಹಣಕಾಸು ವರ್ಷದ ಲಾಭದಲ್ಲಿ ಶೇ 31ರಷ್ಟು ಏರಿಕೆಯಾಗಿದ್ದು, ₹3,240 ಕೋಟಿ ಆಗಿದೆ ಎಂದು ಕಂಪನಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT