ಮುಂಬೈ: ಕೇಂದ್ರ ಸರ್ಕಾರವು ನೋಟು ರದ್ದತಿ ನಿರ್ಧಾರ ಕೈಗೊಂಡ ಐದು ವರ್ಷಗಳ ನಂತರವೂದೇಶದಲ್ಲಿ ನಗದು ಚಲಾವಣೆಯು ಹೆಚ್ಚುತ್ತಲೇ ಇದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಸಿದ್ಧಪಡಿಸಿರುವ ವರದಿಯೊಂದು ಹೇಳಿದೆ.

2016ರಲ್ಲಿ ನೋಟು ರದ್ದತಿ ಜಾರಿಗೊಳಿಸಿದಾಗ ನಗದು ಚಲಾವಣೆಯು ಶೇ 8.7ಕ್ಕೆ ಇಳಿಕೆ ಆಗಿತ್ತು. ಆ ಬಳಿಕ ಚಲಾವಣೆಯಲ್ಲಿ ಇರುವ ನೋಟುಗಳ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ ಚಲಾವಣೆಯಲ್ಲಿ ಇರುವ ನೋಟುಗಳ ಪ್ರಮಾಣವು ಶೇ 13.1ರಷ್ಟು ಆಗಿದೆ. 2019–20ನೇ ಹಣಕಾಸು ವರ್ಷದಲ್ಲಿ ಶೇ 14.5ರಷ್ಟಿತ್ತು. ಇದಕ್ಕೆ ಹೋಲಿಸಿದರೆ ಅಲ್ಪ ಇಳಿಕೆ ಕಂಡುಬಂದಿದೆ. ಕೋವಿಡ್ ಸಾಂಕ್ರಾಮಿಕದಿಂದಾಗಿ ಎದುರಾದ ಅಭದ್ರತೆ ಮತ್ತು ಅನಿಶ್ಚಿತ ವಾತಾವರಣದ ಕಾರಣಗಳಿಂದಾಗಿ ನೋಟುಗಳ ಚಲಾವಣೆಯಲ್ಲಿ ಅಲ್ಪ ಇಳಿಕೆ ಆಗಿರಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.

ಡಿಜಿಟಲ್ ವಹಿವಾಟು ಹೆಚ್ಚಳ: 2021ರ ಅಕ್ಟೋಬರ್‌ನಲ್ಲಿ ಡಿಜಿಟಲ್ ವಹಿವಾಟು ₹ 6.3 ಲಕ್ಷ ಕೋಟಿಗಳಷ್ಟು ಆಗಿದೆ. ಸೆಪ್ಟೆಂಬರ್‌ನಲ್ಲಿ ಇದ್ದ ಮೊತ್ತಕ್ಕೆ ಹೋಲಿಸಿದರೆ ಶೇ 100ರಷ್ಟು ಹೆಚ್ಚಳ ಆಗಿದೆ. 2020ರ ಅಕ್ಟೋಬರ್‌ಗೆ ಹೋಲಿಸಿದರೆ ಶೇ 103ರಷ್ಟು ಹೆಚ್ಚಳ ಕಂಡುಬಂದಿದೆ. ಯುಪಿಐ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಆಗಿರುವ ವರ್ಗಾವಣೆಯಲ್ಲಿಯೂ ಏರಿಕೆ ಕಂಡುಬಂದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.