ತಿರುವನಂತಪುರಂ: 'ವಿಝಿಂಜಂ' ಬಂದರಿನಲ್ಲಿ ನಡೆಯಲಿರುವ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿಗೆ ಅದಾನಿ ಪೋರ್ಟ್ಸ್ ಸುಮಾರು ₹ 16,000 ಕೋಟಿ ಹೂಡಿಕೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

ಎರಡನೇ ಹಂತದ ಅಭಿವೃದ್ಧಿ ಕಾಮಗಾರಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಇಂದು ಸಂಜೆ (ಶನಿವಾರ) ಚಾಲನೆ ನೀಡಲಿದ್ದಾರೆ. ಆ ಸಂದರ್ಭದಲ್ಲಿ ಅದಾನಿ ಪೋರ್ಟ್ಸ್ ಹೂಡಿಕೆ ಘೋಷಣೆಯಾಗಲಿದೆ ಎನ್ನಲಾಗಿದೆ.

ಅಭಿವೃದ್ಧಿ ಕಾಮಗಾರಿ ಬಳಿಕ, 'ವಿಝಿಂಜಂ' ದೇಶದ ಅತಿದೊಡ್ಡ ಸಾಗಣೆ ಕೇಂದ್ರವಾಗಲಿದೆ ಎಂದು ಅದಾನಿ ಪೋರ್ಟ್ಸ್ ಹಾಗೂ ಸ್ಪೆಷಲ್ ಎಕನಾಮಿಕ್ ಝೋನ್ ಲಿಮಿಟೆಡ್ (ಎಪಿಎಸ್ಇಝಡ್) ಅಂದಾಜಿಸಿವೆ.

'ವಿಝಿಂಜಂ', ಸದ್ಯ ದೇಶದ ಅತ್ಯಂತ ಮುಂದುವರಿದ ಹಾಗೂ ಸಂಪೂರ್ಣ ಸ್ವಯಂಚಾಲಿತ ಸಾಗಣೆ ವ್ಯವಸ್ಥೆ ಹೊಂದಿರುವ ಕೇಂದ್ರವಾಗಿದೆ. ಆದಾಗ್ಯೂ, ಎರಡನೇ ಹಂತದ ಅಭಿವೃದ್ಧಿ ಕಾಮಗಾರಿ ವೇಳೆ, ತಂತ್ರಜ್ಞಾನ ಹಾಗೂ ಉಪಕರಣಗಳನ್ನೂ ಮೇಲ್ದರ್ಜೆಗೇರಿಸಲಾಗುತ್ತದೆ.

ಕಾಮಗಾರಿ ವೇಳೆ, ಹಡಗಿನಿಂದ ತೀರಕ್ಕೆ ಸರಕು ಸಾಗಿಸುವ 21 ಸ್ವಯಂಚಾಲಿತ ಕ್ರೇನ್ಗಳು, 45 ಸ್ವಯಂಚಾಲಿತ ಕ್ಯಾಂಟಿಲಿವರ್ ರೈಲ್ ಮೌಂಟೆಡ್ ಗ್ರಾಂಟಿ ಕ್ರೇನ್ಗಳು, ಅತ್ಯಾಧುನಿಕ ವಿದ್ಯುತ್ ಹಾಗೂ ಯಾಂತ್ರೀಕೃತ ಘಟಕಗಳನ್ನು ಅಳವಡಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.