₹ 21 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲಿರುವ ಏರ್ಟೆಲ್

ನವದೆಹಲಿ: ಹಾಲಿ ಷೇರುದಾರರಿಗೆ ವಿಶೇಷ ಬೆಲೆಗೆ ಷೇರುಗಳ ಮಾರಾಟದ ಮೂಲಕ ಒಟ್ಟು ₹ 21 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ಭಾರ್ತಿ ಏರ್ಟೆಲ್ ಆಡಳಿತ ಮಂಡಳಿಯು ಭಾನುವಾರ ಒಪ್ಪಿಗೆ ನೀಡಿದೆ.
ಈ ಕ್ರಮವು ಏರ್ಟೆಲ್ ಕಂಪನಿಗೆ ದೂರಸಂಪರ್ಕ ಕ್ಷೇತ್ರದಲ್ಲಿನ ಸ್ಪರ್ಧೆ ಎದುರಿಸಲು ದೊಡ್ಡ ಮಟ್ಟದಲ್ಲಿ ನೆರವು ನೀಡಲಿದೆ ಎನ್ನಲಾಗಿದೆ. ಭಾರ್ತಿ ಏರ್ಟೆಲ್ನಲ್ಲಿ ಪ್ರವರ್ತಕರು ಶೇ 55.8ರಷ್ಟು, ಸಾರ್ವಜನಿಕರು ಶೇ 44.09ರಷ್ಟು ಷೇರುಗಳನ್ನು ಹೊಂದಿದ್ದಾರೆ.
ಏರ್ಟೆಲ್ ಕಂಪನಿಯು ಭಾರತದ ಎರಡನೆಯ ಅತಿದೊಡ್ಡ ಮೊಬೈಲ್ ಸೇವಾ ಕಂಪನಿ. ಜೂನ್ ವೇಳೆಗೆ ಈ ಕಂಪನಿಯು 35.2 ಕೋಟಿ ಗ್ರಾಹಕರನ್ನು ಹೊಂದಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.