ಸೋಮವಾರ, ಜನವರಿ 20, 2020
27 °C

ಏರ್‌ಟೆಲ್‌ ₹ 279ರ ಹೊಸ ಪ್ಲಾನ್‌; 84 ದಿನಗಳಿಗೆ ₹ 379

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

Airtel New plans

ಬೆಂಗಳೂರು: ತೀವ್ರ ಪೈಪೋಟಿ ಹಾಗೂ ನಷ್ಟದ ಸುಳಿಯಲ್ಲಿರುವ ಭಾರತದ ದೂರಸಂಪರ್ಕ ಸೇವಾದಾರ ಸಂಸ್ಥೆಗಳು ದರ ಹೆಚ್ಚಿಸಿದ ಬೆನ್ನಲೇ ಗ್ರಾಹಕರನ್ನು ಕಳೆದುಕೊಳ್ಳುವ ಆತಂಕವನ್ನೂ ಎದುರಿಸಿವೆ. ಬಳಕೆದಾರರಿಗೆ ಹೊರೆಯಾಗದಂತಹ ಹಾಗೂ ಹಲವು ಕೊಡುಗೆಗಳನ್ನು ಒಳಗೊಂಡ ಪ್ಲಾನ್‌ಗಳನ್ನು ಪರಿಚಯಿಸುತ್ತಿವೆ. ಭಾರ್ತಿ ಏರ್‌ಟೆಲ್ ₹ 279 ಮತ್ತು ₹ 379ರ ಪ್ಲಾನ್‌ಗಳನ್ನು ಪರಿಚಯಿಸಿದೆ. 

₹ 279ರ ಪ್ರಿ‍ಪೇಯ್ಡ್‌ ಪ್ಲಾನ್‌ ರಿಚಾರ್ಜ್‌ ಮಾಡಿಸಿದರೆ ನಿತ್ಯ 1.5 ಜಿಬಿ ಹೈಸ್ಪೀಡ್‌ ಡೇಟಾ ಸಿಗಲಿದೆ. ಇದರೊಂದಿಗೆ ನಿತ್ಯ 100 ಎಸ್‌ಎಂಎಸ್‌ ಹಾಗೂ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆ ಸೌಲಭ್ಯ 28 ದಿನಗಳ ವರೆಗೂ ಇರಲಿದೆ. 

ಕರೆ, ಹೈಸ್ಫೀಡ್‌ ಡೇಟಾ, ಎಸ್‌ಎಂಎಸ್‌ ಸಂದೇಶ ಅವಕಾಶಗಳೊಂದಿಗೆ ವಿಂಕ್‌ ಮ್ಯೂಸಿಕ್‌ ಮತ್ತು ಎಕ್ಸ್‌ಸ್ಟ್ರೀಮ್‌ ಆ್ಯಪ್‌ಗಳ ಕೊಡುಗೆ ಸಿಗಲಿದೆ. ₹ 4 ಲಕ್ಷ ಮೊತ್ತದ ಎಚ್‌ಡಿಎಫ್‌ ಲೈಫ್‌  (ಟರ್ಮ್‌) ಇನ್‌ಶ್ಯುರೆನ್ಸ್‌, ಷಾ ಅಕಾಡೆಮಿ ವೆಬ್‌ಸೈಟ್‌ನಲ್ಲಿ ನಾಲ್ಕು ವಾರಗಳ ಕೋರ್ಸ್‌ ಉಚಿತವಾಗಿ ಪಡೆಯಬಹುದು. ಫಾಸ್‌ಟ್ಯಾಗ್‌ ಖರೀದಿಸುವವರಿಗೆ ₹ 100 ಕ್ಯಾಷ್‌ಬ್ಯಾಕ್‌ ಸಿಗಲಿದೆ. 

84 ದಿನಗಳ ಹೊಸ ಪ್ಲಾನ್‌: ₹ 379ರ ಪ್ರಿಪೇಯ್ಡ್‌ ರಿಚಾರ್ಜ್‌ ಮಾಡಿಸುವವರು 84 ದಿನಗಳ ವರೆಗೆ ಏರ್‌ಟೆಲ್‌ ಸೌಲಭ್ಯಗಳನ್ನು ಪಡೆಯಬಹುದು. ಅನಿಯಮಿತ ಕರೆ, ಒಟ್ಟು 900 ಎಸ್‌ಎಂಎಸ್‌ ಸಂದೇಶಗಳು ಹಾಗೂ 6 ಜಿಬಿ ಹೈಸ್ಫೀಡ್‌ ಡೇಟಾ ಸಿಗಲಿದೆ. ಉಳಿದಂತೆ ವಿಂಕ್‌ ಮ್ಯೂಸಿಕ್‌, ಏರ್‌ಟೆಲ್‌ ಎಕ್ಸ್‌ಸ್ಟ್ರೀಮ್‌ ಆ್ಯಪ್‌, ಷಾ ಅಕಾಡೆಮಿಯ 4 ವಾರದ ಕೋರ್ಸ್‌ ಅವಕಾಶ ಹಾಗೂ ಫಾಸ್‌ಟ್ಯಾಗ್‌ ಖರೀದಿ ಮೇಲೆ ₹ 100 ಕ್ಯಾಷ್‌ಬ್ಯಾಕ್‌ ಪಡೆಯಬಹುದಾಗಿದೆ.

ಕಂಪನಿಯ ಸೇವೆಗಳನ್ನು ಪಡೆದುಕೊಳ್ಳಲು ಪ್ರತಿ 28 ದಿನಗಳಿಗೊಮ್ಮೆ ₹ 45 ರಿಚಾರ್ಜ್ ಮಾಡಿಸುವುದು ಕಡ್ಡಾಯವಾಗಿದೆ. ಕನಿಷ್ಠ ರೀಚಾರ್ಜ್‌ ದರವನ್ನು ₹ 23 ರಿಂದ ₹ 45ಕ್ಕೆ ಏರಿಕೆ ಮಾಡಲಾಗಿದೆ. ಅವಧಿಯೊಳಗೆ ರಿಚಾರ್ಜ್‌ ಮಾಡಲು ವಿಫಲವಾದರೆ, 15 ದಿನಗಳ ಹೆಚ್ಚುವರಿ ಅವಧಿಯಲ್ಲಿ ಕೆಲವೇ ಪ್ರಯೋಜನಗಳು ಮಾತ್ರವೇ ಸಿಗಲಿವೆ. ಅದನ್ನೂ ಕಂಪನಿಯೇ ನಿರ್ಧರಿಸಲಿದೆ. ಆ ಅವಧಿಯಲ್ಲಿಯೂ ರಿಚಾರ್ಜ್‌ ಮಾಡದೇ ಇದ್ದರೆ ಎಲ್ಲಾ ಸೇವೆಗಳನ್ನು ಅಮಾನತುಗೊಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು