ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದಾನಿ ಸಮೂಹದಿಂದ ₹ 8.14 ಲಕ್ಷ ಕೋಟಿ ಹೂಡಿಕೆ

Last Updated 27 ಸೆಪ್ಟೆಂಬರ್ 2022, 14:04 IST
ಅಕ್ಷರ ಗಾತ್ರ

ನವದೆಹಲಿ: ಗೌತಮ್ ಅದಾನಿ ಮಾಲೀಕತ್ವದ ಅದಾನಿ ಸಮೂಹವು ಒಂದು ದಶಕದ ಅವಧಿಯಲ್ಲಿ ಒಟ್ಟು 100 ಬಿಲಿಯನ್ ಡಾಲರ್ (ಅಂದಾಜು ₹ 8.14 ಲಕ್ಷ ಕೋಟಿ) ಹೂಡಿಕೆ ಮಾಡಲಿದೆ. ಇದರಲ್ಲಿ ಹೆಚ್ಚಿನ ಪಾಲು ನವ ಇಂಧನಗಳಲ್ಲಿ, ದತ್ತಾಂಶ ಕೇಂದ್ರಗಳಲ್ಲಿ ಹೂಡಿಕೆ ಆಗಲಿದೆ.

ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಅವರು ಮಂಗಳವಾರ ಈ ವಿಷಯ ತಿಳಿಸಿದ್ದಾರೆ. ಈ ಹೂಡಿಕೆ ಮೊತ್ತದಲ್ಲಿ ಇಂಧನ ವಲಯದಲ್ಲಿ ಶೇಕಡ 70ರಷ್ಟು ಪಾಲನ್ನು ತೊಡಗಿಸಲಾಗುತ್ತದೆ ಎಂದು ಅವರು ಸಿಂಗಪುರದಲ್ಲಿ ನಡೆದ ಫೋಬ್ಸ್ ಜಾಗತಿಕ ಸಿಇಒ ಸಮಾವೇಶದಲ್ಲಿ ಹೇಳಿದ್ದಾರೆ.

ಅದಾನಿ ಸಮೂಹವು ತನ್ನ ಇಂಧನ ಉತ್ಪಾದನಾ ವಿಭಾಗದಲ್ಲಿ 45 ಗಿಗಾವಾಟ್‌ ಸಾಮರ್ಥ್ಯದ ಹೈಬ್ರಿಡ್, ನವೀಕರಿಸಬಹುದಾದ ವಿದ್ಯುತ್ ತಯಾರಿಕಾ ಘಟಕವನ್ನು ಆರಂಭಿಸಲಿದೆ. ಸೌರ ಫಲಕ, ಪವನ ವಿದ್ಯುತ್ ಟರ್ಬೈನ್ ಮತ್ತು ಹೈಡ್ರೊಜನ್ ಎಲೆಕ್ಟ್ರೊಲೈಸರ್ ತಯಾರಿಕೆಗೆ ಮೂರು ಗಿಗಾ ಫ್ಯಾಕ್ಟರಿಗಳನ್ನು ನಿರ್ಮಿಸಲಿದೆ.

ಅದಾನಿ ಸಮೂಹವು ಭಾರತದಲ್ಲಿ ವಿಮಾನ ನಿಲ್ದಾಣ ಹಾಗೂ ಬಂದರು ನಿರ್ವಹಣೆ ಮಾಡುವ ಅತಿದೊಡ್ಡ ಕಂಪನಿಯನ್ನು ಹೊಂದಿದೆ. ಅಲ್ಲದೆ, ದೇಶದಲ್ಲಿ ಅತಿಹೆಚ್ಚಿನ ಬಂಡವಾಳ ಮೌಲ್ಯದ ಎಫ್‌ಎಂಸಿಜಿ ಕಂಪನಿ ಕೂಡ ಅದಾನಿ ಸಮೂಹಕ್ಕೆ ಸೇರಿದೆ.

‘ಚೀನಾ ಏಕಾಂಗಿ’: ರಾಷ್ಟ್ರೀಯವಾದ ಹೆಚ್ಚುತ್ತಿರುವುದು, ಪೂರೈಕೆ ವ್ಯವಸ್ಥೆಯಲ್ಲಿ ಬದಲಾವಣೆ ಆಗಿರುವುದು ಮತ್ತು ತಂತ್ರಜ್ಞಾನದ ಮೇಲೆ ನಿರ್ಬಂಧಗಳನ್ನು ಹೇರಿರುವ ಕಾರಣದಿಂದಾಗಿ ಚೀನಾದ ಅರ್ಥ ವ್ಯವಸ್ಥೆಗೆ ಸಮಸ್ಯೆ ಎದುರಾಗಿದೆ, ಚೀನಾ ಇನ್ನಷ್ಟು ಏಕಾಂಗಿ ಆಗಲಿದೆ ಎಂದು ಅದಾನಿ ಭವಿಷ್ಯ ನುಡಿದಿದ್ದಾರೆ.

ಚೀನಾ ಆರಂಭಿಸಿರುವ ಬೆಲ್ಟ್‌ ಆ್ಯಂಡ್‌ ರೋಡ್‌ ಯೋಜನೆಗೆ ಹಲವು ದೇಶಗಳಿಂದ ಪ್ರತಿರೋಧ ವ್ಯಕ್ತವಾಗಿದೆ ಎಂದು ಅದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT