ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹1,618 ಕೋಟಿ ಸಾಲ ಮರುಪಾವತಿಸಲಿದೆ ಅದಾನಿ ಪೋರ್ಟ್ಸ್‌

Published 27 ಸೆಪ್ಟೆಂಬರ್ 2023, 13:06 IST
Last Updated 27 ಸೆಪ್ಟೆಂಬರ್ 2023, 13:06 IST
ಅಕ್ಷರ ಗಾತ್ರ

ನವದೆಹಲಿ: ಅದಾನಿ ಪೋರ್ಟ್ಸ್‌ ಆ್ಯಂಡ್‌ ಸ್ಪೆಷಲ್‌ ಎಕನಾಮಿಕ ಜೋನ್‌ ₹1,618 ಕೋಟಿ ಮೊತ್ತದ ಸಾಲವನ್ನು ಮುಂಚಿತವಾಗಿಯೇ ಪಾವತಿ ಮಾಡಲು ನಿರ್ಧರಿಸಿದೆ.

ಅಡಮಾನ ಇಟ್ಟಿರುವ ಬಾಂಡ್‌ ಅನ್ನು ₹1,618 ಕೋಟಿಗೆ ಅವಧಿಗೂ ಮುನ್ನವೇ ಮರಳಿ ಖರೀದಿಸಲಾಗುವುದು ಎಂದು ಷೇರುಪೇಟೆಗೆ ತಿಳಿಸಿದೆ. ಈ ಬಾಂಡ್‌ ಅವಧಿಯು 2024ಕ್ಕೆ ಕೊನೆಗೊಳ್ಳಲಿದೆ ಎಂದು ಕಂಪನಿ ತಿಳಿಸಿದೆ.

ಈ ನಿರ್ಧಾರದಿಂದಾಗಿ ಕಂಪನಿಯು ಒಟ್ಟು ಸಾಲವು ₹4,316 ಕೋಟಿ ಯಿಂದ ₹2,698 ಕೋಟಿಗೆ ಇಳಿಕೆಯಾಗಲಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT