ಹೈದರಾಬಾದ್: ಏರ್ ಇಂಡಿಯಾ ಎಕ್ಸ್ಪ್ರೆಸ್ಗಾಗಿಯೇ ತಯಾರಿಸಲಾದ ವಿಶಿಷ್ಟ ಒಳಾಂಗಣ ವ್ಯವಸ್ಥೆಯ ಬೋಯಿಂಗ್ 737–9 ವಿಮಾನವನ್ನು ಇಲ್ಲಿ ಮಂಗಳವಾರ ಲೋಕಾರ್ಪಣೆಗೊಳಿಸಲಾಯಿತು.

ಮಾರ್ಕ್ ವಿಟಿ –ಎಡಬ್ಲ್ಯುಎ ನೋಂದಣಿಯ ಈ ವಿಮಾನ ಸಂಪೂರ್ಣವಾಗಿ ಬೋಯಿಂಗ್ ವಿಮಾನ ಕಾರ್ಖಾನೆಯಲ್ಲೇ ತಯಾರಾಗಿದೆ. ಏರ್ ಇಂಡಿಯಾ ಸಂಸ್ಥೆಗಾಗಿ ತಯಾರಿಕಾ ಹಂತದಲ್ಲೇ ಪೂರ್ತಿ ಹೊಸತನದಿಂದ ವಿನ್ಯಾಸಗೊಳಿಸಲಾಗಿದೆ. ಅಮೆರಿಕದ ವಾಷಿಂಗ್ಟನ್ ಎವರೆಟ್ನಿಂದ ನಿರಂತರವಾಗಿ ಪ್ರಯಾಣಬೆಳೆಸಿ ನವದೆಹಲಿಯನ್ನು ತಲುಪಿರುವ ಈ ಹೊಸ ವಿಮಾನವು ಇದೇ 11ರಂದು ಏರ್ ಇಂಡಿಯಾ ತೆಕ್ಕೆಗೆ ಸೇರಿದೆ. ಫೆ 1ರಿಂದ ಮುಂಬೈ – ಫ್ರಾಂಕ್ಫರ್ಟ್ ನಡುವೆ ಹಾರಾಟ ನಡೆಸುವ ಮೂಲಕ ವಾಣಿಜ್ಯ ಸೇವೆಯನ್ನು ಆರಂಭಿಸಲಿದೆ.

ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಕ್ಯಾಂಬೆಲ್ ವಿಲ್ಸನ್, ‘ಮೂರು ವರ್ಷಗಳ ಹಿಂದೆ ಸಂಸ್ಥೆಯು 470 ವಿಮಾನಗಳ ಖರೀದಿಗಾಗಿ ಬೋಯಿಂಗ್ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಅದರ ಮೊದಲ ವಿಶಾಲ ವಿಮಾನ ಬೋಯಿಂಗ್ 787-9ರ ಸೇರ್ಪಡೆಯು ಏರ್ ಇಂಡಿಯಾದ ಐದು ವರ್ಷಗಳ ವಿಹಾನ್. ಎಐ ರೂಪಾಂತರ ಕಾರ್ಯಕ್ರಮದ ಮಹತ್ವದ ಕ್ಷಣ. ಖಾಸಗೀಕರಣದ ಬಳಿಕ ಏರ್ ಇಂಡಿಯಾ ಬಳಗಕ್ಕೆ ಸುಮಾರು 100 ಹೊಸ ವಿಮಾನಗಳು ಸೇರ್ಪಡೆಯಾಗಿವೆ. ಆದರೆ ಇದು ಏರ್ ಇಂಡಿಯಾಕ್ಕಾಗಿಯೇ ವಿಶಿಷ್ಟವಾಗಿ ವಿನ್ಯಾಸಗೊಂಡ ಮೊದಲ ಐಷಾರಾಮಿ ವಿಮಾನ. ಪ್ರಯಾಣಿಕರಿಗೆ ವಿಶ್ವದರ್ಜೆಯ ವೈಮಾನಿಕ ಸೇವೆ ಹಾಗೂ ವಿಮಾನಯಾನದ ವೇಳೆ ನಮ್ಮ ಸಿಬ್ಬಂದಿ ಒದಗಿಸುತ್ತಿರುವ ಭಾರತೀಯ ಶೈಲಿಯ ಆದರಾತಿಥ್ಯಕ್ಕೆ ಪೂರಕವಾಗಿ ಮನರಂಜನೆಯನ್ನೂ ಒದಗಿಸುವ ಏರ್ ಇಂಡಿಯಾದ ಬದ್ಧತೆಯ ಪ್ರತೀಕವಿದು’ ಎಂದರು.

‘ಈ ವಿಮಾನದ ಒಳಾಂಗಣ ವಿನ್ಯಾಸವನ್ನು ಏರ್ ಇಂಡಿಯಾದ ಎಲ್ಲ ಬೋಯಿಂಗ್ 787 ವಿಮಾನಗಳಲ್ಲೂ ಅಳವಡಿಸಲಾಗುತ್ತದೆ. ಇಂತಹದ್ದೇ ಇನ್ನೂ 19 ವಿಮಾನಗಳು ತಯಾರಾಗುತ್ತಿವೆ. ಏರ್ ಇಂಡಿಯಾವು ಈಗಾಗಲೇ ಹೊಂದಿರುವ ಎಲ್ಲ 26 ಬೋಯಿಂಗ್ 787-8 ವಿಮಾನಗಳಲ್ಲೂ ಇಂತಹದ್ದೇ ಒಳಾಂಗಣ ವಿನ್ಯಾಸ ಹಾಗೂ ಮನರಂಜನಾ ವ್ಯವಸ್ಥೆ ಅಳವಡಿಸಲಾಗುತ್ತದೆ. ಮೊದಲ ನವೀಕೃತ ವಿಮಾನವು ಮುಂದಿನವಾರ ತಲುಪಲಿದೆ. ಇನ್ನುಳಿದ ವಿಮಾನಗಳ ನವೀಕರಣ 2027ರ ಮಧ್ಯ ಭಾಗದಲ್ಲಿ ಪೂರ್ಣಗೊಳ್ಳಲಿದೆ’ ಎಂದರು.

ಐಷಾರಾಮಿ ವಿಮಾನದಲ್ಲಿ 296 ಆಸನಗಳು:

ಏರ್ ಇಂಡಿಯಾದ ಹೊಸ ಬೋಯಿಂಗ್ 787-9 ವಿಮಾನದಲ್ಲಿ ಬ್ಯುಸಿನೆಸ್, ಪ್ರೀಮಿಯಂ ಎಕಾನಮಿ ಹಾಗೂ ಎಕಾನಮಿ ಎಂಬ ಮೂರು ಕ್ಯಾಬಿನ್ ದರ್ಜೆಗಳಿದ್ದು ಒಟ್ಟು 296 ಆಸನಗಳಿವೆ. ಈ ಆಸನಗಳನ್ನು ಥೇಲ್ಸ್ನ ಅತ್ಯಾಧುನಿಕ ಅವಂತ್ ವಿಮಾನದ ಒಳಾಂಗಣ ಮನರಂಜನಾ ವ್ಯವಸ್ಥೆಗಳನ್ನು ಹೊಂದಿವೆ. ಬ್ಯುಸಿನೆಸ್ ದರ್ಜೆಯಲ್ಲಿ 1–2–1 ವಿನ್ಯಾಸದ ಐಷಾರಾಮಿ ಆಸನ ವ್ಯವಸ್ಥೆ ಇದೆ. ಈ ದರ್ಜೆಯ ಪ್ರಯಾಣಿಕರಿಗೆ ಪ್ರತ್ಯೇಕ ಪ್ರವೇಶಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಯಾಣಿಕರ ಖಾಸಗಿತನ ಒದಗಿಸಲು ಅವರು ಕೂರುವ ಜಾಗದಲ್ಲಿ ಜಾರುವ ಬಾಗಿಲು ಕಲ್ಪಿಸಲಾಗಿದೆ. ಮಲಗುವುದಕ್ಕೂ ಅವಕಾಶವಿರುವಂತೆ ರೂಪಿಸಿರುವ 79 ಇಂಚು ಉದ್ದದ ಆಸನವಿದೆ. ಕುಳಿತು ಕಾಲು ಚಾಚುವುದಕ್ಕೂ 42 ಇಂಚುಗಳಷ್ಟು ಸ್ಥಳಾವಕಾಶ ಸಿಗುತ್ತದೆ. 17-ಇಂಚಿನ 4 ಕೆ ರೆಸಲ್ಯೂಷನ್ನ ಕ್ಯುಎಲ್ಇಡಿ ಎಚ್ಡಿಆರ್ ಟಚ್ಸ್ಕ್ರೀನ್ ಮತ್ತು ಒಳಾಂಗಣ ಮನರಂಜನಾ ವ್ಯವಸ್ಥೆಯ ಹ್ಯಾಂಡ್ಸೆಟ್, ಬ್ಲೂಟೂತ್ ಹೆಡ್ಫೋನ್ ಪೇರಿಂಗ್, ವೈರ್ಲೆಸ್ ಚಾರ್ಜಿಂಗ್ ಸೌಕರ್ಯವಿದೆ. ಎತ್ತರವನ್ನು ಹೊಂದಿಸಬಹುದಾದ ಆರ್ಮ್ರೆಸ್ಟ್ ಮತ್ತು ಬ್ಯಾಗ್ಗಳನ್ನು ಇಡಲು ಸಾಕಷ್ಟು ಸ್ಥಳಾವಕಾಶ ಇದರಲ್ಲಿದೆ. ಮಂದ ಬೆಳಕಿನ ವ್ಯವಸ್ಥೆ ಇರುವ ಸ್ಟೋರೇಜ್ ಸ್ಪೇಸ್, ವ್ಯಾನಿಟಿ ಮಿರರ್ ಮತ್ತು ಹೆಡ್ಫೋನ್ ಕೊಂಡಿ, ಏರ್ ಇಂಡಿಯಾದ ಜಾಲಿ ಪ್ಯಾಟರ್ನ್ನಿಂದ ಪ್ರೇರಿತ ಫೀಚರ್ ಲ್ಯಾಂಪ್ ಇದೆ. ಭಾರತದ ಶ್ರೀಮಂತ ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ಪರಂಪರೆಯಿಂದ ಸ್ಫೂರ್ತಿ ಪಡೆದು ಇದನ್ನು ರೂಪಿಸಲಾಗಿದೆ ಎಂದು ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದರು.

‘ಪ್ರೀಮಿಯಂ ಎಕಾನಮಿ ದರ್ಜೆಯಲ್ಲಿ ಹೆಚ್ಚಿನ ಖಾಸಗಿತನವನ್ನು ಒದಗಿಸುವ ಕ್ಯಾಬಿನ್ ಇದ್ದು, ಇದರಲ್ಲಿ 2-3-2 ವಿನ್ಯಾಸದಲ್ಲಿ 28 ಆಸನಗಳಿವೆ. ಪ್ರತಿಯೊಂದು ಆಸನದಲ್ಲೂ ಕಾಲು ಚಾಚಲು 38-ಇಂಚು ಸ್ಥಳಾವಕಾಶ ಕಲ್ಪಿಸಲಾಗಿದೆ. 7 ಇಂಚುಗಳನ್ನು ಹಿಂದಕ್ಕೆ ಬಾಗುವ, ಹೊಂದಿಕೊಳ್ಳುವಂತೆ ಮಾಡಬಲ್ಲ ಹೆಡ್ ರೆಸ್ಟ್ ಹಾಗೂ ಕಾಲಿಡುವ ಸೌಕರ್ಯಗಳಿವೆ. 13.3-ಇಂಚಿನ 4 ಕೆ ರೆಸಲ್ಯೂಷನ್ನ ಕ್ಯುಎಲ್ಇಡಿ ಎಚ್ಡಿಆರ್ ಟಚ್ಸ್ಕ್ರೀನ್ ಒದಗಿಸಲಾಗಿದೆ.’

‘ಎಕಾನಮಿ ದರ್ಜೆಯಲ್ಲಿ 3-3-3 ವಿನ್ಯಾಸದ, ಸುರಕ್ಷಿತ ಹಗೂ ಆರಾಮದಾಯಕವಾದ 238 ಆಸನಗಳಿವೆ. ಸೀಟುಗಳನಡುವೆ ಕಾಲು ಚಾಲು 31/32 ಇಂಚುಗಳಷ್ಟಯ ಸ್ಥಳಾವಕಾಶ ಕಲ್ಪಿಸಲಾಗಿದೆ. 11.6-ಇಂಚಿನ 4 ಕೆ ರೆಸಲ್ಯೂಷನ್ನ ಕ್ಯುಎಲ್ಇಡಿ ಎಚ್ಡಿಆರ್ ಟಚ್ಸ್ಕ್ರೀನ್ ಹೊಂದಿದೆ. ಮೂರೂ ದರ್ಜೆಯ ಕ್ಯಾಬಿನ್ಗಳಲ್ಲೂ ಟೈಪ್ ಎ ಮತ್ತು ಟೈಪ್ ಸಿ ಫಾಸ್ಟ್ ಚಾರ್ಜಿಂಗ್ ಪೋರ್ಟ್ಗಳು ಲಭ್ಯ.’ ಎಂದು ಮಾಹಿತಿ ನೀಡಿದರು.

ಏರ್ ಇಂಡಿಯಾ ಹೊಸ ಬಿ 787-9 ವಿಮಾನದ ಒಳಾಂಗಣವು ಅತ್ಯಾಧುನಿಕ ಜೆಪಿಎ ವಿನ್ಯಾಸದಲ್ಲಿ ರೂಪಿಸಲಾಗಿದ್ದು, ಇದು ಜಾಗತಿಕ ಬ್ರ್ಯಾಂಡ್ ಆಗಿ ಏರ್ ಇಂಡಿಯಾದ ಹೆಗ್ಗುರುತಿನ ಪ್ರತೀಕದಂತಿದೆ. ಪ್ರಾಚೀನ ಭಾರತೀಯ ಆರೋಗ್ಯ ಸಂಪ್ರದಾಯಗಳಿಂದ ಪ್ರೇರಿತವಾದ ಹಾಗೂ ದೇಹದಲ್ಲಿ ಭೌತಿಕ, ಮಾನಸಿಕ ಮತ್ತು ಭಾವನಾತ್ಮಕ ಸಮತೋಲನ ಕಾಯ್ದುಕೊಳ್ಳಲು ನೆರವಾಗುವ ಪ್ರಾಚೀನ ಚಕ್ರಗಳ ಪರಿಕಲ್ಪನೆಯ ಮೂಡ್ ಲೈಟಿಂಗ್ ಇದರ ಇನ್ನೊಂದು ವಿಶೇಷ. ಹಗಲು ರಾತ್ರಿಗಳ ಲಯಕ್ಕೆ ಅನುಗುಣವಾಗಿ ದೇಹದಲ್ಲಿ ಮೆಲಟೋನಿನ್ ನಿಯಂತ್ರಣಕ್ಕೆ ಸಹಾಯ ಮಾಡುವವಿಶಿಷ್ಟ ವಾತಾವರಣಗಳನ್ನು ಕಟ್ಟಿಕೊಡುವ ಮೂಲಕ ಇದು ಹಿತಾನುಭವವವನ್ನು ಒದಗಿಸುತ್ತದೆ ಎಂದು ಏರ್ ಇಂಡಿಯಾ ಸಿಬ್ಬಂದಿ ವಿವರಿಸಿದರು.

‘ವಿಂಗ್ಸ್ ಇಂಡಿಯಾ 2026‘ ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸಲು ಈ ವಿಮಾನವು ದೆಹಲಿಯಿಂದ ಹೈದರಾಬಾದ್ನ ಬೇಗಂಪೇಟ್ ವಿಮಾನ ನಿಲ್ದಾಣಕ್ಕೆ ಮಂಗಳವಾರ ಪ್ರಯಾಣಿಕರೊಂದಿಗೆ ತನ್ನ ಚೊಚ್ಚಲ ಪ್ರಯಾಣ ಬೆಳೆಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.